ಬೆಂಗಳೂರಿನಲ್ಲಿ ಆಯೋಜಿಸಿದ್ದ ವೇಳೋಜ್ ಈವೆ ಸಂಸ್ಥೆಯ 5 ನೀ ವರುಷದ ರೆಡ್ ಕಾರ್ಪೆಟ್ ಪ್ರಶಸ್ತಿ ಸಮಾರಂಭದಲ್ಲಿ , ಸಂಸ್ಥೆಯ ಸ್ಥಾಪಕ ಹಾಗೂ ನಿರ್ದೇಶಕಿ ಆದ ಶ್ರೀಮತಿ ಪದ್ಮಪ್ರಿಯಾ ರವರು ಮಾತನಾಡಿದರು.
ಸಮುದಾಯದಲ್ಲಿ ಬದಲಾವಣೆಗಾಗಿ ಶ್ರಮಿಸುತ್ತಿರುವ ಅರ್ಹ ಮಹಿಳೆಯರಿಗೆ ಉತ್ಸಾಹ ತುಂಬಿ ಪ್ರೋತ್ಸಾಹಿಸುವ ಸಲುವಾಗಿ ಅರ್ಹ ಸಾಧಕಿಯರನ್ನು ಗುರುತಿಸಿ IWDIAA ಪ್ರಶಸ್ತಿ ಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
IWDIAA ಬಲವಾಗಿ ನೈತಿಕ ಮೌಲ್ಯಗಳನ್ನು ನಂಬುತ್ತದೆ ಹಾಗೂ ಅರ್ಹ ಮಹಿಳೆಯರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತದೆ ಎಂದು ಪದ್ಮಪ್ರಿಯಾ ನುಡಿದರು.4623 ಅರ್ಜಿಗಳು ರಾಜ್ಯಾದ್ಯಂತ ಪ್ರಶಸ್ತಿಗಾಗಿ ಬಂದಿದ್ದವು, ಅದರಲ್ಲಿ 32 ಮಹಿಳಾ ಸಾಧಕಿಯರನ್ನು ಮಾತ್ರ ಆಯ್ಕೆ ಮಾಡಲಾಯಿತು ಎಂದರು.ಸಮಾಜದಲ್ಲಿ ನಿಜವಾಗಿಯೂ ಬದಲಾವಣೆಗಾಗಿ ಶ್ರಮಿಸುತ್ತಿರುವ ಮಹಿಳೆಯರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ Dr. ನಾಗಲಕ್ಷ್ಮಿ ಚೌಧರಿ, ಬಿಗ್ ಬಾಸ್ ಖ್ಯಾತಿಯ ತನಿಷ ಕುಪ್ಪಂದ, ನೀತು ವನಜಾಕ್ಷಿ, ನಟಿಯರಾದ ಯಮುನಾ ಶ್ರೀನಿಧಿ, ಶ್ವೇತಾ ಪ್ರಸಾದ್, ತೇಜಸ್ವಿನಿ ಶೇಖರ್, ಸೆಲೆಬ್ರಿಟಿ ಸಂಗೀತ ಹೊಳ್ಳ, ಹಾಗೂ ಶ್ರೀಮತಿ ಪರಿಮಳ ಜಗ್ಗೇಶ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Suma nagaraj ರವರಿಗೆ ಸಮಾಜ ಸೇವೆಗಾಗಿ ಪ್ರಶಸ್ತಿ ನೀಡಲಾಯಿತು
ADVERTISEMENT