LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹೆಣ್ಣು ಮಕ್ಕಳು ಮತ್ತು ಆಸ್ತಿ

ನಾನು ಕೇಳಪಟ್ಟಂತೆ ಹೆಣ್ಣು ಮಕ್ಕಳಿಗೆ ಮಂಗಳ ದ್ರವ್ಯದ ಜೊತೆಯಲ್ಲಿ ಹಣ ಕೊಡುವುದು ಏಕೆಂದರೆ, ನಾವು ಏನೇ ಕೊಟ್ಟರೂ ಎಷ್ಟೇ ಕೊಟ್ಟರೂ ಏನೋ ಒಂದನ್ನು ಕಡಿಮೆ ಮಾಡಿರುತ್ತೇವೆ, ಹಾಗಾಗಿ ಅದನ್ನು ಸರಿಪಡಿಸಲು ಯಥಾಶಕ್ತಿ ದಕ್ಷಿಣ ಕೊಡುತ್ತೇವೆ. ಹಾಗೆಯೇ ಹೆಣ್ಣುಮಕ್ಕಳಿಗೆ ಕೊಡುವ ಅರಿಶಿಣ ಕುಂಕುಮದ ಬಾಬತು ಹಣ ಅವರಿಗೆ ಕಷ್ಟ ಕಾಲದಲ್ಲಿ ಉಪಯೋಗವಾಗಲಿ ಎಂದು ದೂರಾಲೋಚನೆಯಿಂದ ಕೂಡಿರುತ್ತದೆ.ಹಾಗೆಯೇ ಕೆಲವು ಸಂದರ್ಭಗಳಲ್ಲಿ ಸಹೋದರ ಸಹೋದರಿಯರಿಗೆ ಇರುವ ಸಂಪ್ರದಾಯಗಳು, ಆಚರಣೆಗಳು ಗಂಡು ಮಕ್ಕಳು ತಮ್ಮ ಮನೆಯ ಹೆಣ್ಣು ಮಕ್ಕಳಿಗೆ ನೆರವಾಗುವ ಉದ್ದೇಶವನ್ನು ಇಟ್ಟುಕೊಂಡಿರುತ್ತವೆ. ಹಾಗೆಯೇ ಗಂಡು ಮಕ್ಕಳು ತಮ್ಮ ಪೋಷಕರು ತೀರಿಕೊಂಡ ನಂತರವೂ,ಹೆಣ್ಣು ಮಕ್ಕಳಿಗೆ ಯತಾಶಕ್ತಿ ಸಹಾಯ ಮಾಡುವುದು, ಹಿಂದಿನ ದಿನಗಳಲ್ಲಿ ನಮ್ಮಲ್ಲಿ ಇತ್ತು. ಹಾಗಾಗಿ ಆಸ್ತಿ ಪಾಲು,ಹಂಚಿಕೆ ಮೊದಲಾದವು ಆಗ ನಡೆಯುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಆದರೆ ನಮ್ಮ ಸಂಪ್ರದಾಯಗಳ ಹಿಂದಿನ ಉದ್ದೇಶಗಳು ಬದಲಾಗಿಲ್ಲ. ಹಾಗಾಗಿ ಮಕ್ಕಳೆಲ್ಲರೂ ಸಮಾನವಾಗಿ ಪೋಷಕರನ್ನು ವಯಸ್ಸಾದ ಕಾಲದಲ್ಲಿ ನೋಡಿಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯವಶ್ಯಕವಾಗಿದೆ.

ಈ ಮೇಲಿನ ವಿಷಯದ ಬಗ್ಗೆ ಕೆಲವು ಅಭಿಪ್ರಾಯಗಳು ಹಿಂದೆ ಪಿತ್ರಾರ್ಜಿತ ಆಸ್ತಿಯಲ್ಲಿ ಅಥವಾ ಮಾತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಇರುತ್ತಿರಲಿಲ್ಲ. ಆದರೆ ಈಗ ಕೊಡುತ್ತಿದ್ದಾರೆ. ಈ ಕಾನೂನು ಅಥವಾ ಸಂಪ್ರದಾಯ ಕರಾವಳಿ ಮೂಲದ ಬಂಟರ ಸಮುದಾಯದಿಂದ ಪ್ರೇರಿತವಾದದ್ದು ಎನ್ನುವರು. ಅವರಲ್ಲಿ ಹೆಣ್ಣುಮಕ್ಕಳಿಗೆ ಮನೆಯ ಆಸ್ತಿ ಅಧಿಕಾರ ಸಿಗುತ್ತದೆಯಂತೆ . ನಾನು ಕಂಡಂತೆ ಪ್ರತಿ ಹಿಂದುಗಳು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡದಿದ್ದರೂ ಅರಿಶಿನ ಕುಂಕುಮಕ್ಕೆ ಎಂದು ಏನಾದರೂ ಹಣ,ಒಡವೆ ಅಥವಾ ಇನ್ನೇನಾದರೂ ಉಡುಗೊರೆ ಕೊಡುವ ಸಂಪ್ರದಾಯವಿದೆ.ಬಹಳ ಹಿಂದೆ ಚಿಕ್ಕವಯಸ್ಸಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿರುತ್ತಿದ್ದರು. ಅವರು ದೂರದ ಊರಿನಲ್ಲಿ ನೆಲೆಸಿದ್ದರೆ ಅವರನ್ನು ಭೇಟಿ ಮಾಡುವ ಸಂದರ್ಭಗಳು ಕಡಿಮೆ ಇದ್ದವು . ಹೀಗಾಗಿ ಅವರಿಂದ ಯಾವುದೇ ರೀತಿಯ ಸಹಾಯ, ಸೇವೆ ಪೋಷಕರಿಗೆ ದೊರೆಯುತ್ತಿರಲಿಲ್ಲ. ಹಾಗಾಗಿ ಗಂಡು ಮಕ್ಕಳಿಗೆ ಆಸ್ತಿಯನ್ನು ಹಂಚಿ,ಅವರ ನೆರಳಿನಲ್ಲಿ ಇರುವುದು ರೂಡಿಯಾಗಿತ್ತು. ಆದರೆ ಪ್ರತಿ ಹಬ್ಬ,ಹರಿದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಎಂದೇ ಕೆಲವು ಉಡುಗೊರೆಗಳು ಕೊಡಲ್ಪಡುತ್ತಿದ್ದವು . ಇದನ್ನು ನಾನು ಹಬ್ಬಗಳ ಬಗೆಗೆ ಬರೆಯುವಾಗ ದಾಖಲಿಸಿದ್ದೇನೆ. ನಾನು ಯಾವ ಕಾನೂನು ತಜ್ಞಳೂ ಅಲ್ಲ. ಹಾಗಾಗಿ ಇವೆಲ್ಲ ನನ್ನ ವಯಕ್ತಿಕ ಅಭಿಪ್ರಾಯಗಳು. ಮೇಲೆ ಹೇಳಿದಂತೆ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ಸಾಕಷ್ಟು ಮರ್ಯಾದೆ, ಗೌರವ ಹಾಗೂ ಉಡುಗೊರೆಗಳು ಲಭಿಸುತ್ತಿದ್ದವು. ಹಾಗಾಗಿ ಹಿಂದಿನವರು ಎಂದೂ ಆಸ್ತಿಪಾಲಿಗಾಗಿ ತವರು ಮನೆಯ ಮೇಲೆ ಕೇಸುಗಳನ್ನು ಹಾಕುತ್ತಿರಲಿಲ್ಲ. ಕಾಲಾಂತರದಲ್ಲಿ ಎಲ್ಲವೂ ಬದಲಾಗಿದೆ.ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸಮಾನವಾಗಿ ಆಸ್ತಿಯನ್ನು ತೆಗೆದುಕೊಂಡರೆ, ಅದಕ್ಕೆ ತಕ್ಕಂತೆ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.ಕೆಲಸ ಸಹಿತ ಮಾಡಬೇಕು. ಇದು ನನ್ನ ಅಭಿಪ್ರಾಯ.ಪೋಷಕರ ಬಳಿ ಹಣ ತೆಗೆದುಕೊಂಡು ಅವರನ್ನು ತಿರುಗಿಯೂ ನೋಡದೆ ಇರುವಂತಹ ಸಂದರ್ಭ ಬರಬಾರದು. ನಮ್ಮ ಕೈಲಾದಷ್ಟು ಪೋಷಕರಿಗೆ ಸಹಾಯ ಮಾಡುವ ನಿರ್ಧಾರ ಹೆಣ್ಣು ಮಕ್ಕಳು ಕೂಡ ತೆಗೆದುಕೊಳ್ಳಬೇಕು. ಹಾಗಾದರೆ ಮಾತ್ರ ಅವರು ತೆಗೆದುಕೊಳ್ಳುವ ಪಾಲಿಗೆ ಸರಿಯಾದ ಅರ್ಥ ಸಿಗುತ್ತದೆ. ಹೀಗಾಗಿ ಹೆಣ್ಣುಮಕ್ಕಳು ಗಂಡು ಮಕ್ಕಳಿಗೆ ಕಡಿಮೆ ಇಲ್ಲ ಎಂದು ಒಪ್ಪಬಹುದು. ಇವೆಲ್ಲ ನನ್ನ ವಯಕ್ತಿಕ ಅಭಿಪ್ರಾಯಗಳು.

ರಾಧಿಕಾ ಜಿ.ಎನ್.
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ