ಕಾಂಗ್ರೆಸ್‌ಗೆ ಮತ್ತೆ ಹಿನ್ನಡೆ: ಗೌರವ್ ವಲ್ಲಭ್ ರಾಜೀನಾಮೆ

VK NEWS
By -
0


 

ನವದೆಹಲಿ: ಲೋಕಸಭೆ ಚುನಾವಣೆಯ  ಸಮಯದಲ್ಲಿ ಕಾಂಗ್ರೆಸ್‌ಗೆ  ಮತ್ತೆ ಹಿನ್ನಡೆಯಾಗಿದ್ದು ನಾಯಕ ಮತ್ತು ವಕ್ತಾರ ಗೌರವ್ ವಲ್ಲಭ್  ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೌರವ್ ವಲ್ಲಭ್ ರಾಜೀನಾಮೆ ಪತ್ರ ರವಾನಿಸಿದ್ದು, ತನ್ನ ರಾಜೀನಾಮೆ ಪತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಕಾಂಗ್ರೆಸ್ ಪಕ್ಷ ಸರಿಯಾಗಿ ದಾರಿಯಲ್ಲಿ ಸಾಗುತ್ತಿಲ್ಲ. ನಾನು ಸನಾತನ ವಿರೋಧಿ ಘೋಷಣೆ ಕೂಗುವುದಿಲ್ಲ. ರಾಷ್ಟ್ರದ ಸಂಪತ್ತಿನ ಸೃಷ್ಟಿಕರ್ತರನ್ನು ನಿಂದಿಸಲು ಸಾಧ್ಯವಿಲ್ಲ. ಹೀಗಾಗಿ ನಾನು ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ನನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ತ್ಯಜಿಸುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಹದಗೆಡುತ್ತಿರುವ ತಳಮಟ್ಟದ ಸಂಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಪ್ರತಿಪಕ್ಷವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್‌ ವಿಫಲವಾಗಿದೆ. ಹಿರಿಯ ನಾಯಕರು ಮತ್ತು ತಳಮಟ್ಟದ ಕಾರ್ಯಕರ್ತರ ನಡುವೆ ಭಾರೀ ಅಂತರವಿದೆ. ಈ ಅಂತರವನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. 

ಜಾತಿ ಆಧಾರಿತ ಜನಗಣತಿ ಮತ್ತು ಹಿಂದೂ ಸಮಾಜದ ವಿರುದ್ಧ ಪಕ್ಷ ಕೈಗೊಳ್ಳುತ್ತಿರುವ ನಿಲುವು ಸರಿಯಲ್ಲ. ಇದರಿಂದಾಗಿ ಪಕ್ಷದ ವಿಶ್ವಾಸಾರ್ಹತೆ ಹಾಳಾಗುತ್ತದೆ. ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸಿದಂತಾಗುತ್ತದೆ. ಇದು ನಿರ್ದಿಷ್ಟ ಧಾರ್ಮಿಕ ಗುಂಪಿನ ಕಡೆಗೆ ಒಲವನ್ನು ಸೂಚಿಸುತ್ತದೆ. ಅಷ್ಟೆ ಅಲ್ಲದೇ ಇದು ಕಾಂಗ್ರೆಸ್ ಪಕ್ಷದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಬರೆದಿದ್ದಾರೆ.

Post a Comment

0Comments

Post a Comment (0)