ಕಾರ್ಯಕ್ರಮವನ್ನು ವೀಕ್ಷಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ www.sevasindhu.karnataka.gov.
ವಿಶೇಷ ಸೂಚನೆ:
ಇ-ಪಾಸ್ ಕೇವಲ ಆಗಸ್ಟ್ 15 ರಂದು ಮಾತ್ರ ಮಾನ್ಯವಾಗಿರುತ್ತದೆ. ಇ-ಪಾಸ್ ಹೊಂದಿರುವವರು ಬೆಳಿಗ್ಗೆ 08:15 ಗಂಟೆಗಿಂತ ಮೊದಲು ಗೇಟ್ ನಂ.4ರ ಬಳಿ ಆವರಣದ ಒಳಗೆ ಪ್ರವೇಶಿಸಬೇಕು. ಈ ಸಮಯದ ನಂತರ ಪ್ರವೇಶ ಅನುಮತಿಸಲಾಗುವುದಿಲ್ಲ ಹಾಗೂ ಇ-ಪಾಸ್ ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಪ್ರತಿ ಇ-ಪಾಸ್ ಕೇವಲ ಒಬ್ಬರಿಗೆ ಮಾತ್ರ ಪ್ರವೇಶಿಸಲು ಅನುಮತಿಸಿದೆ. ಕಾರ್ಯಕ್ರಮದ ಸಮಯದಲ್ಲಿ ಇ-ಪಾಸ್‍ನ ಮುದ್ರಿತ ಪ್ರತಿ ಅಥವಾ ಡಿಜಿಟಲ್ (ಮೊಬೈಲ್) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇ-ಪಾಸ್ ಅವಶ್ಯವಿರುವುದಿಲ್ಲ. ಇ-ಪಾಸ್ ಅನ್ನು ವರ್ಗಾಯಿಸುವಂತಿಲ್ಲ. ಇ-ಪಾಸ್‍ಗಳು ಒಟ್ಟು 3000 ಸಂಖ್ಯೆಗೆ ಸೀಮಿತವಾಗಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮೂಲ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.
ಇ-ಪಾಸ್ ಹೊಂದಿರುವವರಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ. ಪಾಕಿರ್ಂಗ್ ವ್ಯವಸ್ಥೆಗೆ ಪಾಸ್‍ಧಾರರೇ ಜವಾಬ್ದಾರರಾಗಿರುತ್ತಾರೆ ಎಂದು ಸಕಾರದ ಮುಖ್ಯ ಕಾರ್ಯದಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
VKNEWS HEADLINES TODAY ;
https://www.youtube.com/watch?v=ZcdBAHsOyVY