ಹಸಿರು ಜಾಗೃತಿ ಕೃತಿ ಬಿಡುಗಡೆ

VK NEWS
By -
0

ಪರಿಸರ ತಜ್ಞ ಡಾ.ಡಿ.ಪರಮೇಶ್ ನಾಯಕ್ ರಚಿಸಿರುವ, “ಹಸಿರು ಜಾಗೃತಿ- ಭಾರತದಲ್ಲಿ ಪರಿಸರ ಮಾಲಿನ್ಯ ಮತ್ತು ತ್ಯಾಜ್ಯನಿರ್ವಹಣೆ ನಿಯಂತ್ರಿಸಲು ಸಾರ್ವಜನಿಕರ ಭಾಗವಹಿಸುವಿಕೆಗೆ ಸಜ್ಜುಗೊಳಿಸಿ ವರ್ತನೆಯ ಬದಲಾವಣೆ ತರಲು ಹಸಿರು ಆಂದೋಲನ” ಪುಸ್ತಕವನ್ನು  ದಿನೇಶ್ ಗುಂಡುರಾವ್, ಮಾನ್ಯ ಸಚಿವರು, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ,  ಡಾ.ಎ.ಅರ್. ಗೋವಿಂದ ಸ್ವಾಮಿ, ಹಿರಿಯ ರಂಗತಜ್ಞರು ಮತ್ತು ಅದ್ಯಕ್ಷರು, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಪ್ರೊ. ಎಸ್. ಎಂ. ಜಯಕರ, ಮಾನ್ಯ ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ,  ,  ಪ್ರೊ. ಎಂ.ಎಸ್.ರೆಡ್ಡಿ, ಮಲ್ಲಪ್ಪ ಎಸ್ ಅಂಗಡಿ  ಅರ್. ಶ್ರೀಧರ, ಶಿವಕುಮಾರ್ ಬೆಳ್ಳಿತಟ್ಟೆ , ಧರಣೆಶೆ ಬೂಕನಕೆರೆ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಸ್ತುತ ಜ್ವಲಂತ ಸಮಸ್ಯೆ- ಘನತ್ಯಾಜ್ಯ ವಿಲೇವಾರಿ ಮತ್ತು ವಾಯುಮಾಲಿನ್ಯ ತ್ಯಾಜ್ಯ ನಿರ್ವಹಣೆ ಯಲ್ಲಿ ಸಾರ್ವಜನಿಕರ ವರ್ತನೆ ಬದಲಾವಣೆ ಅಗತ್ಯ ಸಾರ್ವಜನಿಕರ ವರ್ತನೆ ಬದಲಾಗದಿದ್ದಲ್ಲಿ ಮುಂದಿನ ಪೀಳಿಗೆಗೆ ಮಾರಕ ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಕೃತಿ ಯಿಂದ ಸ್ಪೋಟಕ ಮಾಹಿತಿ.   ಹಸಿರು ಜಾಗೃತಿ ಕೃತಿಯನ್ನು ಲೋಕಾರ್ಷಣೆ ಮಾಡಿದ ಮಾನ್ಯ ಆರೋಗ್ಯ ಸಚಿವರಾದ ಶ್ರೀ ದಿನೇಶ್‌ ಗುಂಡುರಾವ್‌ ಅವರು ಮಾತನಾಡಿದರು.

ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷರಾದ  ಡಾ. ಎ.ಆರ್.ಗೋವಿಂದಸ್ವಾಮಿ ಅವರು ಮಾತನಾಡಿ, ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಅವರ ಹಸಿರು ಜಾಗೃತಿ ಭಾರತದಲ್ಲಿ ಸಾರ್ವಜನಿಕರ ನಡವಳಿಕೆಯು ತಾಜ್ಯ ನಿರ್ವಹಣೆಯಲ್ಲಿ ಹೀಗೆ ಮುಂದುವರಿದರೆ ಭವಿಷ್ಯದ ಯುವ ಪೀಳಿಗೆಯ ಅಕಾಡೆಮಿ ಭವಿಷ್ಯ ನಾಶವಾಗಲಿದೆ ಎಂಬುದನ್ನು ಬಿಂಬಿಸಿದೆ.  ಅದ್ದರಿಂದ ತ್ಯಾಜ್ಯ ನಿರ್ವಹಣೆ ಯಲ್ಲಿ ಸಾರ್ವಜನಿಕರ ವರ್ತನೆಯಲ್ಲಿ ಬದಲಾವಣೆ ಅಗತ್ಯವಾಗಿದೆ.

ಇದಕ್ಕೆ ಸಂಬಂದಪಟ್ಟ ಇಲಾಖೆಗಳು ತುರ್ತು ಕ್ರಮ ಮತ್ತು ಕಾಳಜಿ ವಹಿಸುವುದು ಅಗತ್ಯ ಹಾಗೂ ಎಲ್ಲಾ ಪಠ್ಯ ಕ್ರಮದಲ್ಲಿ ಅಳವಡಿಸಿ ತ್ಯಾಜ್ಯ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳು ಕಲಿತು ಪಾಲಿಸುವಂತಗಬೇಕು.   ತ್ಯಾಜ್ಯ ನಿರ್ವಹಣೆ ಜ್ವಲಂತ ಸಮಸ್ಯೆ ಆಗಿದ್ದು, ಕ್ರಮವಾಗಿ, ಶಿಸ್ತುಭದ್ದವಾಗಿ ಸಾರ್ವಜನಿಕರು ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ ವಾಗಿದೆ.


ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಗಂಭೀರವಾಗಿ, ಶಿಸ್ತುಭದ್ದವಾಗಿ ಕಾಳಜಿವಹಿಸುತ್ತಾರೆ ಹಾಗೂ ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳಿಗೆ ಗೌರವ ನೀಡುವ ಹಾಗೂ ಸಹಕಾರದಲ್ಲಿ ಸುಧಾರಣೆ ಇದೆ. ಮತ್ತು ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಉನ್ನತವಾದ, ಅರ್ಥಿಕ, ಸಾಮಾಜಿಕ ಭದ್ರತೆ ಮತ್ತು ಸ್ಥಾನಮಾನಗಳು ಕಲ್ಪಿಸಲಾಗಿದೆ ಪೂರಕ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ ಹಾಗಾಗಿ ತ್ಯಾಜ್ಯ ನಿರ್ವಹಣೆಯಲ್ಲಿ ವಿದೇಶಿಯರು ನಮಗಿಂತಲೂ  ಯಶಸ್ವಿ ಆಗಿದ್ದಾರೆ.

ಭಾರತದಲ್ಲಿರುವ ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳಿಗೆ ಹಾಗೂ ಸಪಾಯಿ ಕರ್ಮಚಾರಿಗಳಿಗೆ ಮೂರನೆಯ ದರ್ಜೆಯ ಸಿಬ್ಬಂದಿಯಾಗಿ ಕಾಣುತ್ತೇವೆ ಕನಿಷ್ಟ ಗೌರವವನ್ನು ಸಹ ನಾವು ಕೊಡುವುದಿಲ್ಲ. ಪ್ರತಿ ತಿಂಗಳು ವೇತನಕ್ಕಾಗಿ ಹೊರಾಡುವ ಸ್ಥಿತಿ ಇದೆ. ಇನ್ನು ಸಾರ್ವಜನಿಕರು ತಮ್ಮ ಮನೆಯ ಕಸವನ್ನು ವೈಜ್ಞಾನಿಕವಾಗಿ, ಕ್ರಮಭದ್ದವಾಗಿ ವಿಂಗಡಿಸದೆ ತಮಗೆ ಸಂಬಂದವಿಲ್ಲ ಎಂಬಂತೆ ಕಸವನ್ನು ಬಿದಿಯಲ್ಲೇ ಸುರಿಯುತ್ತಾರೆ ಇಂತಹ ವರ್ತನೆಯನ್ನು ಬದಲಾವಣೆ ಮಾಡಿಕೊಳ್ಳದಿದ್ದರೆ ನೇರವಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಅಂದಕಾರಕ್ಕೆ ತಳ್ಳುತ್ತದೆ. 

 ಇಂತಹ ಸಂದರ್ಭದಲ್ಲಿ ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಅತ್ಯಂತ ಕಾಳಜಿ ವಹಿಸಿ ತಮ್ಮ ಸ್ವಂತ ಕರ್ಚಿನಲ್ಲಿ ಸಂಶೋಧನೆ ಕೈಗೊಂಡು. “ಗ್ರೀನ್‌ ಅವೇಕಿಂಗ್‌ ಮೊಬಲೈಜಿಂಗ್‌ ಪಬ್ಲಿಕ್‌ ವಾರ್‌ ಬಿಹ್ಹಾವಿರಲ್‌ ಛೇಂಜಸ್ ಇನ್‌ ಪಲೂಷನ್‌ ಕಂಟ್ರೋಲ್ ಆಂಡ್‌ ವೆಸ್ಟ್‌ ಮ್ಯಾನೆಜ್‌ ಮೇಂಟ್‌ ಇನ್‌ ಇಂಡಿಯಾ ಕೃತಿ ರಚಿಸಿದ್ದಾರೆ. ಕೃತಿಗೆ ಇಂದು ಅತ್ಯಂತ ಮಹತ್ವ ಇದೆ. ಕಸವಿಂಗಡನೆ ಯಲ್ಲಿ ಸಾರ್ವಜನಿಕರ ವರ್ತನೆ, ನಡವಳಿಕೆ ಯಲ್ಲಿ ಪರಿವರ್ತನೆ ತರುವಂಥಹ ಸಾಮಾಜಿಕ ಜವಾಬ್ದಾರಿಯಿಂದ ಪರಿಸರ ಸಂರಕ್ಷಣೆಗಾಗಿ ಸೇವಕನಂತೆ ತಾವು ರಚಿಸಿರುವ ಕೃತಿಯನ್ನು ““ಹಸಿರು ಜಾಗೃತಿ- ಭಾರತದಲ್ಲಿ ಪರಿಸರ ಮಾಲಿನ್ಯ ಮತ್ತು ತ್ಯಾಜ್ಯನಿರ್ವಹಣೆ  ನಿಯಂತ್ರಿಸಲು ಸಾರ್ವಜನಿಕರ ಭಾಗವಹಿಸುವಿಕೆಗೆ ಸಜ್ಜುಗೊಳಿಸಿ ವರ್ತನೆಯ ಬದಲಾವಣೆ ತರಲು ಹಸಿರು ಆಂದೋಲನ” ಎಂಬ ದೊಡ್ಡ ಹೆಸರು ಕೊಟ್ಟಿದ್ದಾರೆ.

ಈ ಕೃತಿಯನ್ನು ("GREEN AWAKENING: MOBILIZING PUBLIC PARTICIPATION FOR BEHAVIORAL CHANGES IN POLLUTION CONTROL & WASTE MANAGEMENT IN INDIA"). ಎಲ್ಲರಿಗೂ ಉಚಿತವಾಗಿ ನೀಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಜಾಗೃತಿಗಾಗಿ ಮತ್ತು ತ್ಯಾಜ್ಯನಿರ್ವಹಣೆ ಬಗ್ಗೆ ಒಂದು ಪ್ರಮಾಣವನ್ನು ಹೀಗೆ ತೆಗೆದುಕೊಳೋಣ ಇದನ್ನು ಪ್ರಸರಿಸೋಣ ಇದು ನನ್ನ ವ್ಯಯಕ್ತಿಕ ಮನವಿ.

ಪರಿಸರ ಮಾಲಿನ್ಯ ವಸ್ತುವನ್ನು ನಿರ್ಬಂದಿಸುತ್ತೇನೆ.

ಹಾನಿಕಾರಕ ವಸ್ತುಗಳ ಖರೀದಿಯನ್ನು ಕಡಿಮೆಮಾಡುತ್ತೇನೆ.

ಅನಿವಾರ್ಯ ತಾಜ್ಯವನ್ನು ಮರುಬಳಕೆಗೆ ಮತ್ತು ಮರುಪರ್ಯಾಯ ಉದ್ದೇಶಕ್ಕೆ ಬಳಸುತ್ತೇನೆ.

 ತ್ಯಾಜ್ಯ ನಿರ್ವಹಣೆ ಸಿಬ್ಬಂದಿಗಳಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಗೌರವದಿಂದ ಕಾಣುತ್ತೇನೆ.

ತ್ಯಾಜ್ಯ ನಿರ್ವಹಣೆಯಲ್ಲಿ ಮುಂದಿನಪಿಳಿಗೆಗಾಗಿ ಅತ್ಮಸಾಕ್ಷಿಯಿಂದ ಸ್ವಯಂ ಪ್ರೇರಣೆಯಿಂದ ನನ್ನನ್ನು ನಾನು ನನ್ನ ವರ್ತನೆಯಲ್ಲಿ ಪರಿವರ್ತನೆಯನ್ನು ಮಾಡಿಕೊಳ್ಳುತ್ತೇನೆ.

ತಾಜ್ಯ ಸೇನಾನಿ (waste warriors) ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗಳನ್ನು ಗೌರವಿಸುತ್ತೇನೆ.

ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಕೃತಿಯಲ್ಲಿ ನನಗೆ ಅತ್ಯಂತ ಇಷ್ಟವಾದ ಅಂಶವೆಂದರೆ

ತಾಜ್ಯ ವಿಲೇವಾರಿ ಮತ್ತು ವಿಂಗಡಣೆಗೆ ವರ್ತನೆಯ ಬದಲಾವಣೆಗೆ ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಬೇಕೆಂದು ಸುಚಿಸಿರುವುದು. ಇದು ತಳಹಂತದಿಂದಲೆ ಒಂದು ಚಳವಳಿ ರೂಪದಲ್ಲಿ  ಶಿಕ್ಷಕರು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಸರ್ಕಾರಗಳು ಮತ್ತು ನಿರ್ವಹಣಾ ಇಲಾಖೆಗಳು ಆಂದೋಲನವನ್ನು ರೂಪಿಸಬೇಕೆಂದು ಸುಚಿಸಿರುವುದು.

ಪ್ರಕೃತಿ ದತ್ತವಾಗಿರುವ ಅತ್ಯುತ್ತಮವಾದ ಪರಿಸರವನ್ನು ಅದು ಇರುವ ಹಾಗೆಯೆ ಕಾಪಾಡಿಕೊಂಡು ಅಭಿವೃದ್ಧಿ ಪಡಿಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕೆಂದು ಕೃತಿಯಲ್ಲಿ ಲೇಖಕರು ತಿಳಿಸಿರುತ್ತಾರೆ.

ತಾಜ್ಯ ವಿಲೇವಾರಿ ಮತ್ತು ವಿಂಗಡಣೆಗೆ ತಪ್ಪಿತಸ್ಥರಿಗೆ ಕಾನೂನು ಶಿಕ್ಷೆಗೆ ಒಳಪಡಿಸಲು ಸೂಕ್ತವಾದ ಕಾನೂನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ತಿಳಿಸಿರುವುದು ಅಗತ್ಯ ಸಲಹೆಯಾಗಿದೆ.

ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಈ ಕಾರ್ಯ ಯಶಸ್ವಿ ಯಾಗುತ್ತದೆ ವಿನಃ ಕೇವಲ ಸರ್ಕಾರಿ ಇಲಾಖೆಗಳು, ಸರ್ಕಾರದಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಹಾಗಾಗಿ “ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಒಂದೇ ಭರವಸೆ” ಯಾಗಿದೆ.

ಬಡವರು ಮೂಲಭೂತ ಸೌಕರ್ಯದ ಹಾಗೂ ತಿಳುವಳಿಕೆಯ ಕೊರತೆಯಿಂದ ಪ್ಲಾಸ್ಟಿಕನ್ನು ಉರುವಲಾಗಿ (ಸೌದೆಯಾಗಿ) ಬಳಸುತ್ತಿದ್ದಾರೆ. ಇವರಿಗೆ ಕಸ  ವಿಲೇವಾರಿ ಮಾಡುವ ವಿಧಾನದ ತಿಳುವಳಿಕೆ ಇಲ್ಲ.

ಅಭಿವೃದ್ಧಿ ಹೊಂದಿದ ವಿದ್ಯಾವಂತರು ಸಹ ತಿಳುವಳಿಕೆ ಯಿಲ್ಲದ ಬಡವರು ಹಾಕಿದ ಕಸದ ಜಾಗದಲ್ಲಿಯೇ ಇವರು ಕಸ ಸಹ ಸುರಿಯುತ್ತಾರೆ. ವೈಜ್ಞಾನಿಕ ವಾಗಿ ಕಸವಿಲೇವಾರಿ ಮಾಡಲು ಆಲೋಚನೆಗಳನ್ನು ಮಾಡುತ್ತಿಲ್ಲ ತಮ್ಮ ವರ್ತನೆಯಲ್ಲಿ ಸುಧಾರಣೆಯಾಗದಿರುವುದೇ ದೊಡ್ಡಸಮಸ್ಯೆ ಆಗಿದೆ ನಮ್ಮ ದೇಶದಲ್ಲಿ. ಸಿಲಿಕಾನ್ ಸಿಟಿ, ಗ್ರೀನ್ ಸಿಟಿ ಬೆಂಗಳೂರಿನ ಪರಿಸರದ ಮೇಲೆ ವಿಶ್ವದಾದ್ಯಂತ ಬೃಹತ್ ಅರ್ಥಿಕ ಹೂಡಿಕೆ ಅವಲಂಭಿಸಿದೆ. 

ತ್ಯಾಜ್ಯ ನಿರ್ವಹಣೆಗೆ, ಮೂಲಭೂತ ಸೌಕರ್ಯಗಳ ಕೊರತೆ, ಸಿಬ್ಬಂದಿ ಕೊರತೆ, ಮರುಬಳಕೆ, ತಂತ್ರಜ್ಞಾನದ ಕೊರತೆ, ತಾಜ್ಯ ಸಾಗಣೆ ಕೊರತೆ,  ತಾಜ್ಯ ಲ್ಯಾಂಡ್ ಫಿಲ್ ಕೊರತೆ ಮುಂತಾದ ಅಂಶಗಳ ಮೇಲೆ ಬೆಳಕು ಚೆಲ್ಲಿ ಜಾಗೃತಿ ಮೂಡಿಸುವ ಕೃತಿಯಾಗಿಯು ಸಮಾಜಕ್ಕೆ  ಪ್ರಸ್ತುತ ಮತ್ತು ಭವಿಷ್ಯದ  ತ್ಯಾಜ್ಯ ನಿರ್ವಹಣೆಗೆ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು  ಕೃತಿಯ ಲೇಖಕರಾದ ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಸಮಾಜಕ್ಕೆ ಸವಾಲನ್ನು ಒಡ್ಡಿರುವುದು ಅತ್ಯಂತ ಶಾಘನೀಯ ಮತ್ತು ಅಭಿನಂದನಾರ್ಹ ಹಾಗೂ ಸಾಮಾಜಿಕ ಬದ್ದತೆಯ ಕಾರ್ಯವಾಗಿದೆ.

Post a Comment

0Comments

Post a Comment (0)