LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಂಚಾರ ಜಾಗೃತಿಗಾಗಿ ಮೋಹನ್ ಕುಮಾರ್ ದಾನಪ್ಪರಿಂದ ಮ್ಯಾರಥಾನ್ ಓಟ

ಬೆಂಗಳೂರು: 15, 79ನೇ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪನವರು ಬೆಂಗಳೂರು ಮಹಾನಗರದಲ್ಲಿ ಸಂಚಾರ ಜಾಗೃತಿಗಾಗಿ " ಸಂಚಾರದಲ್ಲಿ ಮೊಬೈಲ್ ಬಿಡಿ, ಜಾಗ್ರತೆಯಿಂದ ಮನೆಗೆ ನಡಿ" ಶೀರ್ಷಿಕೆಯಡಿ 2 ಗಂಟೆಗಳ ಕಾಲ 14 ಕಿಮೀ ನಷ್ಟು ಓಟ ನಡೆಸಿ ಜನತೆಯ ಗಮನ ಸೆಳೆದರು,

ಬಲಗೈನಲ್ಲಿ ರಾಷ್ಟ್ರಧ್ವಜ ಹಿಡಿದು, ಎಡಗೈನಲ್ಲಿ ಜಾಗೃತಿ ಶೀರ್ಷಿಕೆಯ ಪೋಸ್ಟರ್ ಹಿಡಿದು ಜಕ್ಕೂರು ವಿಮಾನ ನಿಲ್ದಾಣದಿಂದ ಪ್ರಾರಂಭಿಸಿ
ಜಿಕೆವಿಕೆ, ಬ್ಯಾಟರಾಯನಪುರ, ಕೊಡಿಗೇಹಳ್ಳಿ ಗೇಟ್, ಎಸ್ಟೀಮ್ ಮಾಲ್, ಹೆಬ್ಬಾಳ, ಪಶುವೈದ್ಯಕೀಯ ಕಾಲೇಜ್, ಸಿಬಿಐ, ಪ್ಯಾಲೇಸ್ ಗುಟ್ಟಹಳ್ಳಿ, ಕುಮಾರ ಕೃಪಾ, ಗಾಲ್ಫ್ ಕ್ಲಬ್, ರಾಜಭವನ, ಅಲಿ ಅಸ್ಕರ್ ರಸ್ತೆ, ವಿವಿ ಗೋಪುರ, ಹೈಕೋರ್ಟ್, ಮಾರ್ಗವಾಗಿ ವಿಧಾನ ಸೌಧ ತಲುಪಿದರು,

ನಂತರ ಮಾತನಾಡಿದ ಮೋಹನ್ ಕುಮಾರ್ ದಾನಪ್ಪನವರು ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿ ಜೀವ ಹಾನಿಯಾಗುತ್ತಿರುವ ಮೂಲ ಕಾರಣವೇ ಚಾಲನೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವುದರಿಂದ, ವಾಹನ ಚಾಲನೆ ಮಾಡುವಾಗ ಮೊಬೈಲ್ ಸಂಭಾಷಣೆ ಮತ್ತು ಬಳಸುವುದು ದಂಡನೀಯ ಅಪರಾಧವಾಗಿದ್ದರೂ ಸಾರ್ವಜನಿಕರು ಚಾಲನೆಯಲ್ಲಿ ಯಥೇಚ್ಛ ಮೊಬೈಲ್ ಬಳಸುತ್ತಿರುವುದು ತಮ್ಮ ಜೀವಕ್ಕಲ್ಲದೆ ಇತರರ ಜೀವಕ್ಕೆ ಹಾನಿ ಉಂಟು ಮಾಡುತ್ತಿದ್ದು ಚಾಲನೆಯಲ್ಲಿ ಮೊಬೈಲ್ ಬಳಸದಂತೆ ತಿಳಿಸಿದರು!

ಸದರಿ ಮ್ಯಾರಥಾನ್ ನಲ್ಲಿ ವಕೀಲರಾದ ಮನೋಜ್ ಕುಮಾರ್ ದಾನಪ್ಪನವರು ಪಾಲ್ಗೊಂಡಿದ್ದರು!
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ