ಪ್ರಕಾಶನಗರ ರಾಯರ ಮಠದ 66ನೇ ವಾರ್ಷಿಕೋತ್ಸವ, ಮಹಾಭಾರತ ಗ್ರಂಥದ ಮೆರವಣಿಗೆ.

VK NEWS
By -
0

ಬೆಂಗಳೂರಿನ ಪ್ರಕಾಶನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜೂನ್ 11, ಮಂಗಳವಾರದಂದು, ಪರಮಪೂಜ್ಯ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ, ಶ್ರೀಮಠದ 66ನೇ ವಾರ್ಷಿಕೋತ್ಸವ, ಪವನ ಪರಿಮಳ ಪ್ರಸಾರಿಣೀ ಸಮಿತಿಯ 39ನೇ ವಾರ್ಷಿಕೋತ್ಸವದ ಪ್ರಯುಕ್ತ ಬೆಳಗಿನ ಕಾರ್ಯಕ್ರಮಗಳು : ಶ್ರೀ ಗುರುರಾಯರ ಬೃಂದಾವನಕ್ಕೆ ಮಧು ಅಭಿಷೇಕ, ಫಲ-ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಶ್ರೀಪಾದಂಗಳವರಿಂದ  ತಪ್ತ ಮುದ್ರಾಧಾರಣೆ, ಸಂಸ್ಥಾನ ಪೂಜೆ,  ಮಹಾಮಂಗಳಾರತಿ. 

ಸಂಜೆಯ ಕಾರ್ಯಕ್ರಮಗಳು : 5 ಗಂಟೆಗೆ ವರ್ಧಂತಿ ಉತ್ಸವ ಸಮಾರಂಭ. 
ಅಧ್ಯಕ್ಷತೆ  : ಶ್ರೀ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು. 

ವರ್ಧಂತಿ ಉತ್ಸವದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರುಗಳಾದ ಶ್ರೀ ಸತ್ತಿಗೇರಿ ಧೀರೇಂದ್ರಾಚಾರ್ಯ (ತತ್ವಜ್ಞಾನ ಕ್ಷೇತ್ರ), ಡಾ|| ದೀಪಕ್ ವಿ. ಹಲ್ದಪುರ್ (ವೈದ್ಯಕೀಯ ಕ್ಷೇತ್ರ), ಡಾ|| ಎನ್. ಆರ್. ಲಲಿತಾಂಬ (ಶಿಕ್ಷಣ ಕ್ಷೇತ್ರ), ಶ್ರೀ ನಾವೆಲ್ಟಿ ಜಿ. ವೆಂಕಟೇಶ್ (ಸಾಹಿತ್ಯ ಕ್ಷೇತ್ರ) ಮತ್ತು ಡಾ|| ಆರ್. ಕೋಮಲ (ಸಮಾಜ ಸೇವಾ ಕ್ಷೇತ್ರ) ಇವರುಗಳಿಗೆ ಗೌರವಾರ್ಪಣೆ ಹಾಗೂ ಸುಮಾರು 12 ವರ್ಷಗಳಿಂದ ನಡೆಯುತ್ತಿದ್ದ ಮಹಾಭಾರತ ಪ್ರವಚನ ಮಾಲಿಕೆಯ ಮಹಾಮಂಗಳೋತ್ಸವ, ವೇದಘೋಷ ಮತ್ತು ಭಜನೆಗಳೊಂದಿಗೆ ಮಹಾಭಾರತ ಗ್ರಂಥದ ಮೆರವಣಿಗೆ ನಂತರ ಸಮಾರೋಪ ಸಮಾರಂಭಗಳು ಜರುಗಲಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀಮಠದ ಪದಾಧಿಕಾರಿಗಳು ವಿನಂತಿಸಿದ್ದಾರೆ.

Post a Comment

0Comments

Post a Comment (0)