ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಜರುಗುತ್ತಿರುವ ಶ್ರೀರಾಮೋತ್ಸವದ ಅಂಗವಾಗಿ ಮಾರ್ಚ್ 21ರಂದು ನೃತ್ಯ ದಿಶಾ ಟ್ರಸ್ಟಿನ ಡಾ|| ದರ್ಶಿನಿ ಮಂಜುನಾಥ್ ಅವರ ನೇತೃತ್ವದಲ್ಲಿ ಅವರ ಹಿರಿಯ ಶಿಷ್ಯರಾದ ಸಹನ, ದೀಪರಾಣಿ, ಉಮಾ, ಸ್ನೇಹ ಹಾಗೂ ದಿಶಾ ಅವರ ಸಹಕಾರದೊಂದಿಗೆ ಸುಮಾರು 60 ವಿದ್ಯಾರ್ಥಿನಿಗಳು ಭರತನಾಟ್ಯ ಮತ್ತು ಜಾನಪದ ನೃತ್ಯ ಪ್ರದರ್ಶಿಸಿ ಶ್ರೀರಾಮರ ಕೃಪೆಗೆ ಪಾತ್ರರಾದರು.