ಯದುವೀರ್ ಒಡೆಯರ್ ದತ್ತುಪುತ್ರ : ಅಭ್ಯರ್ಥಿ ಎಂ ಲಕ್ಷ್ಮಣ್

VK NEWS
By -
0


 

ಮಡಿಕೇರಿ/ಮೈಸೂರು: ನಗರದಲ್ಲಿ ಬುದವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ ಲಕ್ಷ್ಣಣ್ , ಯದುವೀರ್ ಅವರು ರಾಜಮನೆತನಕ್ಕೆ ಸೇರಿದವರಲ್ಲ. ಅವರ ಆದ್ಯತೆಗಳೇನು? ಕೇವಲ ಕೈ ಎತ್ತುವುದಕ್ಕೆ ಅಷ್ಟೇ ಅವರ ಆಯ್ಕೆ ಸೀಮಿತವೇ? ಕೇವಲ ತಲೆ ಲೆಕ್ಕಾಚಾರಕ್ಕಷ್ಟೇ ನಾವು ನಮ್ಮ ಸಂಸದರನ್ನು ಆರಿಸಿ ಕಳುಹಿಸುವುದೇ ಎಂದು ಪ್ರಶ್ವೆಗಳ ಸುರಿಮಳೆಗೈದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ರಾಜಮನೆತನದವರು ಅಲ್ಲ, ಅವರು ದತ್ತುಪುತ್ರ ಎಂದು ಅವರ ಎದುರಾಳಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಣಣ್ ಅವರು ಟೀಕಿಸಿದ್ದಾರೆ. 

ರಾಜ್ಯದಲ್ಲಿ ನಾವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಒಂದು ವೇಳೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಈಗ ಜನರಿಗೆ ನೀಡಿರುವ 25 ಗ್ಯಾರಂಟಿಗಳನ್ನೂ ಜಾರಿಗೆ ತರುತ್ತವೆ ಎಂದು ತಿಳಿಸಿದರು.

ಇದೇವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಳೆದ 10 ತಿಂಗಳಿಂದ ಕೊಡಗಿನಲ್ಲಿ ಯಾವುದಾದರೂ ಹಿಂಸಾಚಾರ ನಡೆದಿದೆಯೇ? ಬಿಜೆಪಿಯ ಅಧಿಕಾರಾವಧಿಯಲ್ಲಿ ಕೋಮು ಸಂಘರ್ಷಕ್ಕೆ ಉತ್ತೇಜನ ನೀಡುವ ಪದ್ಧತಿಯಿತ್ತು. ಈಗ ಹಾಗಿಲ್ಲ ಎಂದರು.


Post a Comment

0Comments

Post a Comment (0)