ಕ್ಲಿಯರ್‌ಟ್ರಿಪ್ ಗೆ ಹೊಸ ನಾಯಕನ ನೇಮಕ; Mahendra Singh Dhoni ಮಹೇಂದ್ರ ಸಿಂಗ್ ಧೋನಿ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ

VK NEWS
By -
0

ಸಹಯೋಗದ ಭಾಗವಾಗಿಕ್ಲಿಯರ್‌ಚಾಯ್ಸ್‌ ಕುರಿತಾಗಿ ಅಪೀಲ್ ಮಾಡಿದ ಕ್ಲಿಯರ್‌ಟ್ರಿಪ್ ಮತ್ತು ಮಹೇಂದ್ರ ಸಿಂಗ್ ಧೋನಿ

ಬೆಂಗಳೂರು30 ಮಾರ್ಚ್ 2024: ಫ್ಲಿಪ್‌ಕಾರ್ಟ್ ಕಂಪನಿ ಆಗಿರುವ ಕ್ಲಿಯರ್‌ಟ್ರಿಪ್ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರನ್ನು ತನ್ನ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿಕೊಂಡಿದೆ. ಈ ಸಹಯೋಗವು ಕ್ಲಿಯರ್‌ಟ್ರಿಪ್‌ಗೆ ಮಹತ್ವದ ಮೈಲಿಗಲ್ಲಾಗಿದ್ದುಮಹೇಂದ್ರ ಸಿಂಗ್ ಧೋನಿ ಪ್ರಯಾಣದಲ್ಲಿ ಸೇರಿಕೊಂಡಿದ್ದಾರೆ ಮತ್ತು ಅವರೊ ಪ್ರಯಾಣ ಸಂದರ್ಭದಲ್ಲಿ ಸರಿಯಾದ ಆಯ್ಕೆಗಳನ್ನು ಮಾಡಲು ಸಲಹೆ ನೀಡುತ್ತಾರೆ. ಈ ಬ್ರಾಂಡ್ "ಕ್ಲಿಯರ್‌ಚಾಯ್ಸ್‌ಅಡಿಯಲ್ಲಿ ಪ್ರಯಾಣಿಕರು ನಿರ್ಧಾರ ತೆಗೆದುಕೊಳ್ಳುವುದನ್ನು ಸುಲಭ ಮಾಡುತ್ತದೆ ಮತ್ತು ಒತ್ತಡ ಮುಕ್ತ ಪ್ರವಾಸದ ಅನುಭವ ಒದಗಿಸುತ್ತದೆ.

ಕ್ಯಾಪ್ಟನ್ ಕೂಲ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ ಅವರು ಪಾರದರ್ಶಕ, ಆಶಾವಾದ ಮತ್ತು ನೇರ ಮಾತುಳಿಗೆ ಖ್ಯಾತರಾಗಿದ್ದಾರೆ ಮತ್ತು ಅವರು ಕ್ಲಿಯರ್‌ಟ್ರಿಪ್‌ನ ಮೌಲ್ಯಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆ. ಈ ಸಹಯೋಗದ ಮೂಲಕ ಕ್ಲಿಯರ್‌ಟ್ರಿಪ್ ಮಹೇಂದ್ರ ಸಿಂಗ್ ಧೋನಿಯ ಅವರ ಸಾರ್ವತ್ರಿಕ ಜನಾಕರ್ಷಣೆಯನ್ನು ಬಳಸಿಕೊಂಡು ವಿವಿಧ ಭೌಗೋಳಿಕ ಪ್ರದೇಶದಾದ್ಯಂತ ಇರುವ ವೈವಿಧ್ಯಮಯ ಗ್ರಾಹಕರಿಗೆ ಬ್ರಾಂಡ್ ಅನ್ನು ವಿಶ್ವಾಸಾರ್ಹ ಟ್ರಾವೆಲ್ ಪಾರ್ಟ್ನರ್ ಆಗಿ ಬಿಂಬಿಸಲಿದೆ. ಈ ಮೂಲಕ ಟ್ರಾವೆಲ್ ಅನ್ನು ಎಲ್ಲರಿಗೂ ಲಭ್ಯವಾಗಿಸುವ ಕ್ಲಿಯರ್‌ಟ್ರಿಪ್‌ನ ದೃಷ್ಟಿಗೆ ಪೂರಕವಾಗಿ ಗ್ರಾಹಕ ನೆಲೆ ಮತ್ತು ಮಾರುಕಟ್ಟೆ ಉಪಸ್ಥಿತಿಯನ್ನು ವಿಸ್ತರಣೆ ಮಾಡಲಿದೆ.

ಕ್ಲಿಯರ್‌ಟ್ರಿಪ್ ಬ್ರಾಂಡ್ ಅಂಬಾಸಿಡರ್ ಆಗಿರುವ ಮಹೇಂದ್ರ ಸಿಂಗ್ ಧೋನಿ, ನನ್ನ ವೃತ್ತಿಜೀವನದುದ್ದಕ್ಕೂ ಹಲವಾರು ಖಂಡಗಳಲ್ಲಿ ಪ್ರಯಾಣಿಸಿದ್ದೇನೆ. ಆ ಮೂಲಕ ನಾನು ನಿಜವಾದ ಗ್ಲೋಬ್‌ಟ್ರೋಟರ್(ವ್ಯಾಪಕವಾಗಿ ಪ್ರಯಾಣಿಸುವ ವ್ಯಕ್ತಿ) ಆಗಿದ್ದೇನೆ ಮತ್ತು ಪ್ರಯಾಣದ ಮೇಲಿನ ಪ್ರೀತಿಯನ್ನು ಆ ಮೂಲ ಕಂಡುಕೊಂಡಿದ್ದೇನೆ. ಪ್ರವಾಸ ಅನ್ನುವುದು ಈಗ ನಾನು ಎದುರು ನೋಡುತ್ತಿರುವ ಸಂಗತಿಯಾಗಿ ಮಾರ್ಪಟ್ಟಿದೆ. ಆನಂದ, ನೆನಪುಗಳು ಮತ್ತು ಅರ್ಥಪೂರ್ಣತೆ ಒದಗಿಸುವ ಪ್ರವಾಸ ಒದಗಿಸಲು ಬದ್ಧರಾಗಿರುವ ಬ್ರ್ಯಾಂಡ್ ಆದ ಕ್ಲಿಯರ್‌ಟ್ರಿಪ್‌ ಪ್ರಯಾಣದ ಭಾಗವಾಗಲು ನಾನು ಹೆಚ್ಚು ಸಂತೋಷಗೊಂಡಿದ್ದೇನೆ ನನ್ನ ವೃತ್ತಿಜೀವನದಲ್ಲಿ ನಾನು ಪ್ರತಿದಿನ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸುತ್ತಲೇ ಇರುತ್ತೇನೆ. ಆದರೆ ಕ್ಲಿಯರ್‌ಟ್ರಿಪ್‌ನಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರುತ್ತದೆ ಮತ್ತು ನೇರವಾಗಿರುತ್ತದೆ. ಅವರ ಪಾರದರ್ಶಕತೆ ಕಡೆಗಿನ ಬದ್ಧತೆಯಿಂದ ಆಯ್ಕೆ ನಿರ್ಧಾರ ತೆಗೆದುಕೊಳ್ಳುವುದು ಸರಳವಾಗುತ್ತದೆ ಮತ್ತು ಕನಸಿನ ಪ್ರವಾಸವನ್ನು ಆತ್ಮವಿಶ್ವಾಸದಿಂದ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಸಹಯೋಗದ ಕುರಿತು ಮಾತನಾಡಿದ ಕ್ಲಿಯರ್‌ಟ್ರಿಪ್‌ನ ಸಿಇಓ ಅಯ್ಯಪ್ಪನ್ ಆರ್,ಮಹೇಂದ್ರ ಸಿಂಗ್ ಧೋನಿ ಅವರನ್ನು ಕ್ಲಿಯರ್‌ಟ್ರಿಪ್ ಕುಟುಂಬಕ್ಕೆ ಸ್ವಾಗತಿಸಲು ನಾವು ಆನಂದ ಹೊಂದಿದ್ದೇವೆ. ಅವರು ಇಡೀ ಪೀಳಿಗೆಗೆ ಸ್ಫೂರ್ತಿ ನೀಡಿದ ಗೌರವಾನ್ವಿತ ಕ್ರೀಡಾಪಟುವಾಗಿದ್ದಾರೆ ಮತ್ತು ಅವರು ತಮ್ಮ ಮೌಲ್ಯಗಳಿಂದ ಹೆಸರುವಾಸಿಯಾಗಿದ್ದಾರೆ. ನಂಬಿಕಾರ್ಹ ಮತ್ತು ಉತ್ತಮ ನಾಯಕತ್ವ ಗುಣ ಹೊಂದಿದ್ದಾರೆ. ಅವರೊಂದಿಗಿನ ಒಡನಾಟದ ಮೂಲಕ, ನಾವು ಗ್ರಾಹಕರಿಗೆ ಪ್ರಯಾಣದ ವಿಚಾರದಲ್ಲಿ ಅತ್ಯುತ್ತಮವಾದ ಮತ್ತು ಸರಿಯಾದ ಆಯ್ಕೆಗಳನ್ನು ನಿರಾತಂಕವಾಗಿ ಮಾಡುವ ಅವಕಾಶ ಒದಗಿಸುತ್ತೇವೆ. ನಾವು ಬೆಳೆಯುತ್ತಾ ಹೋದಂತೆ ಎಲ್ಲರಿಗೂ ಅವರು ಯಾವುದೇ ಹಂತದಲ್ಲಿ ಇರುವವರಾದರೂ ಅವರಿಗೆ ಪ್ರಯಾಣ ಮಾಡುವ ಅವಕಾಶ ಒದಗಿಸುವ ಭರವಸೆ ಹೊಂದಿದ್ದೇವೆ. ಮಹೇಂದ್ರ ಸಿಂಗ್ ಧೋನಿ ಅವರ ಸಹಯೋಗದ ಜೊತೆಗೆ ನಾವು ದೊಡ್ಡ ಮಟ್ಟದ ಜನರಿಗೆ ವಿಶ್ವಾಸದ ಜೊತೆಗೆ ಜಗತ್ತು ಸುತ್ತುವ ಪ್ರೋತ್ಸಾಹವನ್ನು ನೀಡಲಿದ್ದೇವೆ ಎಂದು ಹೇಳಿದರು.
ಮಹೇಂದ್ರ ಸಿಂಗ್ ಧೋನಿ ಕ್ಲಿಯರ್‌ಟ್ರಿಪ್‌ನೊಂದಿಗಿನ ತಮ್ಮ ಚೊಚ್ಚಲ ಇನ್ನಿಂಗ್ಸ್ ಅನ್ನು ಮನರಂಜನಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಆರಂಭಿಸಲಿದ್ದಾರೆ. ಅದು ಶೀಘ್ರದಲ್ಲೇ ಪ್ರಸಾರವಾಗಲಿದೆ.
ಕ್ಲಿಯರ್‌ಟ್ರಿಪ್ ಮತ್ತು ಮಹೇಂದ್ರ ಸಿಂಗ್ ಧೋನಿ ಜೊತೆಯಾಗಿ ಕ್ಲಿಯರ್‌ಚಾಯ್ಸ್‌ ಮೇಲೆ ನಂಬಿಕೆ ಇಡಲು ಮತ್ತು ಸ್ಪಷ್ಟತೆ ಹೊಂದಿರುವ, ಆತ್ಮವಿಶ್ವಾಸದಿಂದ ಕೈಗೊಳ್ಳುವ ಮತ್ತು ಮರೆಯಲಾಗದ ಅನುಭವಗಳಿಂದ ಕೂಡಿದ ಪ್ರವಾಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಹಾಗಾಗಿ ಕ್ಲಿಯರ್‌ಟ್ರಿಪ್‌ಗೆ ಬನ್ನಿ, ನಾಯಕನ ಮುಂದಾಳತ್ವದಲ್ಲಿ ಮುನ್ನಡೆಯಿರಿ ಮತ್ತು ಸರಿಯಾದ ಆಯ್ಕೆಯನ್ನು ಕೈಗೊಳ್ಳಿ.

 


Post a Comment

0Comments

Post a Comment (0)