LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಸ್ಸಾಂ ಮಾದರಿಯಲ್ಲಿ ದೇಶಾದ್ಯಂತ 'ಬಹುಪತ್ನಿತ್ವ' ನಿಷೇಧ ಮಸೂದೆ ಅಂಗೀಕರಿಸಿ ! - ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ

ಅಸ್ಸಾಂ ಮಾದರಿಯಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತ 'ಬಹುಪತ್ನಿತ್ವನಿಷೇಧ ಮಸೂದೆ ಅಂಗೀಕರಿಸಿ ! - ಹಿಂದೂ ಜನಜಾಗೃತಿ ಸಮಿತಿಯ ಆಗ್ರಹ

ಬೆಂಗಳೂರು : ಅಸ್ಸಾಂ ರಾಜ್ಯವು ‘ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ 2025’ ಅನ್ನು ಅಂಗೀಕರಿಸುವ ಮೂಲಕ ಮಹಿಳೆಯರ ಹಕ್ಕುಗಳು ಮತ್ತು ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯನ್ನು ಇಟ್ಟಿದೆ. ಮೊದಲ ವಿವಾಹದ ಮಾಹಿತಿಯನ್ನು ಮುಚ್ಚಿಟ್ಟು ಎರಡನೇ ಮದುವೆಯಾಗುವವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ, ಹಾಗೆಯೇ ಇದರಲ್ಲಿ ಭಾಗಿಯಾಗುವ ಗ್ರಾಮದ ಮುಖ್ಯಸ್ಥರು, ಖಾಜಿ, ಪೂಜಾರಿ ಹಾಗೂ ಪೋಷಕರಿಗೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ರಿಂದ 1.5 ಲಕ್ಷ ರೂಪಾಯಿಗಳ ದಂಡದಂತಹ ಕಠಿಣ ಕ್ರಮಗಳಿಂದ ಮಹಿಳೆಯರ ಮೇಲಾಗುವ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಶೋಷಣೆಗೆ ಕಡಿವಾಣ ಬೀಳಲಿದೆ.

ದೋಷಿಗಳಿಗೆ ಸರ್ಕಾರಿ ಉದ್ಯೋಗಗಳು, ಯೋಜನೆಗಳ ಲಾಭ ಮತ್ತು ಚುನಾವಣೆಗಳಿಂದ ವಂಚಿತರನ್ನಾಗಿಸುವ ಕಲಂಗಳಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಲಿದೆ, ಹಾಗೂ ಸಂತ್ರಸ್ತ ಮಹಿಳೆಯರಿಗೆ ಪರಿಹಾರ, ಕಾನೂನು ಮತ್ತು ಆರ್ಥಿಕ ನೆರವು ಸಿಗಲಿದೆ. ಈ ಐತಿಹಾಸಿಕ ಕಾನೂನನ್ನು ಜಾರಿಗೆ ತಂದಿದ್ದಕ್ಕಾಗಿ ಅಸ್ಸಾಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರನ್ನು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಭಿನಂದಿಸುತ್ತೇವೆ ಮತ್ತು ಈ ಕಾನೂನನ್ನು ಕರ್ನಾಟಕ ಸೇರಿದಂತೆ ದೇಶಾದ್ಯಂತ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ್ ಗೌಡ ಅವರು ಹೇಳಿದ್ದಾರೆ.

ಟರ್ಕಿ, ಫ್ರಾನ್ಸ್, ಅಮೆರಿಕ, ಜರ್ಮನಿ, ಸ್ವೀಡನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ಜಪಾನ್, ಸ್ಪೇನ್, ಇಟಲಿಯಿಂದ ಹಿಡಿದು ಜಾಗತಿಕ ಮಟ್ಟದಲ್ಲಿ ಸುಮಾರು 130 ರಿಂದ 140 ದೇಶಗಳಲ್ಲಿ ಬಹುಪತ್ನಿತ್ವ (ಪಾಲಿಗೆಮಿ) ವಿವಾಹದ ಮೇಲೆ ಕಠಿಣ ಕಾನೂನು ಅಥವಾ ಸಂಪೂರ್ಣ ನಿಷೇಧವಿದೆ. ಭಾರತದಲ್ಲಿ ಈ ಕಾನೂನು ಇದ್ದರೂ, ಎಲ್ಲಾ ಧರ್ಮಗಳಿಗೆ ಅನ್ವಯಿಸುವುದಿಲ್ಲ. ಆದರೂ ಬಹುಪತ್ನಿತ್ವವು ಮಹಿಳೆಯರ ಸ್ವಾತಂತ್ರ್ಯ ಮತ್ತು ಕುಟುಂಬ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ಇದು ಕೇವಲ ಅಸ್ಸಾಂಗೆ ಸೀಮಿತವಾಗದೆ ಕರ್ನಾಟಕ ಸೇರಿದಂತೆ ಸಂಪೂರ್ಣ ದೇಶಾದ್ಯಂತ ಈ ಕಾನೂನಿನ ಅವಶ್ಯಕತೆಯಿದೆ. ಅಸ್ಸಾಂನಂತಹ ಕಠಿಣ ಕಾನೂನು ದೇಶವ್ಯಾಪಿ ಜಾರಿಯಾದರೆ ಸ್ತ್ರೀ ಸುರಕ್ಷತೆ ಬಲಗೊಳ್ಳುತ್ತದೆ, ಎಂದು ಶ್ರೀ. ಮೋಹನ್ ಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ