ಅಮಿತ್ ಶಾ ಸಂಧಾನ, ಮುನಿಸು ಮರೆತ ಎಸ್ ಆರ್ ವಿಶ್ವನಾಥ್ ಮತ್ತು ಡಾ ಕೆ ಸುಧಾಕರ್

VK NEWS
By -
0


 

ಬೆಂಗಳೂರು: ನಿನ್ನೆ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ  ನಡೆಸಿದ ಸಂಧಾನ ಫಲ ನೀಡಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟ್ ಡಾ ಕೆ ಸುಧಾಕರ್  ಮತ್ತು ಆ ಕ್ಷೇತ್ರವನ್ನು ತನ್ನ ಮಗನಿಗೆ ಗಿಟ್ಟಿಸಿಕೊಳ್ಳಬೇಕೆಂದುಕೊಂಡಿದ್ದ ಯಲಹಂಕದ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ನಡುವೆ ಮುಸುಕಿನ ಗುದ್ದಾಟವಲ್ಲ ಬಹಿರಂಗವಾಗೇ ವಾಕ್ಸಮರ ನಡೆದಿತ್ತು. ಪರಸ್ಪರ ವಾಗ್ದಾಳಿಗಳನ್ನು ನಡೆಸಿದ್ದರು ಮತ್ತು ಪ್ರಚಾರಕ್ಕೆ ಹೋಗಲ್ಲ ಅಂತ ವಿಶ್ವನಾಥ್ ಪಟ್ಟು ಹಿಡಿದಿದ್ದರು. 

ಆದರೆ ಬಿಜೆಪಿಯ ಚಾಣಕ್ಕ ಅಮಿತ್ ಶಾ ನಿನ್ನೆ ಅವರಿಬ್ಬರೊಂದಿಗೆ ಮಾತಾಡಿದ ಪರಿಣಾಮವಾಗಿ ಮುನಿಸು ಅಂತ್ಯಕಂಡಿದೆ. ಇಂದು ಬೆಳ್ಳಂಬೆಳಗ್ಗೆಯೇ ಡಾ ಸುಧಾಕರ್ ಬೋಕೆಯೊಂದಿಗೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ವಿಶ್ವನಾಥ್ ಮನೆ ಕದ ತಟ್ಟಿದರು. ಉಭಯ ನಾಯಕರ ನಡುವೆ ಮಾತುಕತೆಯ ಉಪಹಾರ ಸೇವೆನೆಯೂ ನಡೆಯಿತು. ಕೆಲ ಸ್ಥಳೀಯ ನಾಯಕರು ಸಹ ಅವರೊಂದಿಗಿದ್ದರು. ವಿಶ್ವನಾಥ್ ಜೊತೆ ಮಾತಾಡಿದ ಬಳಿಕ ಸುಧಾಕರ್ ಈಗ ನಿರಾಳರಾಗಿರಬೇಕು, ಯಾಕೆಂದರೆ ಬಿಜೆಪಿ ಶಾಸಕ ಯಲಹಂಕ ಭಾಗದಲ್ಲಿ ಅತ್ಯಂತ ಪ್ರಭಾವಿ ಜನನಾಯಕ ಎನಿಸಿಕೊಂಡಿದ್ದಾರೆ.

Post a Comment

0Comments

Post a Comment (0)