ಸಂಸದ ಗೋವಿಂದ ಕಾರಜೋಳರವರಿಗೆ ಕೇಂದ್ರ ಸಚಿವ ಸ್ಥಾನ ನೀಡಿ-ಚಿತ್ರದುರ್ಗದ ಮಾದಿಗ ಅದಿಜಾಂಭವ ಮಠದ ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ ಒತ್ತಾಯ

VK NEWS
By -
0

ಬೆಂಗಳೂರು: ಪ್ರಸ್ ಕ್ಲಬ್ ಸಭಾಂಗಣ: ಮಾದಿಗ ಸಮುದಾಯಕ್ಕೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು. 

ಚಿತ್ರದುರ್ಗದ ಕೋಡಿಹಳ್ಳಿ, ಅದಿಜಾಂಭವ ಮಠದ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿ, ಅಖಿಲ ಕರ್ನಾಟಕ ದಲಿತ ಸಂಘ ರಾಜ್ಯಾಧ್ಯಕ್ಷರಾದ ಬಿ.ಆರ್.ಮುನಿರಾಜು, ಕರ್ನಾಟಕ ಅಹಿಂದ ಹೋರಾಟ ಸಮಿತಿ ಅಧ್ಯಕ್ಷರಾದ ಮುತ್ತುರಾಜ್, ಅದಿಜಾಂಭವ ಸಂಘ ಸಿದ್ದರಾಜು, ದಲಿತ ಮುಖಂಡರಾದ ಉಮೇಶ್ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.

*ಶ್ರೀ ಷಡಕ್ಷರಿಮುನಿ ದೇಶಿಕೇಂದ್ರ ಸ್ವಾಮೀಜಿರವರು* ಮಾತನಾಡಿ ಮಾದಿಗ ಸಮುದಾಯದ  ಗೋವಿಂದಕಾರಜೋಳ, ರಮೇಶ್ ಜಿಗಜಿಣಿಗಿರವರು ಸಂಸದರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆಗಳು.

ಮಾದಿಗ ಸಮುದಾಯ ಸಮಾಜದ ಮುಖ್ಯವಾಹಿನಿ ಬರಬೇಕು. ಕೇಂದ್ರದಲ್ಲಿ ನೂತನ ಸರ್ಕಾರ ರಚನೆಯಾಗಿದೆ ಅದರಲ್ಲಿ ರಾಜಕೀಯವಾಗಿ ಕುಗ್ಗಿರುವ, ಆರ್ಥಿಕವಾಗಿ ನಿಶಕ್ತರಾಗಿರುವ ಸಮಾಜವನ್ನು ಗುರುತಿಸಲು ಕೇಂದ್ರ ಸರ್ಕಾರ ಎಡವಿದೆ.

ಉತ್ತಮ ಸರಳ ಸಜ್ಞನ ರಾಜಕಾರಣಿಗಳು ಎಂದು ಗುರುತಿಸಿಕೊಂಡಿರುವ ಗೋವಿಂದಕಾರಜೋಳ, ರಮೇಶ್ ಜಿಗಜಿಣಿಗಿರವರನ್ನು ಕೇಂದ್ರ ಸಚಿವ ಸಂಪುಟ್ಟಕೆ ಆಯ್ಕೆ ಮಾಡಬೇಕಾಗಿತ್ತು.

ಅದರೆ ವಿಷಾದನೀಯ ವಿಷಯ ಎಡಗೈ ಸಮುದಾಯಕ್ಕೆ ಅವಕಾಶ ನೀಡಿಲ್ಲ, ಮತದಾನ ಮಾತ್ರ ಮಾಡಲು ನಮ್ಮನ್ನ ಬಳಸಿಕೊಳ್ಳಬೇಡಿ.

ಮಾದಿಗ ಸಮುದಾಯಕ್ಕೆ ರಾಜಕೀಯವಾಗಿ ಶಕ್ತಿ ಕೊಡಿ, ಮಾದಿಗ ಸಮುದಾಯವನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಇರುವುದರಿಂದ ಮಾದಿಗ ಸಮುದಾಯ, ಉಪ ಪಂಗಡಗಳಿಗೆ ಬಾರಿ ನೋವುಂಟಾಗಿದೆ.

ರಾಜ್ಯದಲ್ಲಿ ದಲಿತ ಸಮುದಾಯದ ಮುಖ್ಯಮಂತ್ರಿಯಾಗಿಲ್ಲ, ರಾಷ್ಟ್ರೀಯ ಪಕ್ಷಗಳು ಪಕ್ಷದ ಅಧ್ಯಕ್ಷ ಸ್ಥಾನಗಳು ನೀಡಿಲ್ಲ.

ಗೋವಿಂದ ಕಾರಜೋಳರವರನ್ನು ಕೇಂದ್ರ ಸಚಿವರಾಗಿ ಆಯ್ಕೆ ಮಾಡಬೇಕು ಇಲ್ಲದೇ ಹೋದರೆ ಮಾದಿಗ ಸಮುದಾಯ ರಾಜಕೀಯ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

Post a Comment

0Comments

Post a Comment (0)