ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ಸುಮಾರು 45 ವರ್ಷಗಳಿಂದ ಕೆಲಸ ನಿರ್ವಹಿಸುತಿದ್ದು ಈಗ ಬೆಂಗಳೂರು ಸಿಟಿ ಆರ್.ಎಂ.ಎಸ್ ಕಛೇರಿಯ ಎಲ್ಲಾ ಯೂನಿಟ್ಗಳನ್ನು ಬೇರೆ ಬೇರೆ ಕಡೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ವರ್ಗಾಯಿಸುತ್ತಿದ್ದಾರೆ ಇದರ ವಿರುದ್ದ ಅಖಿಲ ಭಾರತ ಆರ್.ಎಂ.ಎಸ್.ಮತ್ತು ಎಂ.ಎಂ.ಎಸ್ ನೌಕರರ ಸಂಘಟನೆಯಿಂದ ದಿ.21.06.2024 ಬೆ.9.00 ಗಂಟೆಗೆ ಶಾಂತಿಯುತ ಧರಣಿ ಹಮ್ಮಿಕೊಳ್ಳಲಾಗಿದೆ...
ಈ ಕಛೇರಿಯು ಬೆಂಗಳೂರು ಹೃದಯ ಭಾಗದಲ್ಲಿದ್ದು ರಾತ್ರಿಯಿಡೀ ವಿಂಗಡಿಸಿದ ಅಂಚೆ ಪತ್ರಗಳನ್ನು ಮುಂಜಾನೆ ಕೂಡಲೇ ಸಂಬಂದಿಸಿದ ಎಲ್ಲಾ ಅಂಚೆ ಕಛೇರಿಗಳಿಗೆ ತಲುಪಿಸಲು ಬಹು ಸುಗಮವಾಗಿತ್ತು...ಮತ್ತು ನಮ್ಮ ನೌಕರರು ಅದರಲ್ಲೂ ಮಹಿಳಾ ನೌಕರರು ಕಛೇರಿಗೆ ಹೋಗಿ ಬರಲು ಅನುಕೂಲಕರವಾಗಿತ್ತು.ಈಗ ಇದರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವಲತ್ತು ಕೊಂಡಿದ್ದಾರೆ.
ನಮ್ಮ ಪ್ರಮುಖ ಬೇಡಿಕೆಗಳು:
1.ಬೆಂಗಳೂರು ಪಾರ್ಸಲ್ ಹಬ್ ನ್ನು ಪಿ.ಪಿ.ಸಿ ಪೀಣ್ಯ ದ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು.
2.ಈಗಾಗಲೇ ವರ್ಗಾಯಿಸಿದ CCRC/NSH/FCMC ಯೂನಿಟ್ಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.
3.ಎಲ್ಲಾ ಯೂನಿಟ್ಗಳ ಕೆಲಸದ ಸಮಯವನ್ನು ಮೊದಲಿನಂತೆಯೇ ಮುಂದುವರೆಸುವುದು.
4.ನೌಕರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಸೌಹಾರ್ದಯುತ ಸಂಬಂದ ಮುಂದುವರೆಸುವುದು.
ಈ ಧರಣಿ ಸಮಯದಲ್ಲಿ ಅಖಿಲ ಭಾರತ ಆರ್. ಎಂ. ಎಸ್ ನೌಕರರ ಸಂಘಟನೆ ಕರ್ನಾಟಕ ವಲಯಾಧ್ಯಕ್ಷರು ಸಂ. ಎಂ. ನಾಗರಾಜು,ಹಾಗೂ ಸಂ. ಇ. ಗೋವಿಂದರಾಜು ವಲಯ ಕಾರ್ಯದರ್ಶಿಗಳಾದ ಸಂ. ಎನ್. ಎಸ್. ಗುಣಪಾಲ ಹಾಗೂ ಸಂ ಜಿ. ಎನ್. ಅನಂತರಾಮು.
ಫೆಡರಲ್ ಕೌನ್ಸಿಲ್ ಸಂ. ಸಿ. ಭಾಸ್ಕರ್ , ಜಿ.ಎನ್ ವೆಂಕಟೇಶ್ ರವರು ಭಾಗವಹಿಸಿ ಅವರ ಪ್ರಮುಖ ಬೇಡಿಕೆಗಳನ್ನು ತಿಳಿಸಿದರು.... ಧರಣಿ ನಂತರ 5 ಪ್ರಮುಖ ಬೇಡಿಕೆಗಳ Memorandum ನ್ನು ಸಂಬಂದಿಸಿದ SSRM ರವರಿಗೆ ನೀಡಲಾಯಿತು. ಈ ಸಮಸ್ಯೆಗಳನ್ನು ಬೇಗನೆ ಇತ್ಯರ್ಥ ಮಾಡದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.