ಕಾಂಗ್ರೆಸ್‌ನವರೇ ರಾಹುಲ್‌ ಗಾಂಧಿಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ: ಮೋಹನ್‌ ಯಾದವ್‌

VK NEWS
By -
0

 ಜಬಲ್ಪುರ (ಮಧ್ಯಪ್ರದೇಶ): ಲೋಕಸಭಾ ಚುನಾವಣೆಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಮೂಲಕ ಗೆಲುವು ಸಾಧಿಸಿದರೆ, ದೇಶದಲ್ಲಿ ಶಾಂತಿ ನೆಲೆಸುವುದಿಲ್ಲ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌  ಅವರು, ರಾಹುಲ್ ಮಾತಿನಲ್ಲಿ ಯಾವುದೇ ಸತ್ಯವಿಲ್ಲ. ಕಾಂಗ್ರೆಸ್‌ ಪಕ್ಷವೂ ರಾಹುಲ್‌ ಗಾಂಧಿಯವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್‌ ಗಾಂಧಿ ಹೇಳಿಕೆಯಲ್ಲಿ ಯಾವುದೇ ಗಂಭೀರತೆ ಇಲ್ಲ, ಏಕೆಂದರೆ ಅವರದೇ ಪಕ್ಷದವರು ರಾಹುಲ್‌ ಗಾಂಧಿಯವರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ, ಬೇರೆಯವರು ಹೇಗೆ ಅವರನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ.

ಚುನಾವಣಾ ಪ್ರಕ್ರಿಯೆ ಗರಿಗೆದರಿದಂತೆ ಕಾಂಗ್ರೆಸ್‌ ಪಕ್ಷದ ಸುಳಿವೇ ಇಲ್ಲ. ಈ ಬೆಳವಣಿಗೆಗೆ ರಾಹುಲ್‌ ಅವರೇ ಕಾರಣ. ಕಾಂಗ್ರೆಸ್‌ ಪಕ್ಷವನ್ನಾಗಲಿ ಅಥವಾ ಚುನಾವಣೆಯನ್ನಾಗಲಿ ರಾಹುಲ್‌ ಗಂಭೀರವಾಗಿ ತೆಗೆದುಕೊಂಡಿಲ್ಲ. ಕಾಂಗ್ರೆಸ್‌ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು ಎಂದರು.

ಜೆ.ಪಿ ನಡ್ಡಾ ಅವರೊಂದಿಗೆ ಜಬಲ್ಪುರದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಾದವ್‌, ಇಂದೋರ್‌ ಹಾಗೂ ಉಜ್ಜಯಿನಿಯಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಲಿದ್ದಾರೆ.

Post a Comment

0Comments

Post a Comment (0)