LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಖ್ಯ ನ್ಯಾಯಮೂರ್ತಿ ಬಿ.ಆರ್.‌ಗವಾಯಿ ಗುರಿಯಾಗಿಸಿ ನಡೆಸಿದ ಅಪಚಾರ ದುರದೃಷ್ಟಕರ, ಖಂಡನೀಯ

ನಿನ್ನೆ ಸೋಮವಾರ ದಿನಾಂಕ 06-10-2025 ರಂದು ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.‌ಗವಾಯಿ ರವರನ್ನು ಗುರಿಯಾಗಿಸಿಕೊಂಡು ನಡೆಸಿದ ಅಪಚಾರ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ.

ಇಂತಹ ಅಪಚಾರಗಳು ಸನಾತನ ಮೌಲ್ಯಗಳಿಗೆ ವಿರುದ್ಧವಾಗಿವೆ. ಸನಾತನ ಹಿಂದೂ ಧರ್ಮದಲ್ಲಿ ಈ ತರಹದ ಕೃತ್ಯಗಳಿಗೆ ಎಲ್ಲಿಯೂ ಸಹ ಬೆಲೆ ಇರುವುದಿಲ್ಲ. ಸನಾತನಿಯಾದ ನಾನು ಸಹ ಕೃತ್ಯವನ್ನು ಖಂಡಿಸುತ್ತೇನೆ.

ಭಾರತದ ಮುಖ್ಯ ನ್ಯಾಯಾಧೀಶರು ನ್ಯಾಯದ ಸಂಕೇತವಾಗಿದ್ದು, ಬಹುಶಃ ವಿಶ್ವದ ಅತಿದೊಡ್ಡ ನ್ಯಾಯಾಂಗವನ್ನು ಪ್ರತಿನಿಧಿಸುತ್ತಾರೆ. ಅವರಿಗೆ ತೋರಿಸಿರುವ ಅಗೌರವ ಇಡೀ ಸಂಸ್ಥೆಗೆ ತೋರಿದಂತಾಗುತ್ತದೆ.

ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ನ್ಯಾಯಾಲಯದ ಕಲಾಪಗಳು ನಡೆಯುವಾಗ, ನ್ಯಾಯಾಲಯದಲ್ಲಿ, ನ್ಯಾಯಾಧೀಶರ ಮೇಲೆ ಶೂ ಎಸೆಯುವ ಅಥವಾ ಇನ್ಯಾವುದೇ ರೀತಿಯ ಕೃತ್ಯಗಳನ್ನು ನಡೆಸಿ ನ್ಯಾಯದಾನ ಪ್ರಕ್ರಿಯೆಯನ್ನು ಹತ್ತಿಕ್ಕಲು ಯಾರು ಪ್ರಯತ್ನಿಸಬಾರದು.

ಕೆಲವು ರಾಜಕೀಯ ಪ್ರೇರಿತ ವಕೀಲರುಗಳು, ತಮ್ಮ ಸ್ವಾರ್ಥಕ್ಕಾಗಿ ಈ ಘಟನೆಯನ್ನು ಸನಾತನದ ಧರ್ಮ ಮತ್ತು ಸನಾತನಿಗಳ ಮೇಲೆ ಅಪಪ್ರಚಾರ ಮಾಡುತ್ತಿರುವುದನ್ನು ಈ ಸಂದರ್ಭದಲ್ಲಿ ನಾನು ಖಂಡಿಸುತ್ತೇನೆ ಹಾಗೂ ಇಂತಹ ಸಣ್ಣತನಕ್ಕೆ ಯಾರು ಇಳಿಯಬಾರದು ಎಂದು ಅಗ್ರಹಿಸುತ್ತೇನೆ.

ಸಾವಿರಾರು ವರ್ಷಗಳಿಂದ ವಿಕಸನಗೊಂಡಿರುವ ಸನಾತನ ಧರ್ಮವು ಇಂತಹ ಯಾವುದೇ ಹೇಳಿಕೆಯಿಂದ ಪ್ರಭಾವಿತವಾಗುವುದಿಲ್ಲ.

ಸನಾತನಿಗಳಾದ ಭಾರತದ ಪ್ರಧಾನ ಮಂತ್ರಿಗಳು ಸಹ ಈ ಕೃತ್ಯವನ್ನು ಖಂಡಿಸಿದಲ್ಲದೆ, ಮುಖ್ಯ ನ್ಯಾಯಮೂರ್ತಿಗಳ ಸಂಯಮವನ್ನು ಹೊಗಳಿರುವುದನ್ನು, ಈ ಸಂದರ್ಭದಲ್ಲಿ ನಾನು ಗೌರವಿಸುತ್ತೇನೆ.

ಈಗಾಗಲೇ ಸನಾತನಿಯಾದ, ಭಾರತೀಯ ವಕೀಲರ ಪರಿಷತ್ತಿನ ಅಧ್ಯಕ್ಷರು, ದುಷ್ಕೃತ್ಯ ನಡೆಸಿದ ವಕೀಲನನ್ನು ವೃತ್ತಿಯಿಂದ ತಕ್ಷಣವೇ ಅಮಾನತುಗೊಳಿಸಿ ಕ್ರಮ ಕೈಗೊಂಡಿದ್ದಾರೆ. ಇಂತಹ ತಕ್ಷಣದ ಕ್ರಮ ಜರುಗಿಸಿರುವುದು ಶ್ಲಾಘನೀಯ.

ಸನಾತನಿ ವಕೀಲರುಗಳಾದ ನಾವುಗಳು ಈ ರಾಷ್ಟ್ರದ ಸಂವಿಧಾನ ಮತ್ತು ನ್ಯಾಯಾಂಗದ ರಕ್ಷಣೆಯಲ್ಲದೆ, ಸಾಮರಸ್ಯದ ಬದುಕು, ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿಯಲು  ಮುಂದಾಗಬೇಕು ಎಂದು ಈ ಸಂದರ್ಭದಲ್ಲಿ ವಿನಂತಿಸುತ್ತೇನೆ.

ಹರೀಶ್. ಎಸ್
ವಕೀಲರು-ಸದಸ್ಯರು
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು
9845538833
Author
Veekay News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ಆಮೆಗತಿಯ ಮಾಹಿತಿ ಹಕ್ಕು ಪ್ರಕ್ರಿಯೆ:ಜನಿವಾರ ತೆಗೆಸಿದ ಕೃತ್ಯ 'ಪೆಹಲ್ಗಾಂ' ಮಾದರಿಯ ದಬ್ಬಾಳಿಕೆ:ಆಲ್ ಇಂಡಿಯಾ ಬೃಹತ್ ಬೈಕ್ ಮೆಕ್ಯಾನಿಕ್ ಗಳ ಸಮಾವೇಶ: ಅನಾವರಣಗೊಂಡ ಅತ್ಯಾಧುನಿಕ ತಂತ್ರಜ್ಞಾನ ಬೈಕ್ ಉದ್ಯಮದ ಅಭಿವೃದ್ಧಿ, ತಾಂತ್ರಿಕ ಪ್ರಗತಿ ಹಾಗೂ ಕಾರ್ಮಿಕ ಕಲ್ಯಾಣ ಕುರಿತು ಚರ್ಚೆ*ಕಾರ್ಮಿಕ ದಿನಾಚರಣೆ: ವಾಯ್ಸ್ ಆಫ್ ಸದಾಶಿವನಗರದಿಂದ 170ಪೌರ ಕಾರ್ಮಿಕರಿಗೆ ಸನ್ಮಾನ*ರಂಗಪ್ರವೇಶ — ಕುಮಾರಿ ಲಕ್ಷ್ಮಿ ಅನನ್ಯ ತಾಟವರ್ತಿ"ವಿಶ್ವ ನೃತ್ಯ ದಿನಾಚರಣೆ"ಶ್ರೀ ಶ್ರೀನಿವಾಸ ದೇವರಿಗೆ ಮಹಾಭಿಷೇಕ ಪವಮಾನಪುರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿತ್ಯಾಗರಾಜನಗರ ರಾಯರ ಮಠದಲ್ಲಿ ಶ್ರೀ ನರಸಿಂಹ ಜಯಂತಿಉಗ್ರರ ಕುರಿತ ಪುಸ್ತಕ ಬಿಡುಗಡೆ ಸರ್ಕಾರ ಅವಕಾಶ ನೀಡಬಾರದು: ಪಿ.ಸಿ. ಮೋಹನ್ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ