ಎಲೆಕ್ಟ್ರಿಕ್ ವಾಹನಗಳನ್ನು ಎಲ್ಲರಿಗೂ ದೊರಕಿಸುವ ಉದ್ದೇಶ ಸಾಕಾರದ ನಿಟ್ಟಿನಲ್ಲಿ ಟಿವಿಎಸ್ ಐಕ್ಯೂಬ್ ಉತ್ಪನ್ನ ಶ್ರೇಣಿಗೆ ಹೊಸ ವೇರಿಯಂಟ್ ಗಳನ್ನು ಪರಿಚಯಿಸಿದ ಟಿವಿಎಸ್ ಮೋಟಾರ್ ಕಂಪನಿ
• ಟಿವಿಎಸ್ಎಂನ ಕ್ರಾಂತಿಕಾರಕ ಆಂತರಿಕ ಇವಿ ತಂತ್ರಜ್ಞಾನದ ಆಧಾರದಿಂದ ಚಾಲಿತವಾಗಿರುವ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸರಣಿಯ 300,000 ಘಟಕ ಮಾರಾಟವಾಗಿದ್ದು, ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ
• ಭಾರತದ ಅಚ್ಚುಮೆಚ್ಚಿನ ಕೌಟುಂಬಿಕ ಇವಿ ಆಗಿರುವ ಟಿವಿಎಸ್ ಐಕ್ಯೂಬ್ ಈಗ 3 ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ, ಅವುಗಳೆಂದರೆ - 2.2 ಕೆಡಬ್ಲ್ಯೂಎಚ್, 3.4 kWh ಮತ್ತು 5.1 kWh. ಟಿವಿಎಸ್ ಐಕ್ಯೂಬ್ ಎಸ್ಟಿಯ 2 ವೇರಿಯಂಟ್ ಗಳೂ ಇವುಗಳಲ್ಲಿ ಸೇರಿವೆ. ಉತ್ಪನ್ನ ಶ್ರೇಣಿಯು ಆಕರ್ಷಕ ಪರಿಚಯಾತ್ಮಕ ರೂ. 94,999 ಎಕ್ಸ್ ಶೋ ರೂಂ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಬೆಂಗಳೂರು, 2024: ಪ್ರಮುಖ ಜಾಗತಿಕ ವಾಹನ ತಯಾರಕ ಕಂಪನಿಯಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ಇಂದು 2.2 kWh ಬ್ಯಾಟರಿ ಆಯ್ಕೆ ಲಭ್ಯವಿರುವ ಟಿವಿಎಸ್ ಐಕ್ಯೂಬ್ ನ ಹೊಸ ವೇರಿಯಂಟ್ ಅನ್ನು ಬಿಡುಗಡೆ ಮಾಡಿದೆ. ಇದೇ ಸಂದರ್ಭದಲ್ಲಿ ಕಂಪನಿಯು ಇಂದಿನಿಂದ ಗ್ರಾಹಕರಿಗೆ ಟಿವಿಎಸ್ ಐಕ್ಯೂಬ್ ಎಸ್ಟಿಯನ್ನು ತಲುಪಿಸಲು ಸಿದ್ಧವಾಗಿದೆ ಎಂದು ಘೋಷಿಸಿದೆ. ಟಿವಿಎಸ್ ಐಕ್ಯೂಬ್ ಎಸ್ಟಿ ಈಗ 3.4 kWh ಮತ್ತು 5.1 kWh ಎಂಬ ಎರಡು ಬ್ಯಾಟರಿ ವೇರಿಯೆಂಟ್ ಗಳಲ್ಲಿ ದೊರೆಯಲಿದೆ. ಇದು ಈ ವಿಭಾಗದಲ್ಲಿನ ಅತಿದೊಡ್ಡ ಬ್ಯಾಟರಿ ಪ್ಯಾಕ್ ಆಗಿದೆ. ಇದರೊಂದಿಗೆ, ಟಿವಿಎಸ್ ಐಕ್ಯೂಬ್ ಸರಣಿಯು ಈಗ ಅತ್ಯಾಕರ್ಷಕ 11 ಬಣ್ಣಗಳಲ್ಲಿ ದೊರೆಯಲಿರುವ ಐದು ವೇರಿಯೆಂಟ್ ಗಳ ಉತ್ಪನ್ನ ಶ್ರೇಣಿಯನ್ನು ಒದಗಿಸುತ್ತದೆ. ಇದು ಮಾರುಕಟ್ಟೆಯಲ್ಲಿರುವ ಅತಿದೊಡ್ಡ ಮತ್ತು ಅತ್ಯಂತ ಆಕರ್ಷಕವಾದ ಇವಿ ಉತ್ಪನ್ನ ಶ್ರೇಣಿಗಳಲ್ಲಿ ಒಂದಾಗಿದೆ.
ಸುಸ್ಥಿರ ಚಲನಶೀಲತೆ ಉತ್ಪನ್ನಗಳಲ್ಲಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿಯು ವಿಶ್ವಾಸಾರ್ಹ, ನವೀನ ಮತ್ತು ಆನಂದದಾಯಕ ಉತ್ಪನ್ನಗಳನ್ನು ಒದಗಿಸುವ ಮೂಲಕ ಇವಿ ವಿಭಾಗದ ಮೇಲೆ ತಮಗಿರುವ ಬದ್ಧತೆಯನ್ನು ಸಾರಿದೆ. ಈ ದೃಷ್ಟಿಕೋನವನ್ನು ಮುಂದುವರಿಸುತ್ತಾ ಮತ್ತು ಎಲ್ಲರಿಗೂ ಇವಿ ಅನ್ನು ಕೈಗೆಟುಕುವಂತೆ ಮಾಡುವ ಉದ್ದೇಶ ಹಾಗೂ ಪ್ರಯತ್ನದಲ್ಲಿ ಹೊಸತಾಗಿ 2.2 kWhಬ್ಯಾಟರಿ ವೇರಿಯೆಂಟ್ ಅನ್ನೂ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಟಿವಿಎಸ್ ಐಕ್ಯೂಬ್ ಸರಣಿಯು ಈಗ ಪರಿಚಯಾತ್ಮಕ ಎಕ್ಸ್ ಶೋ ರೂಂ ಬೆಲೆ ರೂ.94,999ಕ್ಕೆ ದೊರೆಯಲಿದೆ. ಇದರಿಂದ ಗ್ರಾಹಕರಿಗೆ ಮಾಲೀಕತ್ವದ ಒಟ್ಟು ವೆಚ್ಚವನ್ನು (ಟೋಟಲ್ ಕಾಸ್ಟ್ ಆಫ್ ಓನರ್ ಶಿಪ್- ಟಿಸಿಓ) ಕಡಿಮೆ ಮಾಡಲು ಸಹಾಯ ಆಗಲಿದೆ.
ಟಿವಿಎಸ್ ಐಕ್ಯೂಬ್ ಮೂರು ಮೂಲಭೂತ ತತ್ವಗಳಿಂದ ಪ್ರೇರಿತವಾಗಿದೆ, ಅವುಗಳೆಂದರೆ: 1. ಗ್ರಾಹಕರಿಗೆ ರೇಂಜ್, ಸಂಪರ್ಕಿತ ತಂತ್ರಜ್ಞಾನ, ಚಾರ್ಜಿಂಗ್ ಪರಿಹಾರಗಳು ಮತ್ತು ಬೆಲೆ ಆಧಾರದಲ್ಲಿ ಆಯ್ಕೆಯ ಶಕ್ತಿಯನ್ನು ನೀಡುವುದು. 2. ವಾಹನ ಸುರಕ್ಷತೆ ಮತ್ತು ಒಟ್ಟಾರೆ ಮಾಲೀಕತ್ವದ ಅನುಭವ ಒದಗಿಸುವ ಮೂಲಕ ಸಂಪೂರ್ಣ ಭರವಸೆ ಒದಗಿಸುವುದು. 3. ಗ್ರಾಹಕರ ರೈಡಿಂಗ್ ಅನುಭವವನ್ನು ಹೆಚ್ಚಿಸಲು ಬಳಕೆಗೆ ಸುಲಭವಾದ ಫೀಚರ್ ಗಳ ಮೂಲಕ ಸರಳವಾಗಿ ರೈಡಿಂಗ್ ಮಾಡುವಂತೆ ಮಾಡುವುದು. ಈ ಬಿಡುಗಡೆಯ ಮೂಲಕ ಬ್ರಾಂಡ್ ನ ಘೋಷವಾಕ್ಯವಾದ 'Bade Armaanon ki Achchi Shuruwat’ ಎಂಬುದಕ್ಕೆ ಅನುಗುಣವಾಗಿ ಟಿವಿಎಸ್ ಐಕ್ಯೂಬ್ ಸರಣಿಯು ಒದಗಿಸುವ ಆಯ್ಕೆಗಳ ಮೂಲಕ ವಿವಿಧ ವಿಭಾಗಗಳಲ್ಲಿ ತಮ್ಮ ಇವಿ ಪ್ರಯಾಣವನ್ನು ಆರಂಭಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ.
ಹೊಸ ವೇರಿಯಂಟ್ ಗಳ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಿವಿಎಸ್ ಮೋಟಾರ್ ಕಂಪನಿಯ ಇವಿ ಬಿಸಿನೆಸ್ನ ಹಿರಿಯ ಉಪಾಧ್ಯಕ್ಷ ಮನು ಸಕ್ಸೇನಾ, "ಟಿವಿಎಸ್ ಮೋಟಾರ್ ಕಂಪನಿಯಲ್ಲಿ ನಾವು ಉದ್ಯಮದಲ್ಲಿ ನಾವೀನ್ಯತೆ ಮತ್ತು ಸುಸ್ಥಿರತೆಗೆ ಚಾಲನೆ ನೀಡಲು ಬದ್ಧರಾಗಿದ್ದೇವೆ. ನಮ್ಮ 3 ಲಕ್ಷ ದಷ್ಟು ವಿಸ್ತಾರವಾದ ಟಿವಿಎಸ್ ಐಕ್ಯೂಬ್ ಕುಟುಂಬದ ಬೆಳವಣಿಗೆಯನ್ನು ವೀಕ್ಷಿಸುವುದು ನಿಜಕ್ಕೂ ಆನಂದದಾಯಕ ಅನುಭವವಾಗಿದೆ. ನಮ್ಮ ಇವಿ ಗ್ರಾಹಕರ ರೈಡಿಂಗ್ ಪ್ರಯಾಣದ ಮೂಲಕ ಪಡೆದ ಅನುಭವದ ಆಧಾರದಿಂದ ನಾವು ಟಿವಿಎಸ್ ಐಕ್ಯೂಬ್ ಸರಣಿಯಲ್ಲಿ ಹೊಚ್ಚ ಹೊಸ 2.2 kWh ಫಾಸ್ಟೆಸ್ಟ್ ಚಾರ್ಜಿಂಗ್ ವೇರಿಯಂಟ್ ಅನ್ನು ಮತ್ತು ಟಿವಿಎಸ್ ಐಕ್ಯೂಬ್ ಎಸ್ ಟಿಯ ಹೆಚ್ಚುವರಿ ವೇರಿಯಂಟ್ ಅನ್ನು ಪ್ರಾರಂಭಿಸಲು ನಾವು ತುಂಬಾ ಸಂತೋಷದಿಂದ ಬಿಡುಗಡೆ ಮಾಡುತ್ತಿದ್ದೇವೆ. ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸರಣಿಯು ಈಗ 3 ಬ್ಯಾಟರಿ ಆಯ್ಕೆಗಳೊಂದಿಗೆ ಲಭ್ಯವಿದ್ದು, ನಮ್ಮ ಗ್ರಾಹಕರಿಗೆ ಸೂಕ್ತವಾದ ರೇಂಜ್ ಮತ್ತು ದರದಲ್ಲಿ ದೊರೆಯಲಿದೆ. ಸಂಪೂರ್ಣ ಟಿವಿಎಸ್ ಐಕ್ಯೂಬ್ ಸರಣಿಯು ಈಗ ಭಾರತದಾದ್ಯಂತ ಡೆಲಿವರಿ ಹೊಂದಲು ಸಿದ್ಧಲಿದೆ. ಟಿವಿಎಸ್ಎಂ ವಿಶ್ವಾಸಾರ್ಹವಾದ, ಉತ್ತಮವಾದ ಮತ್ತು ಸುಲಭವಾಗಿ ಕೈಗೆಟಕುವ ಎಲೆಕ್ಟ್ರಿಕ್ ವಾಹನ ಅನುಭವವನ್ನು ಒದಗಿಸುವ ಮೂಲಕ ನಮ್ಮ ಗ್ರಾಹಕರ ಯಶಸ್ಸಿನ ಪ್ರಯಾಣದಲ್ಲಿ ಪಾಲುದಾರರಾಗುವುದನ್ನು ಮುಂದುವರೆಸುತ್ತದೆ” ಎಂದು ಹೇಳಿದರು.
ಟಿವಿಎಸ್ ಐಕ್ಯೂಬ್ ಶ್ರೇಣಿಯು ಈಗ ಐದು ವೇರಿಯಂಟ್ ಗಳನ್ನು ಹೊಂದಿದೆ. ಅಲ್ಲದೇ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಹೊಂದಿಕೊಳ್ಳುವಂತಹ ಉತ್ಪನ್ನ ಶ್ರೇಣಿಯನ್ನು ಹೊಂದಿದೆ. ಕಾರ್ಯಕ್ಷಮತೆ, ಸೌಕರ್ಯ, ಉಪಯುಕ್ತತೆ ಮತ್ತು ಕೈಗೆಟುಕುವ ಬೆಲೆ ಈ ಎಲ್ಲಾ ವಿಭಾಗಗಳಲ್ಲಿಯೂ ಈ ಉತ್ಪನ್ನ ಶ್ರೇಣಿ ಗ್ರಾಹಕರ ಪ್ರತಿಯೊಂದು ಅಗತ್ಯ ಮತ್ತು ಆದ್ಯತೆಗಳನ್ನು ಪೂರೈಸುತ್ತದೆ. ಟಿವಿಎಸ್ ಐಕ್ಯೂಬ್ ನ ಹೊಸ ವೇರಿಯಂಟ್ ಗಳು ಹೀಗಿವೆ:
• ಹೊಚ್ಚ ಹೊಸ ಟಿವಿಎಸ್ ಐಕ್ಯೂಬ್ (2.2 kWh)
• ಟಿವಿಎಸ್ ಐಕ್ಯೂಬ್ (3.4 kWh)
• ಟಿವಿಎಸ್ ಐಕ್ಯೂಬ್ ಎಸ್ (3.4 kWh)
• ಹೊಚ್ಚ ಹೊಸ ಟಿವಿಎಸ್ ಐಕ್ಯೂಬ್ ಎಸ್ ಟಿ (3.4 kWh)
• ಟಿವಿಎಸ್ ಐಕ್ಯೂಬ್ ಎಸ್ ಟಿ (5.1 kWh)
ಸಂಪೂರ್ಣ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸರಣಿಯು ಈಗ ಭಾರತದ 434 ನಗರಗಳಲ್ಲಿ ಇರುವ ನಮ್ಮ ಮಳಿಗೆಗಳಲ್ಲಿ ಲಭ್ಯವಿರುತ್ತದೆ.
ಟಿವಿಎಸ್ ಐಕ್ಯೂಬ್ ನ ಹೊಸ ವೇರಿಯಂಟ್ ಗಳ ಪ್ರಮುಖ ಮುಖ್ಯಾಂಶಗಳು:
ಟಿವಿಎಸ್ ನ ಅತ್ಯುತ್ತಮ ಉತ್ಪನ್ನ ಟಿವಿಎಸ್ ಐಕ್ಯೂಬ್ (2.2 kWh) - ಈಗ ಕೈಗೆಟುಕುವ ಬೆಲೆಯಲ್ಲಿ ಲಭ್ಯ:
• ಬ್ಯಾಟರಿ ಸಾಮರ್ಥ್ಯ - 2.2 kWh
• ಚಾರ್ಜರ್ - 950 W
• 5- ಇಂಚಿನ ಕಲರ್ ಟಿ ಎಫ್ ಟಿ ಸ್ಕ್ರೀನ್
• ವೇಗವಾಗಿ ಚಾರ್ಜಿಂಗ್ ಮಾಡಬಹುದಾದ ಸಮಯ 2 ಗಂಟೆ (0-80%)
• ವೆಹಿಕಲ್ ಕ್ರ್ಯಾಶ್ ಆಂಡ್ ಟೋ ಅಲರ್ಟ್
• ಟರ್ನ್-ಬೈ-ಟರ್ನ್ ನ್ಯಾವಿಗೇಷನ್
• ಡಿಸ್ಟಾನ್ಸ್ ಇಂಡಿಕೇಟರ್
• 30 ಲೀಟರ್ ಸೀಟ್ ಸ್ಟೋರೇಜ್ ಸ್ಪೇಸ್
• ಗರಿಷ್ಠ ವೇಗ ಪ್ರತೀ ಗಂಟೆಗೆ 75 ಕಿಮೀ
• ಬೆಲೆ: ರೂ. 94,999 ಎಕ್ಸ್ ಶೋರೂಂ ಬೆಂಗಳೂರು (ಇಎಂಪಿಎಸ್ ಸಬ್ಸಿಡಿ ಮತ್ತು ಕ್ಯಾಶ್ಬ್ಯಾಕ್ ಒಳಗೊಂಡಿರುವ ಪರಿಚಯಾತ್ಮಕ ಬೆಲೆ ಇದು. ಜೂನ್ 30, 2024ರವರೆಗೆ ಮಾತ್ರ ಮಾನ್ಯವಾಗಿರುತ್ತದೆ)
• ವಾಲ್ನಟ್ ಬ್ರೌನ್ ಮತ್ತು ಪರ್ಲ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ
ಟಿವಿಎಸ್ ಐಕ್ಯೂಬ್ ಎಸ್ ಟಿ (5.1 kWh) - ಅತ್ಯುನ್ನತ ರೇಂಜ್ ಮತ್ತು ಸುಧಾರಿತ ತಂತ್ರಜ್ಞಾನ ಹೊಂದಿರುವ ಉನ್ನತ ಶ್ರೇಣಿಯ ಟಿವಿಎಸ್ ಐಕ್ಯೂಬ್:
• ಉದ್ಯಮದಲ್ಲಿಯೇ ಅತಿ ದೊಡ್ಡದು ಎನ್ನಬಹುದಾದ ಬ್ಯಾಟರಿ ಸಾಮರ್ಥ್ಯ - 5.1 kWh
• 150 ಕಿ.ಮೀಗಳ ನಿಜವಾದ ರೇಂಜ್
• 7 ಇಂಚಿನ ಪೂರ್ತಿ ಕಲರ್ ಟಿ ಎಫ್ ಟಿ ಟಚ್ಸ್ಕ್ರೀನ್
• ಚಾರ್ಜರ್ - 950W
• ಚಾರ್ಜಿಂಗ್ ಸಮಯ 4 ಗಂಟೆ 18 ಮೀ (0-80%)
• 118+ ಕನೆಕ್ಟೆಡ್ ಫೀಚರ್ ಗಳು
• ಐಕ್ಯೂಬ್ ಗಾಗಿ ವಾಯ್ಸ್ ಅಸಿಸ್ಟ್ ಮತ್ತು ಅಲೆಕ್ಸಾ ಸ್ಕಿಲ್ಸೆಟ್ ಆಧಾರಿತ ವ್ಯವಸ್ಥೆ
• ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್
• ಟಿಪಿಎಂಎಸ್
• 32 ಲೀಟರ್ ಸೀಟ್ ಸ್ಟೋರೇಜ್ ಸ್ಪೇಸ್
• ಗರಿಷ್ಠ ವೇಗ ಪ್ರತೀ ಗಂಟೆಗೆ 82 ಕಿಮೀ
• ಬೆಲೆ: ರೂ. 1,85,373 ಬೆಂಗಳೂರು ಎಕ್ಸ್ ಶೋರೂಂ (2022ರ ಜುಲೈ 15 ಮೊದಲು ಎಸ್ ಟಿ ವೇರಿಯಂಟ್ ಅನ್ನು ಮುಂಗಡವಾಗಿ ಬುಕ್ ಮಾಡಿದ ಗ್ರಾಹಕರು ಎಸ್ ಟಿಯ 5.1 kWh ಅಥವಾ 3.4 kWh ವೇರಿಯಂಟ್ಗಳಲ್ಲಿ ಒಂದನ್ನು ಖರೀದಿಸಲು ಸಾಧ್ಯವಾಗುತ್ತದೆ. ಜೊತೆಗೆ ಅವರಿಗೆ ಪರಿಚಯಾತ್ಮಕ ಲಾಯಲ್ಟಿ ಬೋನಸ್ ರೂ.10,000 ದೊರೆಯಲಿದೆ.)
• ಕಾಪರ್ ಬ್ರೋಂಜ್ ಮ್ಯಾಟ್, ಕೋರಲ್ ಸ್ಯಾಂಡ್ ಸ್ಯಾಟಿನ್, ಟೈಟಾನಿಯಂ ಗ್ರೇ ಮ್ಯಾಟ್, ಸ್ಟಾರ್ಲೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.
ಟಿವಿಎಸ್ ಐಕ್ಯೂಬ್ ಎಸ್‌ಟಿ (3.4 kWh) - ಟಿವಿಎಸ್ ಐಕ್ಯೂಬ್ ಸುಧಾರಿತ ತಂತ್ರಜ್ಞಾನದಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ವಾಹನ:
• ಬ್ಯಾಟರಿ ಸಾಮರ್ಥ್ಯ - 3.4 kWh
• ನಿಜವಾದ ರೇಂಜ್ 100 ಕಿ.ಮೀ
• 7 ಇಂಚಿನ ಪೂರ್ತಿ ಕಲರ್ ಟಿ ಎಫ್ ಟಿ ಟಚ್ಸ್ಕ್ರೀನ್
• ಚಾರ್ಜರ್ - 950W
• ಚಾರ್ಜಿಂಗ್ ಸಮಯ 2 ಗಂಟೆ 50 ಮೀ (0-80%)
• 118+ ಕನೆಕ್ಟೆಡ್ ಫೀಚರ್ ಗಳು
• ಐಕ್ಯೂಬ್ ಗಾಗಿ ವಾಯ್ಸ್ ಅಸಿಸ್ಟ್ ಮತ್ತು ಅಲೆಕ್ಸಾ ಸ್ಕಿಲ್ಸೆಟ್ ಆಧಾರಿತ ವ್ಯವಸ್ಥೆ
• ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್
• ಟಿಪಿಎಂಎಸ್
• 32 ಲೀಟರ್ ಸೀಟ್ ಸ್ಟೋರೇಜ್ ಸ್ಪೇಸ್
• ಗರಿಷ್ಠ ವೇಗ ಪ್ರತೀ ಗಂಟೆಗೆ 78 ಕಿಮೀ
• ಬೆಲೆ: ರೂ. 155,555 ಎಕ್ಸ್ ಶೋ ರೂಂ ಬೆಂಗಳೂರು (ಇಎಂಪಿಎಸ್ ಸಬ್ಸಿಡಿ ಒಳಗೊಂಡಿದೆ)
• ಕಾಪರ್ ಬ್ರೊಂಜ್ ಮ್ಯಾಟ್, ಕೋರಲ್ ಸ್ಯಾಂಡ್ ಸ್ಯಾಟಿನ್, ಟೈಟಾನಿಯಂ ಗ್ರೇ ಮ್ಯಾಟ್, ಸ್ಟಾರ್ಲೈಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ