ಬೆಂಗಳೂರು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕ. ಸಾ.ಪ. ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ವತಿಯಿಂದ ಮಹಿಳಾ ದಿನಾಚರಣೆ ಏರ್ಪಡಿಸಲಾಗಿತ್ತು., ಇದೇ ಸಂದರ್ಭದಲ್ಲಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿಕ್ಷಕಿ ಪ್ರೇಮಲತಾ,ಸುಧಾ ಸಿ.ಎಸ್, ಮುಖ್ಯ ಅತಿಥಿಗಳಾದ ಕ್ಷಮಾ ವಿ.ಭಾನುಪ್ರಕಾಶ್,ಪದ್ಮಶ್ರೀ ಚಂದ್ರಪ್ರಕಾಶ್ ಸ್ವರಚಿತ ಕವನಗಳನ್ನು ವಾಚನ ಮಾಡಿದರು.
ವಿದುಷಿ ವಿದ್ಯಾ ರಾಮಚಂದ್ರ ಶ್ರೀಮತಿ ವರ್ಧಮಾನ,ಮಲ್ಲಮ್ಮನಾರಾಯಣಸ್ವಾಮಿ ಕವಿತಾ ರವೀಂದ್ರ ಡಾ. ಗ್ಲೋರಿ ವಿಕ್ಟರ್, ಸಿಂಧು ವಿಮಲ್ ಹೆಣ್ಣನ್ನು ಕುರಿತು ಜಾನಪದ ಶೈಲಿಯಲ್ಲಿ ಗೀತ ಗಾಯನ ಮಾಡಿದರು.
ಡಾ. ರಾಜಯೋಗ ವಿದ್ಯಾಲಯದ ಮಹಿಳೆಯರಿಂದ ಜಾನಪದ ನೃತ್ಯಗಳು ನೆರವೇರಿಸಿದವು. ಶ್ರೀಮತಿಯರಾದ ಮಲ್ಲಮ್ಮ,ಸರೋಜಾ, ನಿತ್ಯ, ಇಂದು, ಸಂಗೀತ ಮಂಜು, ಸುಧಾ, ಪುಷ್ಪ,ಪ್ಲೇವಿ, ಅಮಿತ, ಪವಿತ್ರ,ಸುಧಾ, ಪ್ರೇಮ, ನಂದಿನಿ, ಪ್ರೇಮಲತಾ,ಪ್ರಿಯಾಂಕಾ,ಪುಷ್ಪಲತಾ, ಯಾಮಿನಿ, ಕಲಾ ಮತ್ತು ಅಂಕಿತರವರು ತಮ್ಮ ತಮ್ಮ ತಂಡಗಳಲ್ಲಿ ನ್ರತ್ಯ ಮಾಡಿ ಸಂಭ್ರಮಿಸಿದರು. ಗ್ರಹಣಿಯರಾದ ಎಲ್ಲರೂ ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದರು.
"ಸಂಸಾರದ ಸಮಾಲೋಚನೆ "ಎಂಬ ಕಿರು ರೂಪಕವನ್ನು ಶ್ರೀಮತಿಯರಾದ ಕವಿತಾ ರವೀಂದ್ರ, ಶುಭದ,ಸುಮನ, ಪದ್ಮ ತಂಡದವರು ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾದರು.
ಅತಿಥಿಗಳಾಗಿ ಆಗಮಿಸಿದ ಸಾಧಕ ಮಹಿಳೆಯರು ಕ್ಷಮಾ ವಿ.ಭಾನುಪ್ರಕಾಶ್ ಡಾ. ಲಯನ್ ಗ್ಲೋರಿ ವಿಕ್ಟರ್, ಕವಿತಾ ರವೀಂದ್ರ, ಪದ್ಮಶ್ರೀ ಚಂದ್ರಪ್ರಕಾಶ್, ಆರತಿ ಪರಮೇಶ್,ಅಂಬಿಕಾ ಮಹೇಶ್, ಜಯಶ್ರೀ ಸೇತುರಾಮ್, ಇಂದಿರಾ ಜಮ್ಮಲದಿನ್ನಿ ಮತ್ತು ದೀಪ್ತಿಯವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾದ ಕಲಾವಿದೆ ಗೌರಮ್ಮ , ವಿದುಷಿ ವಿದ್ಯಾ ರಾಮಚಂದ್ರ ಮತ್ತು ಪುತ್ರ ಸಿಮುಖ,ಸಹಾಯಕಿ ಶಾಂತಮ್ಮ, ಶ್ರೀಮತಿ ವಿಕ್ಟೋರಿಯಾ ಪಿಂಟೋ, ಸಿದ್ದಮ್ಮ ದೇವರಾಜ ಹಿರಿಯ ಮಹಿಳೆಯರನ್ನು ಹಾಗೂ ವಾಯ್ಸ್ ಆಪ್ ದಂಡು ಎಕ್ಸ್ಪ್ರೆಸ್ ಮಾಧ್ಯಮದ ಛಾಯಾಚಿತ್ರಕ ಕ್ಲೀನ್ ರಾಜೇಶ್ ರವರನ್ನು ಗೌರವಿಸಲಾಯಿತು.
ಡಾ. ರಾಜ ಯೋಗ ವಿದ್ಯಾಲಯದ ಯೋಗಾರ್ಥಿಗಳು ತಮ್ಮ ಹಿತೈಷಿಗಳಾದ ಸಂಸ್ಥೆಯ ಶ್ರೀಮತಿ ಶ್ರೀಮತಿ ವರ್ಧಮಾನ ಕಳಸೂರು ಡಾ. ಪ್ರಿಯಾಂಕ ಬನ್ನಿಕೊಪ್ಪ ಸಿಂಧು ವಿಮಲ್ ರವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಮಣ್ಣಿನಿಂದ ಮಾಡಿದ ಕುಂಬಾರಿಕೆಯ ಕರಕುಶಲ ಗೊಂಬೆಗಳನ್ನು ಕಲಾವಿದರಾದ ಗೌರಮ್ಮಯಲ್ಲಪ್ಪ ಕುಂಬಾರ ಪ್ರದರ್ಶನಕ್ಕೆ ಇಟ್ಟಿದ್ದರು. ಅತಿಥಿಗಳು ಮತ್ತು ಸಭಿಕರು ಕಲಾ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹ ನೀಡಿದ್ದು ವೈಶಿಷ್ಟವಾಗಿತ್ತು.
ಮಹಿಳೆಯರಿಗೆ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಿಕೆಗಳನ್ನು ನೀಡಿ ಗೌರವಿಸಲಾಯಿತು. ಶ್ರೀಮತಿ ಡಾ. ಗ್ಲೋರಿ ವಿಕ್ಟರ್ ತಮ್ಮ ಸಂಸ್ಥೆಯ ವತಿಯಿಂದ ಎಲ್ಲರಿಗೂ ನೆನಪಿನ ಕಾಣಿಕೆಯನ್ನು ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ನಂದಿನಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಯೋಗ ಶ್ರೀ ವರ್ಧಮಾನ ಕಳ ಸೂರು ಸರ್ವರಿಗೂ ವಂದಿಸಿದರು. ಈ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ ಜಯ ಪ್ರಕಾಶ್ ಮತ್ತು ಪ್ರಭಾಕರವರನ್ನು ಹಾಗೂ ಉಪಹಾರದ ವ್ಯವಸ್ಥೆ ಮಾಡಿದ ಶ್ರೀಮತಿ ಪುಷ್ಪಲತಾ ರವರನ್ನು ವಿಶೇಷವಾಗಿ ಸ್ಮರಿಸಿಕೊಳ್ಳಲಾಯಿತು.