ಬೆಂಗಳೂರು ಕಿಡ್ನಿ ಫೌಂಡೇಷನ್ ವತಿಯಿಂದ ಕಿಡ್ನಿ ಆರೋಗ್ಯದ ಕುರಿತು ಜಾಗೃತಿ ಜಾಥ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಶಂಕರ ಕ್ಯಾನ್ಸರ್ ಆಸ್ಪತ್ರೆಯಿಂದ ಜಾಥ ಕಾರ್ಯಕ್ರಮದಲ್ಲಿ ಬೆಂಗಳೂರು ಕಿಡ್ನಿ ಫೌಂಡೇಷನ್ ಅಧ್ಯಕ್ಷರಾದ ಡಾ||ಶ್ರೀರಾಮ್ ರವರು ಚಾಲನೆ ನೀಡಿದರು.
ಸಾವಿರಾರು ಜನರು ಕಿಡ್ನಿ ಸುರಕ್ಷತೆ ಜಾಥದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ *ಡಾ||ಶ್ರೀರಾಮ್ ರವರು* ಮಾತನಾಡಿ ಹೃದಯದಂತೆ ಕಿಡ್ನಿ ಸಹ ಮನುಷ್ಯನಿಗೆ ಬೇಕಾದ ಬಹು ಮುಖ್ಯವಾದ ಅಂಗ.
ಸಕ್ಕರೆ ಪ್ರಮಾಣ ಮತ್ತು ಬಿ.ಪಿ.ಸಮ ಪ್ರಮಾಣದಲ್ಲಿ ಇರಬೇಕು ಮತ್ತು ವಂಶಪಾರಂಪಯ್ಯವಾಗಿ ಕಿಡ್ನಿ ಸಮಸ್ಯೆ ಇರುವವರು ಇರುತ್ತಾರೆ ಪ್ರಥಮ ಹಂತದಲ್ಲಿ ವೈದ್ಯಕೀಯ ಚಿಕಿತ್ಯೆ ಪಡೆಯಬೇಕು.
ಪ್ರತಿಯೊಬ್ಬ ಪ್ರತಿದಿನ ವಾಕಿಂಗ್ ಮತ್ತು ಉತ್ತಮ ಆಹಾರ ಸೇವನೆ ಹಾಗೂ ಚನ್ನಾಗಿ ನಿದ್ರೆ ಮಾಡಬೇಕು.
ಕರೀದ ಪದಾರ್ಥ ಮತ್ತು ರಾಸಯುನಿಕ ಯುತ ಆಹಾರ ಸೇವನೆ, ಧೂಮಪಾನ, ಮದ್ಯಪಾನ ಬೀಡಬೇಕು.
ಆರೋಗ್ಯವಂತ ಕಿಡ್ನಿ ಸುರಕ್ಷತೆ ವೈದ್ಯರು ಹೇಳುವ ಸಲಹೆ ಪಡೆದು ಆರೋಗ್ಯವಂತರಾಗಿ ಇರಿ ಎಂದು ಹೇಳಿದರು.