ಬೆಂಗಳೂರು: ಹವ್ಯಾಸಿ ಚಿತ್ರಕಾರ ಮನೋಜ್ ವಿಜಯಕುಮಾರ್ ರವರು ಹವ್ಯಾಸಿ ಚಿತ್ರಕಾರ ಚಿಕ್ಕ ವಯಸ್ಸಿನಿಂದಲು ಬಣ್ಣದ ಜೊತೆಯಲ್ಲಿ ಆಟವಾಡಿ ಬೆಳದವನು.
ತಂದೆ, ತಾಯಿಯ ಪ್ರೋತ್ಸಹದಿಂದ ವಿದ್ಯಾಭ್ಯಾಸ ಮತ್ತು ವರ್ಣ ಚಿತ್ರಕಲೆ ಬಿಡಿಸುವುದರಲ್ಲಿ ಎತ್ತಿದ ಕೈ .
ಐ.ಡಿ.ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದು. ಚಿತ್ರಕಲೆಯನ್ನು ಕಳೆದ 17ವರ್ಷಗಳಿಂದ ವಿವಿಧ ಬಗೆಯ ವರ್ಣ ಚಿತ್ರಕಲೆ ಬಿಡಿಸಿದ್ದಾರೆ.
ಇದೀಗ ಕಬ್ಬನ್ ಪೈಂಟ್ಸ್ ವತಿಯಿಂದ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಥಮ ಬಾರಿಗೆ ಮನೋಜ್ ವಿಜಯಕುಮಾರ್ ರವರ ಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.
ನಮ್ಮ ನಾಡಿನ ಯುವ ಉತ್ಸಾಹಿ ಚಿತ್ರಕಾರ ಮನೋಜ್ ವಿಜಯಕುಮಾರ್ ರವರು ನೂರಾರು ಚಿತ್ರಗಳು ಪರಿಸರ ಮತ್ತು ಗ್ರಾಮೀಣ ಬದುಕು ಹಾಗೂ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ತಮ್ಮ ಕೈಚಳಕದಿಂದ ಅದ್ಬುತವಾಗಿ ರಚಿಸಿದ್ದಾರೆ.
ಮನೋಜ್ ವಿಜಯಕಮಾರ್ ರವರಿಗೆ ಹಲವಾರು ಕನ್ನಡ ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.
ಮನೋಜ್ ವಿಜಯಕುಮಾರ್ ರವರ ಚಿತ್ರಕಲೆ ಉಳಿಯಬೇಕು ಮತ್ತು ಬೆಳಯಬೇಕು ಕರ್ನಾಟಕದಲ್ಲಿ ಚಿತ್ರಕಲೆ ಉತ್ತಮ ವಾತವರಣ ಹಾಗೂ ಪ್ರೋತ್ಸಾಹವಿದೆ ಎಂದು ಹೇಳಿದರು.