ಬೆಂಗಳೂರು, ಕರ್ನಾಟಕ: ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾಗಿದ್ದು, ರೋಗಿಗಳ ಕೇಂದ್ರಿತ ಆರೈಕೆಯಲ್ಲಿ ಹೆಸರು ಗಳಿಸಿರುವ ಕಾವೇರಿ ಆಸ್ಪತ್ರೆಯು ಬೆಂಗಳೂರಿನಲ್ಲಿ ತನ್ನ ಎರಡನೇ ಆಸ್ಪತ್ರೆಯನ್ನು ಆರಂಭಿಸುತ್ತಿದೆ.
ಮಾರತಹಳ್ಳಿಯಲ್ಲಿ ಏಪ್ರಿಲ್ 6ರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಹಾಗೂ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದು ನಮಗೆ ಸಂತೋಷವಾಗಿದೆ.
ದಕ್ಷಿಣ ಭಾರತದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಎರಡನೇ ಆಸ್ಪತ್ರೆಯನ್ನು ಆರಂಭಿಸುವ ಮೂಲಕ ಕಾವೇರಿ ಆಸ್ಪತ್ರೆಯ ವಿಸ್ತರಣೆಯು ಆರೋಗ್ಯ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಬೆಂಗಳೂರಿನ ಜನರಿಗೆ ಸಹಾನುಭೂತಿಯ ವೈದ್ಯಕೀಯ ಸೇವೆ ಮತ್ತು ಆರೈಕೆ ನೀಡುವುದಕ್ಕೆ ಕಾವೇರಿ ಆಸ್ಪತ್ರೆ ಬದ್ಧವಾಗಿದೆ.
ಜಾಗತಿಕ ಮಟ್ಟದ ಆರೋಗ್ಯಸೇವಾ ಮೂಲಸೌಕರ್ಯಗಳೊಂದಿಗೆ ಸೇವೆ ನೀಡುವ ನೀಡುವ ನಿಟ್ಟಿನಲ್ಲಿ ಕಾವೇರಿ ಆಸ್ಪತ್ರೆಯ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ. ದಕ್ಷಿಣ ಭಾರತದಲ್ಲಿ ಕಾವೇರಿಯ ಆಸ್ಪತ್ರೆಯು 16 ಆಸ್ಪತ್ರೆಗಳ ಜಾಲವನ್ನು ಹೊಂದಿರುವುದು ಕೂಡ ಮೈಲುಗಲ್ಲು ಆಗಿದೆ. ಆಸ್ಪತ್ರೆಯು ರೋಗಿಗಳ ಯೋಗಕ್ಷೇಮ ಮತ್ತು ಕ್ಲಿನಿಕಲ್ ನಾವೀನ್ಯತೆಯಲ್ಲಿ ಮುಂಚೂಣಿಯತ್ತಾ ಸಾಗುತ್ತಿದೆ.
Advt.