
ಇವಳು ಗಂಧರ್ವ ಮಹಾಮಂಡಲದ 5 ಹಂತದ ಪರೀಕ್ಷೆಗಳಲ್ಲಿ ಉತ್ತಮಾಂಕಗಳಿಂದ ತೇರ್ಗಡೆಯಾಗಿರುವುದಲ್ಲದೆ, ಕರ್ನಾಟಕ ಸರ್ಕಾರದ ಜ್ಯೂನಿಯರ್ ಮತ್ತು ಸೀನಿಯರ್ ನೃತ್ಯಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದು ಜಯಶೀಲಳಾಗಿದ್ದಾಳೆ. ಬಿಕಾಂ ಫೈನಲ್ ತರಗತಿಯಲ್ಲಿ ಓದುತ್ತಿರುವ ಗುಣಶ್ರೀ, ಕವಿತಾ ರಚನೆ, ಚಿತ್ರಕಲೆ, ಯೋಗ ಮತ್ತು ಕ್ರೀಡೆಯಲ್ಲೂ ಮುಂದಿದ್ದು, 20 ಸಂಶೋಧನಾ ಪ್ರಬಂಧಗಳನ್ನು ಬರೆದು ಮಂಡಿಸಿರುವ ವೈಶಿಷ್ಟ್ಯ ಪಡೆದಿದ್ದಾಳೆ. ನಾಡಿನಾದ್ಯಂತ ಅನೇಕ ನೃತ್ಯ ಪ್ರದರ್ಶನಗಳನ್ನು ನೀಡಿ ‘ಸಾಧನ ಸಂಗಮ’ ದ ‘ನೃತ್ಯ ನಿಪುಣ’ ತಂಡದ ಭಾಗವಾಗಿರುವ ಗುಣಶ್ರೀ, ಇದೀಗ ‘’ನೃತ್ಯಸುಗುಣ ’’ ಎಂಬ ವಿಶಿಷ್ಟ ಶೀರ್ಷಿಕೆಯಲ್ಲಿ ತನ್ನ ರಂಗಪ್ರವೇಶಕ್ಕೆ ಸಿದ್ಧಗೊಂಡಿದ್ದಾಳೆ. ವಿಜಯನಗರದ ‘ಕಾಸಿಯಾ’ ಸಭಾಂಗಣದಲ್ಲಿ ಇದೇ ತಿಂಗಳ 31 ಭಾನುವಾರ ಬೆಳಗ್ಗೆ 10 ಗಂಟೆಗೆ ತನ್ನ ನರ್ತನ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾಳೆ. ಅತ್ಯುತ್ಸಾಹದಿಂದ ರಂಗಪ್ರವೇಶಕ್ಕೆ ಅಣಿಯಾಗಿರುವ ಗುಣಶ್ರೀಯ ಈ ನೃತ್ಯವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೆ ಸುಸ್ವಾಗತ.