ಶಾಸಕರ ಭವನದಲ್ಲಿ ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ ಗೆ ಸಭಾಧ್ಯಕ್ಷ ಯು.ಟಿ. ಖಾದರ್ ಚಾಲನೆ
ಶಾಸಕರಿಗೆ ರುಚಿ, ಶುಚಿಯಾದ ಮಾಂಸಹಾರ ಖಾದ್ಯ ಪೂರೈಕೆಬೆಂಗಳೂರು, ಮೇ, 30; ರಾಜ್ಯವನ್ನು ಪ್ರತಿನಿಧಿಸುವ ಶಾಸಕರು, ಮಾಜಿ ಶಾಸಕರಿಗೆ ಶಾಸಕರ ಭವನದಲ್ಲಿ ಇನ್ನು ಮುಂದೆ ಬಿಸಿಯಾದ ದೊನ್ನೆ ಬಿರಿಯಾನಿ ದೊರೆಯಲಿದೆ.
ರುಚಿ, ಶುಚಿಯಾದ ಮಾಂಸಾಹಾರ ಖಾದ್ಯ ಪೂರೈಸುವ ಉದ್ದೇಶದಿಂದ ಶಾಸಕರ ಭವನದ ಕಟ್ಟಡ 2 ರ ನೆಲ ಮಾಳಿಗೆಯಲ್ಲಿ ನಮ್ಮೂರ ದೊನ್ನೆ ಬಿರಿಯಾನಿ ಹೋಟೆಲ್ ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಚಾಲನೆ ನೀಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಹ ಭೇಟಿ ನೀಡಿ ಶುಭ ಹಾರೈಸಿದರು.
ಶಾಸಕರಷ್ಟೇ ಅಲ್ಲದೇ ಸಚಿವರು, ವಿಧಾನಸೌಧ, ಆಸುಪಾಸಿನ ವಿವಿಧ ಸಚಿವಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಮತ್ತು ಸಾರ್ವಜಕರಿಗೆ
ಕೆಮಿಕಲ್ ರಹಿತವಾದ ಮಸಾಲೆಗಳನ್ನು ಉಪಯೋಗಿಸಿ ಸಿದ್ಧಪಡಿಸಲಾಗುವ ಗುಣಮಟ್ಟದ ಮಾಂಸಹಾರ ಊಟ, ತಿಂಡಿಗಳನ್ನು ಒದಗಿಸಬೇಕೆಂಬ ಏಕೈಕ ಉದ್ದೇಶದಿಂದ ಈ ಹೋಟೆಲ್ ತೆರೆಯಲಾಗಿದೆ.
ಹೋಟಲ್ ಮಾಲಿಕ ಮಂಜುನಾಥ್ ಮಾತನಾಡಿ, ನಮ್ಮೂರ ದೊನ್ನೆ ಬಿರಿಯಾನಿ ಹೋಟಲ್ 2020 ಸ್ಥಾಪನೆಗೊಂಡಿದ್ದು, ಗುಣಮಟ್ಟದ ಮತ್ತು ರುಚಿಯಾದ ಮಾಂಸಹಾರಿ ಪದಾರ್ಥಗಳನ್ನು ಬೆಂಗಳೂರಿನ ಜನರಿಗೆ ಉಣಬಡಿಸುತ್ತಿದ್ದೇವೆ. ರವಿಕುಮಾರ್, ಅಭಿಷೇಕ್ ಎಂಬುವರ ಜೊತೆಗೂಡಿ ಹೋಟೆಲ್ ಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.