LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಾಕ್ಸ್ ಆಫೀಸ್ ದೆಸೆಗೆ ಮಹಾವತಾರ ನರಸಿಂಹ: ಕೇವಲ 6 ದಿನದಲ್ಲಿ ₹37 ಕೋಟಿ ಕಲೆಕ್ಷನ್!

ಬೆಂಗಳೂರು: ಕನ್ನಡದ ಮೆಗಾ ಆ್ಯನಿಮೇಷನ್ ಸಿನಿಮಾ 'ಮಹಾವತಾರ ನರಸಿಂಹ' ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಸೃಷ್ಟಿಸಿದ್ದು, ಬಿಡುಗಡೆಗೊಂಡು ಕೇವಲ 6 ದಿನಗಳೊಳಗೆ ₹37 ಕೋಟಿ ರೂ ಗಳಿಕೆ ದಾಖಲಿಸಿಕೊಂಡಿದೆ.


ಜುಲೈ 25 ರಂದು ಬಿಡುಗಡೆಯಾದ ಈ ಚಿತ್ರ ಕುರಿತು ಖ್ಯಾತ ಬಾಕ್ಸ್ ಆಫೀಸ್ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಪ್ರತಿ ದಿನವೂ ಕಲೆಕ್ಷನ್‌ಗಳಲ್ಲಿ ಏರಿಕೆಯನ್ನು ಕಂಡಿರುವ ಈ ಚಿತ್ರ, ಇದೀಗ ಭಾರತದ ಮೊದಲ ವಾರದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಆ್ಯನಿಮೇಷನ್ ಸಿನಿಮಾವೆಂಬ ಕೀರ್ತಿಗೆ ಪಾತ್ರವಾಗಿದೆ.



KGF, ಕಾಂತಾರಾ ದಾಖಲೆ ಮುರಿದ ನರಸಿಂಹ


KGF ಮತ್ತು ಕಾಂತಾರಾ ಮೊದಲ ವಾರದ ಗಳಿಕೆಯನ್ನು ಹಿಂದಿಕ್ಕಿದ ಮಹಾವತಾರ ನರಸಿಂಹ:





  • 1ನೇ ದಿನ: ₹1.38 ಕೋಟಿ (ಹಿಂದಿ ಬೆಲ್ಟ್)




  • 2ನೇ ದಿನ: ₹3.40 ಕೋಟಿ




  • 3ನೇ ದಿನ: ₹6.77 ಕೋಟಿ




  • 4ನೇ ದಿನ: ₹3.70 ಕೋಟಿ




  • 5ನೇ ದಿನ: ₹5.01 ಕೋಟಿ




  • 6ನೇ ದಿನ: ₹5.05 ಕೋಟಿ
    ಒಟ್ಟಾರೆ ಹಿಂದಿ ಕಲೆಕ್ಷನ್: ₹25.31 ಕೋಟಿ.




  • ತೆಲುಗು ಮತ್ತು ಉತ್ತರ ಭಾರತದ ಬೆಲ್ಟ್‌ಗಳಲ್ಲಿ ಭರ್ಜರಿ ಕಲೆಕ್ಷನ್


    ತೆಲುಗು ರಾಜ್ಯಗಳಲ್ಲಿ ಮಾತ್ರ 5 ದಿನದಲ್ಲಿ ₹9 ಕೋಟಿ ಗಳಿಕೆ ಕಂಡಿದೆ. ಉತ್ತರ ಭಾರತದಲ್ಲಿ ಇದೇ ಅವಧಿಯಲ್ಲಿ ₹22 ಕೋಟಿ ರೂ ಗಳಿಸಲಾಗಿದೆ. ಪ್ರೇಕ್ಷಕರು ಚಿತ್ರದ ವಿಷುಯಲ್ ಪ್ರಜೆಂಟೇಷನ್, ಮಿಥಾಲಜಿಕಲ್ ಥೀಮ್ ಹಾಗೂ ಸ್ಟೋರಿ ಟೆಲಿಂಗ್‌ಗೆ ಫಿದಾ ಆಗಿದ್ದಾರೆ.







    🎞️ ಕನ್ನಡದಲ್ಲಿ ಮಂಕಾದ ಪ್ರದರ್ಶನ


    ಚಿತ್ರ ಮೂಲತಃ ಕನ್ನಡದಲ್ಲಿ ಬಿಡುಗಡೆಯಾದರೂ, ಇಲ್ಲಿಯ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕಿಲ್ಲ. ಸ್ಪರ್ಧಾತ್ಮಕವಾಗಿ 'ಸು ಫ್ರಂ ಸೋ' ಸಿನಿಮಾ ಭರ್ಜರಿ ಯಶಸ್ಸನ್ನು ಕಾಣುತ್ತಿದೆ. ಈ ಕಾರಣದಿಂದ ನರಸಿಂಹ ಕಲೆಕ್ಷನ್ ಸುಮಾರು ₹2 ಕೋಟಿ ರೂ ಮಟ್ಟದಲ್ಲೇ ನಿಂತಿದೆ.



Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ