ಬೆಂಗಳೂರು : ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್.ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮೇ 9ರಂದು ಏರ್ಪಡಿಸಲಾಗಿತ್ತು.
ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಐಶ್ವರ್ಯ ಶ್ರೀನಿಧಿ ಕುಲಕರ್ಣಿ ಅವರು ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಅಪರೂಪದ ಹರಿದಾಸರ ಕೃತಿಗಳನ್ನು ಪ್ರಸ್ತುತಪಡಿಸಿದರು..
ಇವರ ಗಾಯನಕ್ಕೆ ಕು|| ಸೃಷ್ಟಿ ದೇಸಾಯಿ ಹಾರ್ಮೋನಿಯಂ ವಾದನದಲ್ಲಿ ಹಾಗೂ ಚಿ|| ಋತುಪರ್ಣ ದೇಸಾಯಿ ತಬಲಾ ವಾದನದಲ್ಲಿ ಸಾಥ್ ನೀಡಿದರು. ಶ್ರೀ ನಂದಕಿಶೋರ್ ಆಚಾರ್ ಕಲಾವಿದರಿಗೆ ಶೇಷವಸ್ತ್ರ ಮತ್ತು ಪ್ರಸಾದ ವಿತರಿಸಿದರು.