ಬೆಂಗಳೂರು ಪದವೀದರ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಶ್ರೀ. ಆ.ದೇವೇಗೌಡ ರವರು ಮತ್ತು ಬೆಂಗಳೂರು ಆಗ್ನೇಯ ಶಿಕ್ಷಕರ ಕ್ಷೇತ್ರ ದ ಅಭ್ಯರ್ಥಿಯಾಗಿ ಶ್ರೀ. ವೈ.ಏ.ನಾರಾಯಣಸ್ವಾಮಿ ರವರು ಇಂದು ಶಾಂತಿನಗರದಲ್ಲಿರುವ ಚುನಾವಣಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಶ್ರೀ. ಬಿ.ವೈ.ವಿಜಯೇಂದ್ರರವರು, ಮಾಜಿ ಮುಖ್ಯಮಂತ್ರಿಗಳಾದ ಶ್ರೀ.ಸದಾನಂದ ಗೌಡರು ಹಾಗು ಶ್ರೀ. ಬಸವರಾಜ್ ಬೊಮ್ಮಾಯಿ ರವರು, ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ್ ರವರು, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ.ಗೋವಿಂದ್ ಕಾರಜೋಳ ರವರು, ಮತ್ತು ಶ್ರೀ. ಡಾ.ಅಶ್ವತ್ಥನಾರಾಯಣ ರವರು, ಬೆಂಗಳೂರು ಕೇಂದ್ರ ಸಂಸದರಾದ ಶ್ರೀ. ಪಿ . ಸಿ.ಮೋಹನ್ ರವರು, ಮಾಜಿ ಶಾಸಕರಾದ ಶ್ರೀ.ಲಕ್ಷ್ಮಿನಾರಾಯಣ ರವರು ಮತ್ತು ಶ್ರೀ.ವರ್ತೂರ್ ಪ್ರಕಾಶ್ ರವರು ಉಪಸ್ಥಿತರಿದ್ದರು.