ಬೆಂಗಳೂರು :ಗಂಗಮ್ಮ ದೇವಿ ಆಂಧ್ರ ಪ್ರದೇಶದ ಪುಣ್ಗನೂರಿನ ಗ್ರಾಮ ದೇವತೆ.ಅಲ್ಲಿನ ಜಮೀನುದಾರರ ಆಳ್ವಿಕೆ ಗಂಗಮ್ಮ ದೇವಿಯು ಕೊಟ್ಟ ನಿಧಿ ಇಂದ ಪ್ರಾರಂಭ ಆಗಿದೆ ಎನ್ನುವ ಕಥೆ ಇದೆ.
ಹಾಗೆಯೇ ಒಮ್ಮೆ ಗಂಗಮ್ಮ ಎನ್ನುವ ಗೊಲ್ಲ ಹೆಣ್ಣು ಮಗಳು ಎಮ್ಮೆ ಅಥವಾ ಕೋಣ ದಿನದ ತಪ್ಪಿಸಿಕೊಳ್ಳಲು ಓಡುತ್ತಿದ್ದಳಂತೆ.ಅವಳನ್ನು ಪುಂಗನೂರುನ ಜನ ರಕ್ಷಿಸಿದರಂತೆ.ಆಗ ಅವಳು ಅಲ್ಲಿಯೆ ನಿನ್ತು ಜನರ ಕನಸಿನಲ್ಲಿ ಬಂದು ತನಗೆ ಗುಡಿ ಕಟ್ಟಿಸಬೇಕೆಂದು ಆಜ್ಞಾಪಿಸಿದಳಂತೆ.ಜನರು ಹಾಗೆಯೇ ಮಾಡಿದರಂತೆ.ಗಂಗಮ್ಮ ದೇವಿಯ ಗುಡಿ ಜಮೀನುದಾರರ ಅರಮನೆಯ ಪಕ್ಕದಲ್ಲಿ ಇದೆ.
ಇಂದಿಗೂ ಅವಳಿಗೆ ಕುರಿ, ಕೋಳಿ, ಕೋಣ ಬಲಿ ನೀಡಲಾಗುತ್ತದೆ.
ಹಬ್ಬದ ನಂತರದ ಮಂಗಳವಾರ ಹಾಗು ಬುಧವಾರ ಈ ದೇವಿ ಜಾತ್ರೆ ಇರುತ್ತದೆ.ಅನ್ದು ದೇವಿಯನ್ನು ಜಮೀನುದಾರರ ಮನೆಯಿಂದ ಗುಡಿಗೆ ತರುವರು.ಅವರದ್ದೇ ಪ್ರಥಮ ಪೂಜೆ.ನಂತರ ರಾತ್ರಿ ಬಲಿ ಕಾರ್ಯಕ್ರಮ ಇರುತ್ತದೆ.
ಮರುದಿನ ಬೆಳಿಗ್ಗೆ ದೇವಿ ದರ್ಶನ ವ್ಯವಸ್ಥೆ ಗುಡಿಯಲ್ಲಿ ಮಾಡುತ್ತಾರೆ.ಪಾನಕ ಪನಿವಾರದ ಅರವಟ್ಟಿಗೆಗಳು ಇರುತ್ತವೆ.
ಈ ದೇವಿ ಜಾತ್ರೆ ನಮ್ಮ ಕರ್ನಾಟಕದ ಕೆಲ ಭಾಗದಲ್ಲಿ ನಡೆಯುವ ಅಮ್ಮನ ಹಬ್ಬ ನೆನಪಿಗೆ ತರುತ್ತದೆ
ಒಮ್ಮೆ ಭಾಗವಹಿಸಿ
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com