LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಚೊಳಚಗುಡ್ಡ ವಿಳ್ಳೇದೆಲೆ ಭೌಗೋಳಿಕ ಮಾನ್ಯತೆ ಒದಗಿಸಲು ಬಾಗಲಕೋಟೆ ತೋಟಗಾರಿಕೆ ವಿ.ವಿ. ಪ್ರಯತ್ನ

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರು ಮತ್ತು ಸಂಶೋಧನಾ ನಿರ್ದೇಶಕರು ನೇತೃತ್ವದಲ್ಲಿ 2025 ರ ಆಗಸ್ಟ್ 6 ರಂದು ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಬೆಳೆಯುವ ವಿಶಿಷ್ಟ ವಿಳ್ಳೇದೆಲೆಗೆÉ ಭೌಗೋಳಿಕ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಪರಿಶೀಲನೆ ಹಾಗೂ ಮುಂದಿನ ಕ್ರಮಗಳ ಕುರಿತು ಮಹತ್ವಪೂರ್ಣ ಕ್ಷೇತ್ರ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೆಂಕಟೇಶಲು,  ಸಂಶೋಧನಾ ನಿರ್ದೇಶಕರಾದ ಡಾ. ಫಕ್ರುದ್ದೀನ್‍ಬಿ. ಮತ್ತು ಸಹಾಯಕ ಪ್ರಾದ್ಯಾಪಕರಾದ ಡಾ. ಶಶಿಧರ ದೊಡಮನಿ ರವರು ರೈತರ ತಾಕುಗಳಿಗೆ ಭೇಟಿ ನೀಡಿ, ಬೆಳೆಯ ಮಾಹಿತಿ ಪಡೆದುಕೊಂಡು ಭೌಗೋಳಿಕ ಗುಣಮಟ್ಟಗಳ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸ್ಥಳಿಯ ವಿಳ್ಳೇದೆಲೆ ಬೆಳೆಯುವ ರೈತರಾದ ಮೌನೇಶ ಮರಡಿ, ರುದ್ರಗೌಡ ಮತ್ತು ಜಿ.ಎಸ್. ಪಾಟೀಲ ಅವರ ತೋಟಕ್ಕೆ ಭೇಟಿ ನೀಡಿದಾಗ ರೈತರು ಪ್ರಸ್ತುತವಾಗಿ ತಮ್ಮ ತಾಕುಗಳಲ್ಲಿ ಅಂಬಾಡಿ ತಳಿಯ ವಿಳ್ಳೆದೆಲೆ ಬೆಳೆಯುತ್ತಿದ್ದು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಅದಕ್ಕೆ ಮುಖ್ಯವಾಗಿ ಬೇಕಾಗಿರುವ ಆಧಾರ  ಬೆಳೆಯಾಗಿ ನುಗ್ಗೆ, ಚೊಗಚಿ ಮತ್ತು ಬುರುಗ ಇವುಗಳನ್ನು ಉಪಯೋಗಿಸಿ ವಿಳ್ಳೆದೆಲೆ ಬೆಳೆಯುತ್ತಾರೆ. ಮೊದಲನೇ ಕಟಾವನ್ನು ನಾಟಿ ಮಾಡಿದ 4-4.5 ತಿಂಗಳಿಗೆ ಮಾಡುತ್ತಾರೆ. ನಂತರ ಪ್ರತಿ ತಿಂಗಳಿಗೊಮ್ಮೆ  ಕಟಾವು ಮಾಡಿ ಎಕರೆಗೆ ಸರಾಸರಿ 10-12 ಅಂಡಿಗಿಗಳನ್ನು ಪಡೆಯಬಹುದಾಗಿದೆ (ಪ್ರತಿ ಅಂಡಿಗಿಯಲ್ಲಿ 12000 ಎಲೆಗಳು ಇರುತ್ತವೆ) ಸಾಮಾನ್ಯವಾಗಿ ಒಂದು ಅಂಡಿಗಿಗೆ ರೂಪಾಯಿ 1500-4500 ಬೆಲೆ ಸಿಗುತ್ತದೆ. ಸ್ಥಳೀಯ ಮಾರುಕಟ್ಟೆ ಬಾದಾಮಿಯಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಮಹಾರಾಷ್ಟ್ರದ ಲಾಥೂರಗೆ ಕಳಿಸಲಾಗುತ್ತದೆ. ಪ್ರತಿ ವರ್ಷ ಡಿಸೆಂಬರ್-ಜನವರಿ ತಿಂಗಳಲ್ಲಿ ಬಳ್ಳಿ ಇಳಿಸುವ ಪದ್ಧತಿ ಅನುಸರಿಸುತ್ತಾರೆ.

ಚೊಳಚಗುಡ್ಡ ಅಂಬಾಡಿ ವಿಳ್ಳೇದೆಲೆಯ ವಿಶೇಷತೆ ಏನೆಂದರೆ ಕಡಿಮೆ-ಮದ್ಯಮ ಕಾಕ, ಅಧಿಕ ಶೇಖರಣಾ ಅವಧಿ (10-12 ದಿನಗಳು), ತಿಳಿ ಹಸಿರು ಬಣ್ಣದಿಂದ ಕೂಡಿದೆ ಮತ್ತು ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮವಾದ ಬೆಲೆ ಸಿಗುತ್ತದೆ. ಇಲ್ಲಿಯವರೆಗೂ ಯಾವುದೇ ರೀತಿಯ ವಿಳ್ಳೆದೆಲೆ ರೈತ ಉತ್ಪಾದಕರ ಸಂಘಗಳು ಇಲ್ಲದಿರುವ ಕಾರಣ ಮಧ್ಯವರ್ತಿಗಳ ಹಾವಳಿಯಿಂದ ರೈತರು ತಾವು ಬೆಳೆದ ಬೆಳೆಗೆ ಸರಿಯಾಗಿ ಬೆಲೆ ದೊರಕುತ್ತಿಲ್ಲ ಎಂಬುದು ರೈತರ ಅಳುವಾಗಿದ್ದು ಈ ನಿಟ್ಟಿನಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾರ್ಗದರ್ಶನದಲ್ಲಿ ರೈತ ಉತ್ಪಾದಕರ ಸಂಸ್ಥೆ ಸ್ಥಾಪಿಸಿ, ಮಾರುಕಟ್ಟೆ ಸಂಪರ್ಕ ಮತ್ತು ಭೌಗೊಳಿಕ ಮಾನ್ಯತೆ ನೀಡಿದ್ದೆಯಾದಲ್ಲಿ ಮುಂದಿನ ದಿನಗಳಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ವಿಳ್ಳೆದೆಲೆ ಬೆಳೆಗಾರರು ಅಭಿಪ್ರಾಯ ವ್ಯಕ್ತಪಡಿಸಿದರು.

 

Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ