ಸರ್ಕಾರವು ಒಂದು ಬಿಲಿಯನ್ ಡಾಲರ್ "ಕ್ರಿಯೇಟ್ ಇನ್ ಇಂಡಿಯಾ" ಉತ್ಪಾದನಾ ನಿಧಿಯನ್ನು ಘೋಷಿಸಿದೆ; ಭಾರತೀಯ ಕಂಟೆಂಟ್ ಅನ್ನು ವಿಶ್ವಕ್ಕೆ ಕೊಂಡೊಯ್ಯಲು ನಿಧಿಯನ್ನು ವೃತ್ತಿಪರವಾಗಿ ನಿರ್ವಹಿಸಲಾಗುವುದು ಎಂದು ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಭಾರತದಲ್ಲಿ ಸೃಜನಶೀಲ ಪ್ರತಿಭೆಯನ್ನು ಗುರುತಿಸುವ ಮತ್ತು ಪೋಷಿಸುವ ಗುರಿಯೊಂದಿಗೆ ಮುಂಬೈನ ಗೋರೆಗಾಂವ್ ಚಲನಚಿತ್ರ ನಗರಿಯಲ್ಲಿ ಸ್ಥಾಪಿಸಲಿರುವ ದೇಶದ ಮೊದಲ ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆಗೆ 391 ಕೋಟಿ ರೂ. ಮೀಸಲಿಡಲಾಗಿದೆ.
ಮಾಧ್ಯಮ ಮತ್ತು ಮನರಂಜನಾ ಉದ್ಯಮದಲ್ಲಿ ಚರ್ಚೆ, ಸಹಯೋಗ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ವೇವ್ಸ್ 2025 ಒಂದು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ: ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್
ವೇವ್ಸ್ 2025 ತಾಂತ್ರಿಕ ಪ್ರಗತಿಗಳು ಮತ್ತು ಸಾಮಾಜಿಕ ಪರಿವರ್ತನೆಯಲ್ಲಿ ಮಾಧ್ಯಮದ ವಿಕಸನಗೊಳ್ಳುತ್ತಿರುವ ಪಾತ್ರವನ್ನು ಒತ್ತಿಹೇಳುವ ಆಂದೋಲನವಾಗಿದೆ: ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್
ಜಾಗತಿಕ ಮಾಧ್ಯಮ ಸಂಸ್ಥೆಗಳು ಭಾರತದ ಸೃಜನಶೀಲ ವಲಯದೊಂದಿಗೆ ತೊಡಗಿಸಿಕೊಳ್ಳಲು ವೇವ್ಸ್ ಅನುವು ಮಾಡಿಕೊಡುತ್ತದೆ: ಕೇಂದ್ರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್
ವಾರ್ತಾ ಮತ್ತು ಪ್ರಸಾರ ಸಚಿವಾಲಯವು 'ನವದೆಹಲಿಯಲ್ಲಿ ವಿದೇಶಿ ರಾಯಭಾರಿಗಳು ಮತ್ತು ಹೈಕಮಿಷನರ್ ಗಳಿಗಾಗಿ ವೇವ್ಸ್ 2025 ಕುರಿತು ಅಧಿವೇಶನ'ವನ್ನು ಆಯೋಜಿಸಿದೆ.
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದವು ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಔಟ್ರೀಚ್ ನಲ್ಲಿ ಸಹಯೋಗವನ್ನು ಬಲಪಡಿಸುತ್ತದೆ.