LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗಾಂಧೀ ಅನುಯಾಯಿ ಎಲ್.ನರಸಿಂಹಯ್ಯ ಅವರಿಗೆ ಪ್ರೊ. ಎಂ. ಕರೀಮುದ್ದೀನ್ ಪ್ರಶಸ್ತಿ



ಪ್ರಖರ ಗಾಂಧೀ ಚಿಂತಕರೂ, ಶಿಕ್ಷಣ ವೇತ್ತರೂ ಆಗಿರುವ ಎಲ್. ನರಸಿಂಹಯ್ಯ ತೊಂಡೋಟಿ ಅವರು ಮಂಡ್ಯದ ಗಾಂಧೀ ಭವನ ನೀಡಲಿರುವ ಈ ಸಾಲಿನ ಪ್ರೊ.ಎಂ.ಕರೀ ಮುದ್ದೀನ್ ಸ್ಮಾರಕ ಗಾಂಧೀ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇತ್ತೀಚೆಗೆ ತಮ್ಮ 91 ನೆ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಎಲ್ಲೆನ್ ಅವರು ಕನಕಪುರ ತಾಲ್ಲೂಕು ಹಾರೋಹಳ್ಳಿ ಗ್ರಾಮಾಂತರ ಪ್ರೌಢ ಶಾಲೆಯಲ್ಲಿ ಮೂವತ್ತಕ್ಕೂ ಹೆಚ್ಚು ವರ್ಷಗಳಕಾಲ ಮುಖ್ಯೋಪಾಧ್ಯಾಯರಾಗಿ ಆ ಶಾಲೆಗೆ ಗಾಂಧೀ ಮೌಲ್ಯಗಳ ಚೌಕಟ್ಟು ಹಾಕಿದವರು.

ವಿವಿಧ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತುಮಕೂರು. ಮತ್ತು ರಾಮನಗರ  ಜಿಲ್ಲೆಗಳ  ಶಾಲಾ ಮಕ್ಕಳಿಗೆ ಗಾಂಧೀ ತತ್ವಗಳನ್ನು ಪರಿಚಯಿಸಿದವರು. ಅವರು ರಚಿಸಿದ ಕಥನ ಕವನ  'ಗಾಂಧೀ ಗೋವಿನ ಕಥೆ '

ಮಕ್ಕಳಿಗೆ ಪ್ರಿಯವಾದ ಪುಸ್ತಿಕೆ.

ಕನ್ನಡ ಸಾಹಿತ್ಯ  ಪರಿಷತ್ ಶ್ರೀಯುತರಿಗೆ 2022 ರ ಎ. ಆರ್. ನಾರಾಯಣ ಘಟ್ಟ - ಸರೋಜಮ್ಮ ಗಾಂಧೀ ಪುದು ವಟ್ಟು ದತ್ತಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರೊ. ಎಂ. ಕರೀಮುದ್ದಿನ್  : ಶ್ರೀರಂಗಪಟ್ಟಣ ತಾಲ್ಲೂಕು ಗಂಜಾಂ ನಿವಾಸಿಯಾಗಿದ್ದ ದಿ. ಪ್ರೊ.ಎಂ. ಕರೀಮುದ್ದೀನ್ ಕನ್ನಡ ಪ್ರಾಧ್ಯಾಪಕರೂ,ಭಾಷಾ ತಜ್ಞರೂ, ವಾಗ್ಮಿಗಳೂ ,ಬರಹಗಾರರೂ ಆಗಿ ಪ್ರಸಿದ್ಧರು.ಕನ್ನಡ, ಅರೇಬಿಕ್, ಹಿಂದಿ, ಸಂಸ್ಕೃತ,  ಇಂಗ್ಲಿಷ್ ನಲ್ಲಿ ಪ್ರಾವಿಣ್ಯತೆ ಪಡೆದಿದ್ದರು. ಅನಾಥ ಮುಸ್ಲಿಂ ರು, ಸಂಚಿತ ಚಿಂತನ,ಬಾಳು - ಬದುಕು ಕೃತಿಗಳ ಲೇಖಕರು.ಶ್ರೀಯುತರ ಸಂಸ್ಮರಣೆಯಲ್ಲಿ   ಈ ಗಾಂಧೀ ಸೇವಾ ಪ್ರಶಸ್ತಿಯನ್ನು   ಮಂಡ್ಯದ ಗಾಂಧೀ ಭವನ ದಲ್ಲಿ ಜುಲೈ ಐದರಂದು   ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರಕಟಣೆ ಯಲ್ಲಿ ತಿಳಿಸಿದೆ


Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ