ಹಲಸೂರಿನಲ್ಲಿ ವೈಭವದಿಂದ ಜರುಗಿದ ಪ್ರಖ್ಯಾತ ಪಲ್ಲಕ್ಕಿಗಳ ಉತ್ಸವ*

VK NEWS
By -
0

ಬೆಂಗಳೂರು ನಗರದ ಹಲಸೂರಿನಲ್ಲಿ ಭಾನುವಾರದಂದು ಪ್ರಖ್ಯಾತ ಪಲ್ಲಕ್ಕಿಗಳ ವಾರ್ಷಿಕ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಉತ್ಸವದಲ್ಲಿ ನಾಡಿನ ಹಾಗೂ ಹೊರ ರಾಜ್ಯಗಳ ಆಸ್ತಿಕ ಭಕ್ತರು ಪ್ರತಿ ವರ್ಷದಂತೆ, ಈ ಬಾರಿಯೂ ಶ್ರದ್ದಾ ಭಕ್ತಿಗಳಿಂದ ಆಗಮಿಸಿ, ತಮ್ಮ ಆರಾಧ್ಯ ದೇವರುಗಳು ಮಧ್ಯ ರಾತ್ರಿ ದಾಟುತ್ತಿದ್ದಂತೆ ವಿಶೇಷ ಅಲಂಕಾರವನ್ನು ಒಳಗೊಂಡ ಹಾಗೂ ಹೂವುಗಳಿಂದ ಸಿಂಗಾರಗೊಂಡು ಮಿನುಗುವ ದೀಪಾಲಂಕಾರ ವ್ಯವಸ್ಥೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿಬರುವ ವ್ಯಭವವನ್ನು ಕಣ್ಣಾರೆ ಕಾಣಲು, ಹೆಚ್ಚಿನ ಸಂಖ್ಯೆಯಲ್ಲಿ  ಉತ್ಸಾಹಭರಿತರಾಗಿ ಪಾಲ್ಗೊಂಡಿದ್ದರು. ಈ ಬಾರಿ ಹಲಸೂರಿನ ಶ್ರೀ ಸೋಮೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ, ಶ್ರೀಗಂಗಮ್ಮ ತಾಯಿ, ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ದೇವರುಗಳೊಂದಿಗೆ ಹಲಸೂರಿನ ಸುತ್ತಮುತ್ತಲಿನ ಭಾಗಗಳ ಹಲವಾರು ದೇವಸ್ಥಾನಗಳಿಂದಲೂ ಶ್ರೀ ವಿನಾಯಕ ಸ್ವಾಮಿ, ಶ್ರೀ ವೆಂಕಟರಮಣ ಸ್ವಾಮಿ, ಶ್ರೀ  ಸುಬ್ರಹ್ಮಣ್ಯೇಶ್ವರ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಮಾರಮ್ಮ ದೇವಿ ಮೊದಲಾದ ದೇವರುಗಳ  ಸುಮಾರು ಎಪ್ಪತ್ತೇಳಕ್ಕೂ ಅಧಿಕ ಸಂಖ್ಯೆಯ ತೇರು ಹಾಗೂ ಪಲ್ಲಕ್ಕಿಗಳು ದೇವರ ಉತ್ಸವ ಮೂರ್ತಿಗಳನ್ನು ಹೊತ್ತು ಸಾಲಾಗಿ ಸಾಗಿ ಬಂದಿತು, ಈ ವೇಳೆ ಮಾಜಿ ಪಾಲಿಕೆ ಸದಸ್ಯರಾದ ಶ್ರೀಮತಿ ಮಮತಾ ಸರವಣ ದಂಪತಿಗಳು ಸಹ ಉತ್ಸವದಲ್ಲಿ ಬಂದಿದ್ದ ದೇವರುಗಳಿಗೆ ಪೂಜೆ ಸಲ್ಲಿಸಿದರು. ಭಕ್ತರಿಂದ ಹರಕೆ ಪೂಜೆಗಳನ್ನು ಸ್ವೀಕರಿಸುತ್ತಾ ಭಾನುವಾರ ಸಂಜೆತನಕ ಸಾರ್ವಜನಿಕರಿಗೆ ದರ್ಶನ ನೀಡಿದ ನಂತರ ತಮ್ಮ ಮೂಲ ಸ್ಥಾನಗಳಿಗೆ ಹಿಂತಿರುಗಿತು.







Post a Comment

0Comments

Post a Comment (0)