ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಜಾಜಿನಗರ 2ನೇ ಹಂತದ ಪ್ರದೇಶದಲ್ಲಿ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯನವರು ಕಾಂಗ್ರೆಸ್ ಅಭ್ಯರ್ಥಿ ಪ್ರೊ. ಎಂ. ವಿ. ರಾಜೀವ್ ಗೌಡರವರೊಡಗೂಡಿ ಅವರ ಪರವಾಗಿ ಭಾನುವಾರ ಮಧ್ಯಾಹ್ನ ತೆರೆದ ವಾಹನದಲ್ಲಿ, ರೋಡ್ ಶೋ ನಡೆಸಿದರು.
ಕ್ಷೇತ್ರಾದ್ಯಂತ ಸಾರ್ವಜನಿಕರ ಸಹಕಾರ ಕೋರಿ ಮತ ಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಮಾಜಿ ಮಹಾಪೌರರುಗಳಾದ ಶ್ರೀ ರಾಮಚಂದ್ರಪ್ಪ, ಶ್ರೀ ಜೆ. ಹುಚ್ಚಪ್ಪ, ಕ್ಷೇತ್ರದ ಕಾಂಗ್ರೆಸ್ ಮುಖಂಡರುಗಳಾದ ಶ್ರೀ ಅನೂಪ್ ಅಯ್ಯಂಗಾರ್, ಶ್ರೀ ಎ. ಎನ್. ನಟರಾಜ್ ಗೌಡ, ಶ್ರೀಮತಿ ರಶ್ಮಿ ರವಿ ಕಿರಣ್,
ಶ್ರೀಮತಿ ಉಮಾ ಬಾಯಿ, ಶ್ರೀ ರಘು ಎನ್, ಶ್ರೀ ಆಶೀಕ್ ಗೌಡ, ಶ್ರೀಮತಿ ಸುಮಿತ್ರ ಮುಂತಾದ ಅನೇಕ ನಾಯಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ದ್ವಿಚಕ್ರ ವಾಹನಗಳಲ್ಲಿ ಕಾಂಗ್ರೆಸ್ ಧ್ವಜಗಳನ್ನು ಹಿಡಿದು, ರಾಜ್ಯ ಸರ್ಕಾರದ ಸಾಧನೆಗಳ, ಗ್ಯಾರಂಟಿಗಳ ಅನುಷ್ಠಾನದ ಕುರಿತಾದ ಮಾಹಿತಿಗಳನ್ನು ಪ್ರಚುರಪಡಿಸುತ್ತಾ, ಪಕ್ಷದ ರಾಷ್ಟ್ರೀಯ ಮುಖಂಡರ ಹಾಗೂ ಪಕ್ಷದ ಪರ ಜಯ ಗೋಷಗಳನ್ನು ಹೇಳುತ್ತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಮನವಿ ಮಾಡುತ್ತಾ ರೋಡ್ ಶೋ ನಲ್ಲಿ ಭಾಗವಹಿಸಿದ್ದರು.