ಜಿಲ್ಲಾ ಲಯನ್ಸ್ ಸಂಸ್ಥೆ ಪ್ರಾಂತೀಯ ಸಮ್ಮೇಳನ: ಹಲವಾರು ಸೇವಾ ಕಾರ್ಯಕ್ರಮ
ಬೆಂಗಳೂರು ಮಾ -17:- ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317-f ನ ಪ್ರಾಂತೀಯ ಸಮ್ಮೇಳನ (ಪ್ರಾಂತ್ಯ-5) ಇoದು ಬೆಂಗಳೂರಿನ ಯಲಹಂಕದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಮಾಜಿ ನಿರ್ದೇಶಕ ಕೆ.ಜಿ. ರಾಮಕೃಷ್ಣಮೂರ್ತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ, ಅಂತರಾಷ್ಟ್ರೀಯ ಮಟ್ಟದಲ್ಲಿ 210 ದೇಶಗಳಲ್ಲಿ ಲಯನ್ಸ್ ಸಂಸ್ಥೆ ಅನೇಕ ಸೇವಾ ಕಾರ್ಯಗಳನ್ನು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲ್ ಹಾಗೂ ಫೋರ್ಟಿಸ್ ಆಸ್ಪತ್ರೆಯ ಡಾ. ಪ್ರಿಯ ಚಿನ್ನಪ್ಪ ರವರು ಮಧುಮೇಹದ ಬಗ್ಗೆ ವಿವರವಾಗಿ ತಿಳಿಸುತ್ತಾ ನೆರೆದಿದ್ದವರಿಗೆ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪ್ರಾಂತೀಯ ಅಧ್ಯಕ್ಷ ಎಂ ಆರ್. ಶ್ರೀನಿವಾಸ್ ಇದೇ ಸಂದರ್ಭದಲ್ಲಿ 13 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರದಂತೆ ವಿದ್ಯಾರ್ಥಿ ವೇತನ, ಮಹಿಳೆಯರಿಗೆ ತರಬೇತಿ ನೀಡಲು ಹೊಲಿಗೆ ಯಂತ್ರ , 15 ದಿನ ಕೆ.ಸಿ. ಜನರಲ್ ಆಸ್ಪತ್ರೆಯ ರೋಗಿಗಳಿಗೆ ಊಟದ ವ್ಯವಸ್ಥೆ, ಶಂಕರ ಸೇವಾ ಕ್ಯಾನ್ಸರ್ ಆಸ್ಪತ್ರೆಗೆ ಒಂದು ಲಕ್ಷ ದೇಣಿಗೆ, ಮಧುಮೇಹದ ಚಿಕಿತ್ಸೆಗೆ ಹಣ, ಮಧುಮೇಹದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಕರಪತ್ರ, ಈ ರೀತಿ 7 ಲಕ್ಷ ರೂಗಳನ್ನು ಪ್ರಾಂತಿಯ ಸಮ್ಮೇಳನದಲ್ಲಿ ವಿತರಿಸಿ
ಇನ್ನೂ ಅನೇಕ ಸೇವಾ ಕಾರ್ಯಗಳನ್ನು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ರಾದ ಬಿ.ಎಸ್.ರಾಜಶೇಖರಯ್ಯ, ಸಮ್ಮೇಳನದ ಅಧ್ಯಕ್ಷರಾದ ಪ್ರಸನ್ನ ಕುಮಾರ್, ವಲಯ ಅಧ್ಯಕ್ಷರಾದ ಎಲ್.ಎನ್. ಪ್ರದೀಪ್ ಕುಮಾರ್, ಮಧುಸೂದನ್ , ಡಿ.ವಿ.ಗಿರೀಶ್, ಶ್ರೀಮತಿ ಲಕ್ಷ್ಮಮಿ ಶ್ರೀನಿವಾಸ್ ಹಾಗೂ ಜಿಲ್ಲೆಯ ಪದಾಧಿಕಾರಿಗಳು, ಪ್ರಾಂತೀಯ ಕ್ಲಬ್ಬಿನ ಸದಸ್ಯರು, ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.