LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮೈಸೂರು : ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದಿರುವ SSLC ವಿದ್ಯಾರ್ಥಿಗಳಿಗೆ ಸನ್ಮಾನ

ಬೆಂಗಳೂರಿನ ಕನ್ನಡ ಗೆಳೆಯರ ಬಳಗವು ಮೈಸೂರಿನ ‘ನೃಪತುಂಗ ಕನ್ನಡ ಶಾಲೆ ಸಹಯೋದಲ್ಲಿ ೦೬-೦೮-೨೦೨೫ರಂದು ಮೈಸೂರಿನ  ರಾಮಕೃಷ್ಣ ನಗರದ ರಮಾ ಗೋವಿಂದ ರಂಗ ಮಂದಿರದಲ್ಲಿ ಸಂಜೆ ೪ಕ್ಕೆ ಕನ್ನಡ ಹೋರಾಟಕ್ಕೆ ಘನತೆ-ಗಾಂಭೀರ್ಯವನ್ನು ತಂದುಕೊಟ್ಟ  ಡಾ.ಎಂಚಿದಾನಂದಮೂರ್ತಿ ಅವರ ನೆನಪಿನಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ೯೬%ಕ್ಕೂ ಹೆಚ್ಚು ಅಂಕಗಳಿಸಿರುವ ಕನ್ನಡ ಮಾಧ್ಯಮದ ಮೈಸೂರು  ಜಿಲ್ಲೆಯ ೧೨ ವಿದ್ಯಾರ್ಥಿಗಳನ್ನು ಡಾಎಂಚಿದಾನಂದಮೂರ್ತಿ ಅವರ ನೆನÀಪಿನಲ್ಲಿ  ‘ಬಹುಮಾನ-ಸನ್ಮಾನ’ ಕಾರ್ಯಕ್ರಮ ವ್ಯವಸ್ಥೆಯಾಗಿದೆ.


ಕರ್ನಾಟಕದ ಮಾಜಿ ಶಿಕ್ಷಣ ಸಚಿವರಾದಅಡಗೂರು  ಎಚ್  ವಿಶ್ವನಾಥ್ ಅವರು ಎಸ್.ಎಸ್.ಎಲ್.ಸಿ.ಯಲ್ಲಿ ೯೬%ಕ್ಕಿಂತ ಹೆಚ್ಚು ಅಂಕಗಳಿಸಿರುವ ಕನ್ನಡ ಮಾಧ್ಯಮದ ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ೧೨ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಬಹುಮಾನ ನೀಡುವರುನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ನ್ಯಾಸ.ರ ಮಾಣಿಕ್ಯ ಅವರು ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ ಕನ್ನಡ ಗೆಳೆಯರ ಬಳಗದ ಸಂಚಾಲಕ  ರಾ.ನಂಚಂದ್ರಶೇಖರ ಆಶಯ ನುಡಿಗಳನ್ನಾಡಲಿದ್ದುಮೈಸೂರಿನ ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿ .ಸುದರ್ಶನ ಅವರು ವಿಶೇಷ ಉಪಸ್ಥಿತಿ ಮತ್ತು ಬೆಂಗಳೂರಿನ  ಡಾ.ಆರ್.ಶೇಷಶಾಸ್ತ್ರಿಬಾ.ಉಪೇಂದ್ರಚಂದ್ರಶೇಖರಬಿ.ವಿರವಿಕುಮಾರ್ಹೊಸೂರು ನಾಗರಾಜ್  ಮತ್ತು ಸಂಜೀವರತ್ನ ಅವರುಗಳ ಉಪಸ್ಥಿತಿ ಇರುತ್ತದೆ. 


ಕನ್ನಡ ಸಂಘಟನೆಗಳೂ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ  ವಿದ್ಯಾರ್ಥಿಗಳನ್ನು ಗುರುತಿಸುವ ಕೆಲಸ ಮಾಡಿದರೆಕನ್ನಡ ಮಾಧ್ಯಮದಲ್ಲಿ  ಓದಿದವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ಸಂದೇಶ ರವಾನೆ ಆಗುತ್ತದೆಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮತ್ತು ಅವರ  ಪೋಷಕರಿಗೆ ನಮ್ಮನ್ನು ಗುರುತಿಸುವ ಜನ ಇದ್ದಾರೆ ಎಂದು ಉತ್ಸಾಹ ಮೂಡುತ್ತದೆ ಎಂಬ ಆಶಯದಿಂದ ಬಳಗವು ಪ್ರತಿ ವರ್ಷ  ಕಾರ್ಯಕ್ರಮವನ್ನು ನಿರಂತರವಾಗಿ ನಡೆಸುತ್ತಿದೆ.


2024-25ನೆಯ ಸಾಲಿನ  ಸ್.ಎಸ್.ಎಲ್.ಸಿಪರೀಕ್ಷೆಯ ಕನ್ನಡ ಮಾಧ್ಯಮದಲ್ಲಿ ಪ್ರಜ್ವಲ್ ಜಿ.ಎನ್. (98.7%)),ಮಹೇಶ್ ಎಂ.(98.08%),  ವಿನುತಾ ಎನ್.ಎಂ.(97.92%), ಪ್ರೇಮಾಂಜಲಿ(97.76%), ನಿತ್ಯ ಸಿ.ಬಿ.(97.6%), ಕೀರ್ತನ ಜೆ. (97.44%), ರಮ್ಯಶ್ರೀ(97.28%), ಸುಪ್ರೀತಾ(97.28%), ನಿತಿನ್ ಎಸ್ (97.12%),  ಸುನೀತಾ ಎಸ್ (96.96%), ಸಿಂಚನ ಡಿ ಎಂ. (96.96%), ಮತ್ತು ಶಿವಾನಿ ಕೆ. (96.96%),  ರೂ.1000 ನಗದು ಮತ್ತು ಒಂದು ಸಾವಿರ ರೂಪಾಯಿ ಮೌಲ್ಯದ ಪುಸ್ತಕ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಗುವುದು.




Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ