ಬೆಂಗಳೂರು: ನಕಲಿ ಲೇಬಲ್ ಬಳಸಿ ಬಟ್ಟೆ ತಯಾರಿಸುತ್ತಿದ್ದ ಗಾರ್ಮೆಂಟ್ ಸಂಸ್ಥೆಯ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ವಿದೇಶಿ ಬ್ರಾ÷್ಯಂಡ್‌ಗಳ ಬಟ್ಟೆಗಳನ್ನು ತಯಾರಿಸುತ್ತಿದ್ದುದು ಕಂಡು ಬಂದಿದೆ. ತೋಟದಗುಡ್ಡದಹಳ್ಳಿಯಲ್ಲಿರುವ ಸಂಗಮ್ ಅಪೆರಲ್ಸ್ ಎಂಬ ಗಾರ್ಮೆಂಟ್‌ನಲ್ಲಿ ಈ ದಾಳಿ ನಡೆದಿದ್ದು, ಆಶ್ರಫ್, ಶರ್ಪ್ ಉದ್ದೀನ್ ಮತ್ತು ಸರವಣ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಬರ್ಬೆರಿ ಮತ್ತು ಪೋಲೋ ರಾಲ್ಫ್ ಲಾರೆನ್ ಎಂಬ ಪ್ರಸಿದ್ಧ ಬ್ರಾ÷್ಯಂಡ್‌ಗಳ ನಕಲಿ ಲೇಬಲ್‌ಗಳನ್ನು ಹಾಕಿ ಬಟ್ಟೆಗಳನ್ನು ತಯಾರಿಸುತ್ತಿದ್ದರು. ದಾಳಿಯಲ್ಲಿ ಸುಮಾರು 24 ಸಾವಿರ ನಕಲಿ ಲೇಬಲ್ ಹಾಕಿದ ಬಟ್ಟೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಈ ಪ್ರಕರಣದಲ್ಲಿ ಬ್ರಾ÷್ಯಂಡ್ ಕಂಪನಿಗಳ ಪರವಾಗಿ ಅಧಿಕಾರ ಪಡೆದ ಶ್ರೀನಿವಾಸ್ ಎಂಬವವರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ್ವಯ ಮಾದನಾಯಕನಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿ ಭಾರತೀಯ ಬೌದ್ಧಿಕ ಸ್ವತ್ತು ಹಕ್ಕು (ಕಾಪಿರೈಟ್) ಕಾಯ್ದೆ 2023ರ ಸೆಕ್ಷನ್ 318(4), 51(ಎ), 51(ಬಿ), ಮತ್ತು 65 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.