ಬೆಂಗಳೂರು : ಗಿರಿನಗರದ ನಿವಾಸಿಯಾದ ವೆಂಕಟೇಶ್ ಎಂಬಾತನನ್ನು ಆತನ ಹೆಸರಿನಲ್ಲಿರುವ ಆಸ್ತಿಯನ್ನು ಕಬಳಿಸಲು ಸುಜಾತ ಮತ್ತು ಪೂಜಾ ಎಂಬ ಇಬ್ಬರು ಮಹಿಳೆಯರು ಹನಿ ಟ್ರಾ÷್ಯಪ್ ಮೂಲಕ ಬೆದರಿಸುತ್ತಿರುವ ಪ್ರಕರಣ ವರದಿಯಾಗಿದೆ,
ಶಿಲ್ಪ ಹಾಗೂ ವೆಂಕಟೇಶ್ ಅವರ ಮದುವೆ ಈಗಾಗಲೇ ಸುಮಾರು 26 ವರ್ಷಗಳ ಹಿಂದೆ ನಡೆದಿದ್ದು, ವೆಂಕಟೇಶ್ ಎಂಬಾತನನ್ನು ಲೈಂಗಿಕ ಕ್ರಿಯೆಗಾಗಿ ಪುಸಲಾಯಿಸಿ ನಂತರ ಅನೈತಿಕ ಸಂಬAಧ ಮುಂದುವರೆಸಿಕೊAಡು ಅಮ್ಮ ಮತ್ತು ಮಗಳಾದ ಸುಜಾತ ಹಾಗೂ ಪೂಜಾ ಅವರ ವಿರುದ್ಧ ಈಗಾಗಲೇ ವಿವಿಧ ನ್ಯಾಯಾಲಯಗಳಲ್ಲಿ ಕೇಸುಗಳು ದಾಖಲಾಗಿದ್ದರೂ ಸಹ, ವೆಂಕಟೇಶನನ್ನು ಹೆದರಿಸಿ ಅವರ ಹೆಂಡತಿಯಾದ ಶ್ರೀಮತಿ ಶಿಲ್ಪ ಮತ್ತು ಅವರ ಮಗನಾದ ಶ್ರೀನಿಧಿಯವರಿಗೆ, ಸುಜಾತಾ ಮತ್ತು ಪೂಜಾ ದಿನ ಚಿತ್ರ ಹಿಂಸೆ ನೀಡುತ್ತಿದ್ದುದು ವರದಿಯಾಗಿದೆ.
ಸಂತ್ರಸ್ತೆ ಶಿಲ್ಪಾರವರು ನೀಡಿರುವ ದೂರಿನ ಆಧಾರದ ಮೇಲೆ, ಗಿರಿನಗರ ಪೊಲೀಸರು ವೆಂಕಟೇಶ್ ರನ್ನು ಬಂಧಿಸಿದ್ದು, ಘಟನೆ ನಡೆಯುತ್ತಿರುವ ವಿಚಾರ ತಿಳಿದು ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಾಗಿಲು ಒಡೆದು ಸಂತ್ರಸ್ತೆ ಶಿಲ್ಪಾರವರನ್ನು ರಕ್ಷಿಸಿದ್ದು , ಸುಜಾತ ಹಾಗೂ ಪೂಜಾ ಅವರು ಪೊಲೀಸ್ ರವರ ಮೇಲೆ ಪ್ರಭಾವ ಬೀರಿ ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧವೇ ದೂರು ಕಲಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
ಈ ಮಧ್ಯೆ ಸುಜಾತ ಎಂಬ ಮಹಿಳೆ, ಹನಿ ಟ್ರಾಪ್ ಪ್ರಕರಣದಿಂದ ತಪ್ಪಿಸಿಕೊಳ್ಳಲು, ಹತ್ತು ವರ್ಷಗಳಿಂದ ವೆಂಕಟೇಶ್ ತನ್ನನ್ನು ಮದುವೆ ಆಗಿರುವುದಾಗಿ ಸುಳ್ಳು ಹೇಳುತ್ತಿ ರುವುದಾಗಿ ಹಾಗೂ ಇದೇ ಬಸವನಗುಡಿಯ ಕಂದಾಯ ಇಲಾಖೆ ವತಿಯಿಂದ ನೀಡುವ ವಿಧವಾ ವೇತನ ಪಡೆಯುತ್ತಿರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ದೂರಿರುತ್ತಾರೆ.
ಈ ಘಟನೆಯ ರೂವಾರಿಯಾಗಿರುವ ಶೃಂಗೇರಿ ಮೂಲದ ಬೆಂಗಳೂರು ಹೊಸಕೆರೆಹಳ್ಳಿ ನಿವಾಸಿ, ಸಾಫ್ಟ್ವೇರ್ ನೌಕರ ಪೂಜಾಳ ಗಂಡ ಪ್ರಿಯಾಂಕ್ ಸಹ ಕೈವಾಡವಿರುವುದಾಗಿ ಸಂತ್ರಸ್ತೆ ಶಿಲ್ಪ ಮತ್ತು ಶ್ರೀನಿಧಿ ರವರು ಈಗಾಗಲೇ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಬೆಂಗಳೂರು ಪೊಲೀಸ್ ಕಮಿಷನರ್ ದಯಾನಂದ್ ಹಾಗೂ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ಶ್ರೀಮತಿ ನಾಗಲಕ್ಷಿ÷್ಮ ಚೌದರಿ ಅವರಿಗೆ ದೂರು ನೀಡಿರುತ್ತಾರೆ.
ಪೊಲೀಸರ ಈ ನಡೆಯಿಂದ ಸ್ಥಳೀಯರು ಬೇಸರಗೊಂಡಿದ್ದು ಕಾಂಗ್ರೆಸ್ ಕಾರ್ಯಕರ್ತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಕಂಡು ಬಂದಿದೆ.
ಈ ಘಟನೆ ಶನಿವಾರವೇ ನಡೆದಿದ್ದರೂ ಇಂದು ಬೆಳಕಿಗೆ ಬಂದಿದ್ದು, ಸಂತ್ರಸ್ತೆ ಶಿಲ್ಪಾ ರವರನ್ನು ರಕ್ಷಿಸಿದ ಕಾರ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸ್ಥಳೀಯ ನಿವಾಸಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.