ಭಾರತೀಯ ಆಟಗಾರರಿಂದ ಪಾಕ್ ವಿರುದ್ಧದ ಪಂದ್ಯಕ್ಕೆ ಬಹಿಷ್ಕಾರ – ಗ್ರೂಪ್ ಹಂತದ ಪಂದ್ಯವೂ ರದ್ದು
ಈ ಹಿಂದೆ ಹಲವು ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ವಿರುದ್ಧ ಆಟವಾಡುವುದನ್ನು ನಿರಾಕರಿಸಿದ ಹಿನ್ನೆಲೆ, WCL-ನಲ್ಲಿ ಉಭಯ ತಂಡಗಳ ಗ್ರೂಪ್ ಹಂತದ ಪಂದ್ಯವನ್ನು ರದ್ದುಗೊಳಿಸಲೇಬೇಕಾಯಿತು. ಇದರಿಂದಾಗಿ ಸೆಮಿಫೈನಲ್ ಪಂದ್ಯ ನಡೆಯುತ್ತದೆಯೇ ಎಂಬ ಅನುಮಾನಗಳು ಮುತ್ತಳಿವೆ.
EaseMyTrip: ‘ಭಾರತದೊಂದಿಗೆ ನಿಲ್ಲುತ್ತೇವೆ’ – ಪಿಟ್ಟಿಯ ಸ್ಪಷ್ಟ ನಿಲುವು
EaseMyTrip ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ,
"ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶದೊಂದಿಗೆ ಸಂಬಂಧ ಸಾಮಾನ್ಯಗೊಳಿಸಲು ನಾವು ವಿರೋಧಿಸುತ್ತೇವೆ. ಕ್ರೀಡೆಗೂ ಒಂದು ಮಿತಿಯಿದೆ. ರಾಷ್ಟ್ರವೇ ಮೊದಲ ಆದ್ಯತೆ." ಎಂದು ಉಲ್ಲೇಖಿಸಿದೆ.
ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ: ಏಷ್ಯಾಕಪ್ 2025 ಭಾರತ-ಪಾಕ್ ಪಂದ್ಯ ವಿರೋಧ
ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಅವರು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ 2025ರ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವಿರುದ್ಧ ತೀವ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2025 ಏಷ್ಯಾ ಕಪ್: ಭಾರತ - ಪಾಕಿಸ್ತಾನ ಸೆಪ್ಟೆಂಬರ್ 14ಕ್ಕೆ ನಿಗದಿ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಘೋಷಣೆಯ ಪ್ರಕಾರ, 2025ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ 28ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಭಾರತ vs ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ.
A ಗ್ರೂಪ್: ಭಾರತ, ಪಾಕಿಸ್ತಾನ, ಯುಎಇ, ಒಮನ್
B ಗ್ರೂಪ್: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಗ್ ಕಾಂಗ್