LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ಪ್ರಸ್ತಾಪ; ಪಥಸಂಚಲನಕ್ಕೆ ಅನುಮತಿ ನಿರಾಕರಣೆ: ಛಲವಾದಿ ಆಕ್ಷೇಪ

ಬೆಂಗಳೂರು: ಚಿತ್ತಾಪುರದಲ್ಲಿ ಆರೆಸ್ಸೆಸ್ (CHITTAPUR RSS) ಪಥ ಸಂಚಲನಕ್ಕೆ ಮತ್ತು ಬಂಟಿಂಗ್, ಬ್ಯಾನರ್ ಹಾಕಲು ಹಾಗೂ ಅನುಮತಿಗೆ ಸಂಬಂಧಿಸಿ ಸುಮಾರು 6 ಸಾವಿರ ಹಣ ಕಟ್ಟಿಸಿಕೊಂಡ ಬಳಿಕ ಅನುಮತಿ ನಿರಾಕರಿಸಿದ್ದು ಮತ್ತು ಬ್ಯಾನರ್, ಬಂಟಿಂಗ್ ತೆರವು ಮಾಡಿದ್ದು ಸರಿಯಲ್ಲ; ಇದು ಸ್ಥಳೀಯ ಆಡಳಿತದ ದುಂಡಾವರ್ತಿ ಕ್ರಮ ಮತ್ತು ಪ್ರಿಯಾಂಕ್ (PRIYANKA KHARGE) ಖರ್ಗೆಯವರ ದುರ್ನಡತೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (CHALAVADI NARAYANASWAMY) ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗಳಿಗೆ ಉತ್ತರಿಸಿದರು. ಆರೆಸ್ಸೆಸ್ ಪಥ ಸಂಚಲನಕ್ಕೆ ಸಂಬಂಧಿಸಿ ಪಿಡಿಒ ಒಬ್ಬರ ಅಮಾನತಿನ ಕುರಿತು ಪ್ರಶ್ನಿಸಿದಾಗ, ಆರೆಸ್ಸೆಸ್ ಎಂಬುದು ಒಂದು ರಾಜಕೀಯ ಪಕ್ಷವಲ್ಲ; ಎಲ್ಲ ಸಾರ್ವಜನಿಕ ಸಂಘಟನೆಯಂತೆ ಆರೆಸ್ಸೆಸ್ ಒಂದು ಸಂಘಟನೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕೇಂದ್ರ ಸರಕಾರದ ಆದೇಶವೂ ಇದೆ ಎಂದು ನುಡಿದರು.
ಇಷ್ಟೆಲ್ಲ ಮಾತನಾಡುವ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಅವರೇ, ಎಐಸಿಸಿಯಲ್ಲಿ ಅಲೆಮಾರಿ ಸಮುದಾಯಗಳ ಒಂದು ಘಟಕ ಇದೆ. ಈ ಘಟಕಕ್ಕೆ ಕರ್ನಾಟಕದಿಂದ ಡಾ.ಎ.ಎಸ್. ಪ್ರಭಾಕರ್ ಅವರನ್ನು ರಾಷ್ಟ್ರೀಯ ಸಂಚಾಲಕ ಎಂದು ನೇಮಿಸಿದ್ದಾರೆ. ಇವರು ಹಂಪಿ ವಿವಿಯ ಪ್ರೊಫೆಸರ್. ನೀವು ಎಐಸಿಸಿ ಪದಾಧಿಕಾರಿಯನ್ನಾಗಿ ಅವರನ್ನು ನೇಮಿಸಿದ್ದೀರಿ. ಇದು ಕಾನೂನುಬಾಹಿರವೇ? ಅಥವಾ ಸಾಮಾಜಿಕ ಸಂಘಟನೆಯಲ್ಲಿ ಭಾಗಿ ಆಗುವುದು ತಪ್ಪೇ ಎಂದು ಕೇಳಿದರು. ಎಐಸಿಸಿ ಅಧ್ಯಕ್ಷರು ಇದಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ಸಿನಲ್ಲಿ ಕೆಲಸ ಮಾಡಲು ಯಾರನ್ನಾದರೂ ನೇಮಿಸಬಹುದು; ಆದರೆ, ಸಂಘಟನೆಗಳಲ್ಲಿ ಕೆಲಸ ಮಾಡಬಾರದೆಂಬ ಯಾವ ನೀತಿ ಇದು ಎಂದು ಟೀಕಿಸಿದರು. ರಾಜ್ಯದಲ್ಲಿ ಆಗುವ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ತರುತ್ತಿದ್ದಾರೆ ಎಂದು ದೂರಿದರು. ಆರೆಸ್ಸೆಸ್ ವಿಚಾರ ಪ್ರಶ್ನೆ ಕೇಳಿದ ಕಾರಣಕ್ಕೆ ಈ ಉತ್ತರ ನೀಡುತ್ತಿರುವುದಾಗಿ ಹೇಳಿದರು. ಆರೆಸ್ಸೆಸ್ ದೇಶದ ಪರವಾಗಿ ಕೆಲಸ ಮಾಡುವ ಸಂಘಟನೆ. ದೇಶಭಕ್ತರ ಕೂಟ ಎಂದರು.

ಬಡವರ ಮೇಲೆ ಕರುಣೆ ಇದೆಯೇ..
ಪ್ರಿಯಾಂಕ್ ಖರ್ಗೆಯವರೇ, ಮೈಸೂರಿನಲ್ಲಿ ಗುಲ್ಬರ್ಗ ಮೂಲದ ಬಾಲಕಿ ಮೇಲೆ ಅತ್ಯಾಚಾರ ಆಗಿದೆ. ನೀವು ಗುಲ್ಬರ್ಗದ ಸಚಿವರಲ್ಲವೇ? ನೀವು ಅಲ್ಲಿ ಹೋಗಿ ಏನಾಗಿದೆ ಎಂದು ಪರಿಶೀಲನೆ ಮಾಡಿದ್ದೀರಾ? ನಿಮಗೆ ಆ ಅಲೆಮಾರಿಗಳು, ಬಡವರ ಮೇಲೆ ಕರುಣೆ ಇದೆಯೇ ಎಂದು ಕೇಳಿದರು.
ಬಿಜಾಪುರದಲ್ಲಿ 9-10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಅವಳನ್ನು ಸಾಯಿಸಿದ್ದಾರೆ. ಅದರ ಬಗ್ಗೆ ನೀವು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ಊರಿನಲ್ಲಿ ವಾಡಿಯ ಶಾಲೆಯ ಮೇಲ್ಛಾವಣಿ ಬಿದ್ದು ಹೋಗಿದೆ. ರಜೆ ಇರುವ ಕಾರಣ ಮಕ್ಕಳು ಬಚಾವ್ ಆಗಿದ್ದಾರೆ. ಅದರ ಬಗ್ಗೆ ನೀವೇನಾದರೂ ತಲೆ ಕೆಡಿಸಿಕೊಂಡಿದ್ದೀರಾ? ನೀವು ಅಲ್ಲೇ ಲೈಬ್ರೆರಿಯನ್ ತಮಗೆ ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರ ಕುರಿತು ನೀವು ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮದೇ ಇಲಾಖೆ ನೀರಘಂಟಿ 23 ತಿಂಗಳುಗಳಿಂದ ವೇತನ ಸಿಕ್ಕಿಲ್ಲ ಎಂದಿದ್ದಾರೆ. ಇಂಥವನ್ನು ಮರೆಮಾಚಲು, ನಿಮ್ಮನ್ನು ಎಲ್ಲರೂ ಅಯೋಗ್ಯರು ಎನ್ನುವುದನ್ನು ತಪ್ಪಿಸಿಕೊಳ್ಳಲು ನೀವು ಆರೆಸ್ಸೆಸ್, ಆರೆಸ್ಸೆಸ್ ಎನ್ನುತ್ತೀರಿ ಎಂದು ವಾಗ್ದಾಳಿ ನಡೆಸಿದರು.

ನೀವು ಅಧಿಕಾರ ನಡೆಸಲು ಯೋಗ್ಯರಲ್ಲ..
ನಿಮಗ್ಯಾಕೆ ಸಚಿವ ಸ್ಥಾನ ಎಂದು ಕೇಳಿದರು. ನೀವು ಸಚಿವ ಸ್ಥಾನ ನಿಭಾಯಿಸುವಲ್ಲಿ ವಿಫಲವಾಗಿದ್ದೀರಿ. ಜನರನ್ನು ದಾರಿ ತಪ್ಪಿಸಿ ಅವರ ಜೀವನದಲ್ಲಿ ಆಟ ಆಡುವ ಕೆಲಸ ಮಾಡುತ್ತಿದ್ದೀರಿ ಎಂದು ದೂರಿದರು. ಅತಿವೃಷ್ಟಿ, ಅನಾವೃಷ್ಟಿಗೆ ಹಣ ಕೊಟ್ಟಿಲ್ಲ; ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ; ಶೇ 80 ಕಮಿಷನ್ ಎಂದು ಅವರು ಹೇಳುತ್ತಿದ್ದಾರೆ. ಇವುಗಳನ್ನು ಪರಿಹರಿಸದೆ ನೀವು ಕ್ಷುಲ್ಲಕ ಕಾರಣ ಇಟ್ಟುಕೊಂಡು ಇದನ್ನೆಲ್ಲ ಮಾಡುತ್ತ ಇದ್ದೀರಲ್ಲವೇ? ನೀವು ಅಧಿಕಾರ ನಡೆಸಲು ಯೋಗ್ಯರಲ್ಲ ಎಂದು ಆಕ್ಷೇಪಿಸಿದರು. ಪ್ರಿಯಾಂಕ್ ಖರ್ಗೆ ಹೊಣೆಗೇಡಿ; ದುರಹಂಕಾರದ ಕಣಜ ಎಂದು ದೂರಿದರು. ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡು ಕೆರಕೊಂಡ ಪರಿಸ್ಥಿತಿ ಇವರದು ಎಂದು ಟೀಕಿಸಿದರು.
ನೀವು ದಲಿತ ಸಮುದಾಯದಿಂದ ಬಂದವರು. ದಲಿತರಿಗೆ ಈ ಸಮಾಜದಲ್ಲಿ ಯಾವ ಪರಿಸ್ಥಿತಿ ಇದೆ ಎಂದು ನಿಮಗೂ ಗೊತ್ತಿದೆ. ಯಾವತ್ತಾದರೂ ಒಂದು ದಿನ ಇಷ್ಟೊಂದು ದಲಿತ ಸಂಘಟನೆಗಳಲ್ಲಿ ಪ್ರಿಯಾಂಕ್ ಖರ್ಗೆ ಕೆಲಸ ಮಾಡಿದ್ದಾರಾ ಎಂದು ಕೇಳಿದರು.

 
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ