ಮತ್ತೊಮ್ಮೆ ಮೋದಿ ಸರಕಾರದ ಆಡಳಿತ ಖಚಿತ: ಡಾ.ಸಿ.ಎನ್.ಅಶ್ವತ್ಥನಾರಾಯಣ್

VK NEWS
By -
0

ಬೆಂಗಳೂರು: ದೇಶದ ಜನತೆ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರಕಾರವನ್ನು ಮೂರನೇ ಬಾರಿಗೆ ಎದುರು ನೋಡುತ್ತಿದ್ದಾರೆ. ಖಂಡಿತ ಮೋದಿಜೀ ಅವರು ಮತ್ತೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು  ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಹೋಟೆಲ್ ಜಿ.ಎಂ. ರಿಜಾಯ್ಸ್‍ನ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ. 26ರ 2ನೇ ಹಂತದ ಚುನಾವಣೆಯು ಭರವಸೆದಾಯಕ ಸರಕಾರ ಬಯಸುವಂಥದ್ದು. ಮೋದಿ ಅಣ್ಣ ನಮ್ಮೆಲ್ಲರ ಭರವಸೆ, ನಂಬಿಕೆಯ ನಾಯಕ ಎಂದು ನುಡಿದರು.

ಬಿಜೆಪಿ ಪ್ರಾಬಲ್ಯತೆಯನ್ನು ಪಡೆಯಲು ಕರ್ನಾಟಕದಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕಿದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತದಲ್ಲಿ ಡಾ. ಸಿ.ಎನ್. ಮಂಜುನಾಥ್ ಅವರು ಗೆಲುವು ಕಾಣಬೇಕು. ಈ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಾಗಬೇಕಿದೆ ಎಂದು ತಿಳಿಸಿದರು.

ಡಾ. ಸಿ.ಎನ್. ಮಂಜುನಾಥ್ ಅವರ ಅಭ್ಯರ್ಥಿತನವನ್ನು ಡಿಕೆ ಬ್ರದರ್ಸ್ ಅಥವಾ ನಾವು ನಿರೀಕ್ಷೆ ಮಾಡಿರಲಿಲ್ಲ. ಎಲ್ಲ ಕಾಲ ಕೂಡಿ ಬಂದಿದೆ. ಪ್ರಕೃತಿಯೇ ಅವರ ಅಭ್ಯರ್ಥಿತನವನ್ನು ಬಯಸಿದೆ. ಮೋದಿ ಟೀಂನಲ್ಲಿ ಜನಾಧರಿತ ಆಡಳಿತ ನೀಡಲು ಮಂಜುನಾಥ ಅವರಂಥ ಜನಪ್ರಿಯ ವ್ಯಕ್ತಿ ಬೇಕಿದೆ ಎಂದು ವಿಶ್ಲೇಷಿಸಿದರು. ಗ್ರಾಮಾಂತರದ ಉಸಿರುÀ ಕಟ್ಟಿಸುವ ವಾತಾವರಣದಿಂದ ಹೊರಬರಲು ಡಾ. ಮಂಜುನಾಥ್ ಅವರಂಥ ಅಭ್ಯರ್ಥಿ ಬೇಕು ಎಂದು ವಿಶ್ಲೇಷಿಸಿದರು.

ತಮ್ಮ ಪ್ರತಿಷ್ಠೆ, ತಮ್ಮ ಹಿಡಿತ, ತಮ್ಮ ಸ್ವಾರ್ಥವೇ ರಾಜಕಾರಣ ಎಂದು ಕೆಲವರು ಅಂದುಕೊಂಡಿದ್ದಾರೆ. ನಾವು ಜನರಿಗೆ ಅನುಕೂಲಕರ ವಾತಾವರಣವನ್ನು ಬಯಸುತ್ತೇವೆ. ಜನರಿಗೆ ಶಕ್ತಿ ತುಂಬುವ ಕಾರ್ಯ ಮಾಡಲು ಬಯಸುತ್ತೇವೆ. ನಾವು ದ್ವೇಷ, ಅಸೂಯೆಯ ರಾಜಕಾರಣ ಮಾಡಲು ಬಂದಿಲ್ಲ. ಪ್ರೀತಿಸುವ, ಪ್ರೀತಿಯ ರಾಜಕಾರಣ ಮಾಡಲು ಬಯಸುತ್ತೇವೆ ಎಂದು ವಿವರಿಸಿದರು.

ಬಿಜೆಪಿ ಜನಪರ ತತ್ವ, ಸಿದ್ಧಾಂತವನ್ನು ಹೊಂದಿದೆ. ಇಡೀ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ, ಜಾತಿ ಆಧರಿತ ರಾಜಕೀಯ, ವಂಶಪಾರಂಪರ್ಯ ರಾಜಕೀಯ ನಿರ್ಮೂಲನೆಗೆ ಬಿಜೆಪಿ ಬದ್ಧವಾಗಿದೆ. ಹಾಗಾಗಿ ಮೋದಿಯವರ ನಾಯಕತ್ವದಲ್ಲಿ ಎಲ್ಲ ಕಡೆ ಅಭಿವೃದ್ಧಿ ಕಾಣುವಂತಾಗಿದೆ. ಕಾಂಗ್ರೆಸ್‍ನವರು ನಮ್ಮ ನೀರು ನಮ್ಮ ಹಕ್ಕು ಎಂದು ಮಾತನಾಡಿದರು. ನಮ್ಮ ನೀರೂ ಇಲ್ಲ; ನಮ್ಮ ಹಕ್ಕು ಇಲ್ಲ. ಕಾವೇರಿ ನೀರಿನ 5ನೇ ಹಂತವನ್ನೂ ಸ್ಥಗಿತಗೊಳಿಸಿದರು. ಎಲ್ಲ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್ ಸರಕಾರವು ಸ್ಥಗಿತಗೊಳಿಸಿದ್ದರಿಂದ ಬೆಂಗಳೂರಿನ ನೀರಿನ ಕೊರತೆಗೆ ಕಾಂಗ್ರೆಸ್ಸೇ ಕಾರಣ ಎಂದು ಟೀಕಿಸಿದರು.

ಈಗ ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಿದ್ದಾರೆ. 77 ವರ್ಷಗಳಲ್ಲಿ ಹಣಕಾಸು ಆಯೋಗಗಳು ಯಾವ ರೀತಿ ನಿರ್ಣಯ ಮಾಡಿವೆ ಎಂಬುದು ಕಾಂಗ್ರೆಸ್ಸಿನವರಿಗೂ ಗೊತ್ತಿದೆ. ಆದರೆ, ಈಗ ಅವರ ನರೇಟಿವ್ ಬೇರೆಯೇ ಆಗಿದೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್‍ನವರು ಕೇವಲ ರಾಜಕೀಯಪ್ರೇರಿತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್, ಮಾಜಿ ಸಚಿವ ಮುನಿರತ್ನ, ರಾಜ್ಯ ವಕ್ತಾರ ಅಶೋಕ್ ಗೌಡ ಮತ್ತಿತರ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Post a Comment

0Comments

Post a Comment (0)