ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕರ್ನಾಟಕ ಸರ್ಕಾರ ಹಾಗೂ ಕಣ್ವ ಪ್ರಕಾಶನ ಮತ್ತು ಸನ್ಮತಿ ಸಾಹಿತ್ಯ ಪೀಠದ ಸಹ ಯೋಗದದಲ್ಲಿ ಡಾ ಗೋವಿಂದ್ ಸ್ವಾಮಿ ಅಧಿಕಾರ ವಹಿಸಿದ ನಂತರ ಮೊದಲ ಕಾರ್ಯಕ್ರಮವಾಗಿ ಡಾ ಕೆಬಿ ಪವಾರ್ ಅವರ ಕೊಳ್ಳ ಹಾಗೂ ಬಂಜಾರ ಮತ್ತು ಜಿಪ್ಸಿ ,'ಕೃತಿಗಳ ಲೋಕಾರ್ಪಣೆಯನ್ನು ಬಿ ಎಂ ಶ್ರೀ ಪ್ರತಿಷ್ಠಾನದಲ್ಲಿ ನಾಡೋಜಡಾ ಬರಗುರು ರಾಮಚಂದ್ರಪ್ಪ ಲೋಕಾರ್ಪಣೆ ಮಾಡಿದರು.
ಸಮಾರಂಭದ ಅಧ್ಯಕ್ಷತೆ ಡಾ ಎ ಆರ್ ಗೋವಿಂದ ಸ್ವಾಮಿ, ಅಧ್ಯಕ್ಷರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವಹಿಸಿದ್ದರು ಕೃತಿಗಳ ಕುರಿತು ಲೇಖಕರಾದ ಆರ್ ಜಿ ಹಳ್ಳಿ ನಾಗರಾಜ್ ಹಾಗು ಪ್ರೊ ಧರಣೇಂದ್ರ ಕುರ ಕುರಿ ಮಾತನಾಡಿದರು. ಸಮಾರಂಭದಲ್ಲಿ ಲೇಖಕ ಡಾಕ್ಟರ್ ಕೆ ಬಿ ಪವಾರ್ ಮುಂತಾದವರು ಉಪಸ್ಥಿತರಿದ್ದರು