LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನೃತ್ಯ ಕಲಾವಿದೆ ವಿದುಷಿ ಎಲ್.ಎಸ್. ವಾಸವಿ ಅವರಿಗೆ "ಕಮಲಾಂಜಲಿ" ಪ್ರಶಸ್ತಿ ಪ್ರದಾನ




ಬೆಂಗಳೂರು : AVOPA Charitable Trust ಮತ್ತು ಸಂಘದವರು Teacher's Day ಸಂಬಂಧವಾಗಿ BMS ಕಾನೂನು ಕಾಲೇಜಿನ ಸಹ ಪ್ರಾಧ್ಯಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಶಾಸ್ತ್ರೀಯ ನೃತ್ಯ ಭರತನಾಟ್ಯ ಪ್ರವೀಣೆ ವಿದೂಷಿ ಶ್ರೀಮತಿ L. S. ವಾಸವಿ ಅವರಿಗೆ ಶ್ರೀಮತಿ ಕಮಲಾoಜಿನಿ ಅವಾರ್ಡ್ ಅನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದುಷಿ ಶ್ರೀಮತಿ ವಾಸವಿ ಅವರಿಂದ "ನೃತ್ಯ ವೈಭವ" ಭರತನಾಟ್ಯವನ್ನು ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ  ಆಯೋಜಿಸಲಾಗಿತ್ತು. ವಿದುಷಿ ಎಲ್. ಎಸ್. ವಾಸವಿ ಅವರನ್ನು "ಒಂದೇ ನಾಣ್ಯದ ಎರಡು ಮುಖಗಳಿರುವ" ರೀತಿ ಅವರ ಉತ್ತಮ ಮತ್ತು ದಕ್ಷ ಬೋಧನೆ ಹಾಗೂ ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶೇಷ ಸೇವೆಯನ್ನು ಗುರುತಿಸಿ "ಶ್ರೀಮತಿ ಕಾಮಲಾಂಜಿನಿ ಪ್ರಶಸ್ತಿ* ನೀಡಿ ಗೌರವಿಸಿರುವ ಬಗ್ಗೆ ಅವೋಪ ಅಧ್ಯಕ್ಷರು ಶ್ಲಾಘಿಸಿದರು.

*“ನೃತ್ಯ ವೈಭವ*” ಎಂಬ ಕಾರ್ಯಕ್ರಮದಲ್ಲಿ ವಾಸವಿ ಅವರು ನೃತ್ಯ ಪ್ರದರ್ಶನವನ್ನು ಅಮೋಘವಾಗಿ ಪ್ರದರ್ಶಿಸಿದರು. ಅವರ ಕಲಾಪ್ರಿಯತೆ ಹಾಗೂ ಶಾಸ್ತ್ರೀಯ ನೃತ್ಯವನ್ನು ಉತ್ತೇಜಿಸುವ ಕಾರ್ಯವನ್ನು ಅಭಿಮಾನಿಗಳ ಮುಂದಿಡಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಅಧ್ಯಕ್ಷರಾದ ಶ್ರೀ ಆರ್. ಪಿ. ರವಿಶಂಕರ್  ಮಾತನಾಡುತ್ತಾ, AVOPA ಅವರು ನಿಜವಾಗಿಯೂ  ಈ ಪ್ರಶಸ್ತಿಗೆ ಭಾಜನವಾಗಿರುವ ಶ್ರೀಮತಿ ವಾಸವಿಯವರ *ಉತ್ತಮ ಭೋಧನೆ ಮತ್ತು ಕಲಾ ಪ್ರತಿಭೆಗೆ ಆಯ್ಕೆ ಮಾಡಿರುವುದು* ಶ್ಲಾಘನೀಯವಾಗಿದೆಯೆಂದು ತಿಳಿಸಿ ಸಂತೋಷ ವ್ಯಕ್ತಪಡಿಸಿದರು.

ಈ ಗೌರವಯುಕ್ತ ಸಮಾರಂಭವು ವಿದೂಷಿ ವಾಸವಿ ಅವರ ಭೋಧನಾ ಪ್ರತಿಭೆ ಕಲಾ ವೃದ್ಧಿಗೆ ನೀಡಿದ ಸೇವೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಅವರ ಕಾರ್ಯವನ್ನು ಸ್ಮರಿಸುವಂತೆ ನಡೆಯಿತು. ಗಣ್ಯರು ಮತ್ತು ಕಲಾ ಪ್ರಿಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.






Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ