ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಶಾಲಾ ದಾಖಲಾತಿ ಪ್ರಕಾರ 1952 ಜೂನ್ 5 ರಂದು (ನಿಜ ಹುಟ್ಟು 1.12.1951) ಬೆಂಗಳೂರು ಗ್ರಾಮಾಂತರ ಹೆಬ್ಬಗೋಡಿಯಲ್ಲಿ ಜನಿಸಿದರು. ತಂದೆ ದಫೇದಾರ್ ಗಂಗಯ್ಯ. ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಮಾಧ್ಯಮಿಕ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ವಿದ್ವಾನ್ ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ (1970-75) ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ, ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೆöÊತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೆಯ ರ‍್ಯಾಂಕಿನೊಡನೆ ‘ಕುವೆಂಪು ಚಿನ್ನದ ಪದಕ’, ಸಂಸ್ಕೃತ ಎಂ.ಎ., ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ. ಕನಕಪುರದಲ್ಲಿ ಕನ್ನಡ ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭ.
ಬೆಂಗಳೂರಿನ ಮಹಾನಗರ ಪಾಲಿಕೆಯ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತ. 1992ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರವೇಶ.
ಅಲ್ಲಿ ಪ್ರವಾಚಕ, ಅಧ್ಯಯನಾಂಗದ ನಿರ್ದೇಶಕ 1998ರಲ್ಲಿ ಕುಲಸಚಿವ. 2001ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ. 2004ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ಡೀನ್ ಮತ್ತು ಪ್ರಸಾರಾಂಗದ ನಿರ್ದೇಶಕ, 2008ರಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿ ನೇಮಕ. 2010 ಮೇ 26ರಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ. 2015ರಿಂದ ಕಲಬುರಗಿಯ ಪಾಲಿ ಇನ್‌ಸ್ಟಿಟ್ಯೂಟ್ ಸಂಸ್ಥೆಯ ಗೌರವ ನಿರ್ದೇಶಕ. ನೂರಕ್ಕೂ ಹೆಚ್ಚು ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಗೆ ಸಂಬAಧಿಸಿದAತೆ ಪುಸ್ತಕಗಳ ಪ್ರಕಟಣೆ. ವಿಶೇಷವಾಗಿ ಕೆಳದಿ ಬಸವರಾಜ ಭೋಪಾಲನ ‘ಶ್ರೀ ಶಿವತತ್ತ÷್ವರತ್ನಾಕರ’ ಮತ್ತು ಮೂರನೆಯ ಸೋಮೇಶ್ವರನ ‘ಅಭಿಲಾಷಿತಾರ್ಥ ಚಿಂತಾಮಣಿ’ (ಮಾನಸೋಲ್ಲಾಸ) ಸಂಸ್ಕೃತ ವಿಶ್ವಕೋಶಗಳ ಮೂಲ ಅನುವಾದ, ಟಿಪ್ಪಣಿಗಳೋಡನೆ ವಿದ್ವತ್ ಸಂಪಾದನೆ. ಕನ್ನಡದ ಅನುಭಾವಿ ಕವಿ ಮಹಲಿಂಗರAಗನ ಅನುಭವಾಮೃತ ವೇದಾಂತಕಾವ್ಯವನ್ನು ಆಧರಿಸಿದ ‘ಬ್ರಹ್ಮಯಾನ’ ಬೃಹತ್ ಸಂಪುಟದ ರಚನೆ. ಎಂಬತ್ತೆöದು ಸಂತರನ್ನು ಒಳಗೊಂಡ ಭವದ ಬೆಳಗು, ಲೋಕದ ಬೆಡಗು, ಇಳೆಯ ಬೆರಗು ಕೃತಿಗಳ ಪ್ರಕಟಣೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2008ರಲ್ಲಿ ‘ಗೌರವ ಪ್ರಶಸ್ತಿ’ ಹಾಗೂ 2009ರಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, 2011ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ‘ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’. 2012ರಲ್ಲಿ ಸಿದ್ಧಗಂಗಾ ಮಠದಿಂದ ‘ಸಿದ್ಧಗಂಗಾಶ್ರೀ ಪ್ರಶಸ್ತಿ’. 2016-ಶಾಸ್ತçಚೂಡಾಮಣಿಯಾಗಿ ರಾಷ್ಟಿçಯ ಸಂಸ್ಕೃತ ಸಂಸ್ಥಾನ, ನವದೆಹಲಿಯಿಂದ ಆಯ್ಕೆ. 2017ರಲ್ಲಿ ಶಿವಗಂಗೆಯ ಮೇಲಣಗವಿಮಠದಿಂದ ‘ಶಿವಗಂಗಾಶ್ರೀ ಪ್ರಶಸ್ತಿ’ ಮತ್ತು ಬೆಂಗಳೂರಿನ ಬಸವ ವೇದಿಕೆ ಸಂಸ್ಥೆಯಿAದ ‘ವಚನ ಸಾಹಿತ್ಯಶ್ರೀ ಪ್ರಶಸ್ತಿ’. 2018ರಲ್ಲಿ ಸಂಸ್ಕೃತಿ ಪ್ರಕಾಶನ ಸೇಡಮ್ `ಸಂಸ್ಕೃತಿ ಸಮ್ಮಾನ್ ಪ್ರಶಸ್ತಿ’. ಅಮ್ಮೆಂಬಳ ಶಂಕರನಾರಾಯಣ ನಾವಡ ಪ್ರತಿಷ್ಠಾನದಿಂದ `ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’, 2020ರಲ್ಲಿ ಹಾವೇರಿಯ ಬಸವಕೇಂದ್ರ, ಶ್ರೀ ಹೊಸಮಠದಿಂದ `ಡಾ.ಶಿಮುಶ ಪ್ರಶಸ್ತಿ’, 2020ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಆಜೀವ ಸದಸ್ಯ ಪುರಸ್ಕಾರ’, ಸಾಗರದ ಪ್ರಜ್ಞಾಭಾರತಿ ವಿದ್ಯಾಮಂದಿರದಿAದ ‘ವಿದ್ವಾನ್ ಎನ್.ರಂಗನಾಥಶರ್ಮಾ ಸಂಸ್ಕೃತಿ ಪುರಸ್ಕಾರ’. 2021ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’, 2021ರಲ್ಲಿ ಧರ್ಮಸ್ಥಳದ ಎಂಬತ್ತೊ0ಬತ್ತನೆಯ ಅಧಿವೇಶನದಲ್ಲಿ ನಡೆದ `ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ. 2022ರಲ್ಲಿ ಆರ್ಯಭಟ ಸಾಹಿತ್ಯ ಸಂಘದಿAದ ಸಂಸ್ಕೃತ ಸೇವೆಗಾಗಿ ‘ಅಂತಾರಾಷ್ಟಿçಯ ಆರ್ಯಭಟ ಪುರಸ್ಕಾರ’ ಮತ್ತು ಗೋವಿಂದ ಪೈ ಸಂಶೋಧನ ಕೇಂದ್ರದಿAದ ‘ಸೇಡಿಯಾಪು ಕೃಷ್ಣಭಟ್ಟ ಸಾಹಿತ್ಯ ಪ್ರಶಸ್ತಿ’, ಚೇಂಬೂರು ಕರ್ನಾಟಕ ಸಂಘ, ಮುಂಬಯಿ ಇವರಿಂದ `ರಾಷ್ಟಿçಯ ಕನ್ನಡರತ್ನ ಪ್ರಶಸ್ತಿ’(2022), ಬಸವ ಅಂತಾರಾಷ್ಟಿçಯ ಪ್ರತಿಷ್ಠಾನ ಲಂಡನ್ ಇವರಿಂದ `ಸಿದ್ಧಗಂಗಾಸಿರಿ ಪ್ರಶಸ್ತಿ’ (2022), ಕೆಳದಿಸಂಸ್ಥಾನ ರಾಜಗುರು ಹಿರೇಮಠದಿಂದ `ಶಿವತತ್ತ÷್ವ ಭೂಷಣ ಪ್ರಶಸ್ತಿ’(2023). ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ಬೆಂಗಳೂರು ಇವರಿಂದ ‘ಪ್ರಕಾಶಕ ಟಿ.ಎಸ್.ಛಾಯಪತಿ ಸಂಸ್ಕೃತಿ ಪುರಸ್ಕಾರ’ (2024).
ವಿಳಾಸ: ‘ಪೂರ್ಣಪ್ರೀತಿ’, #296, 10ನೆಯ ಮುಖ್ಯರಸ್ತೆ, ಎಂ.ಇ.ಐ. ಬಡಾವಣೆ, ಬಾಗಲಗುಂಟೆ,
ಬೆಂಗಳೂರು 560 073.
ಮೊಬೈಲ್: 94482 91802