ಇಂದು ಆಧುನಿಕತೆ ಪ್ರಭಾವದಿಂದ ಮದುವೆ ಸಮಾರಂಭಗಳು 3 ದಿನಕ್ಕೆ ಸೀಮಿತಗೊಂಡಿದೆ: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಧ್ಯಕ್ಷ ಡಾ ಎಆರ್ ಗೋವಿಂದಸ್ವಾಮಿ

VK NEWS
By -
0

 ಬುಡಕಟ್ಟು ಸಮುದಾಯವಾದ ಬಂಜಾರಾ ಸಮಾಜದಲ್ಲಿ ಮದುವೆಯ ಸಂಪ್ರದಾಯ ಮೂರು ತಿಂಗಳ ಕಾಲ ನಡೆಯುತ್ತಿದ್ದವು ಆದರೆ ಇಂದು ಕೇವಲ ಮೂರು ದಿನಗಳ ಕಾಲ ನಡೆಯುತ್ತಿವೆ ಕಾರಣ  ಹಿಂದೆ ಅಲೆಮಾರಿ ಬಂಜಾರ ಹೆಣ್ಣು ಮಕ್ಕಳು ಮದುವೆಯಾದ ನಂತರ ಕುಟುಂಬದ ಎಲ್ಲಾ ಬಾಂಧವ್ಯವನ್ನು ಬಿಟ್ಟು ಗಂಡನ ಮನೆಗೆ ಹಿಂದಿರುಗದೆ ಹೋಗುವ ಕಾರಣ ಮದುವೆ ಸಮಾರಂಭಗಳನ್ನುಧೀರ್ಘ  ಆಚರಣೆಯಾಗಿ ನೆರವೇರಿಸುತ್ತಿದ್ದರು ಅದರ ಹಿನ್ನೆಲೆಯಲ್ಲಿ ನಿರಂತರವಾಗಿ ಮೂರು ತಿಂಗಳುಗಳ ಕಾಲ ಒಂದಲ್ಲ ಒಂದು ಸಾಂಪ್ರದಾಯಿಕ ಆಚರಣೆಗಳನ್ನು ಪಾಲಿಸುತ್ತಿದ್ದರು ಆದರೆ ಇಂದು ಆಧುನಿಕತೆಯ ಪ್ರಭಾವದಿಂದ ಮದುವೆ ಸಮಾರಂಭಗಳು ಕೇವಲ ಮೂರು ದಿನಕ್ಕೆ ಸೀಮಿತಗೊಂಡಿದೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ ಎಆರ್ ಗೋವಿಂದಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು. 




ಇಂದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಹಾಗು ಚಾಮರಾಜನಗರ ಜಿಲ್ಲಾ ಲಂಬಾಣಿ ಶಾಸ್ತ್ರಗಳ ವಿಚಾರ  ಗೋಷ್ಠಿ ಮತ್ತು ಕವಿಗೋಷ್ಠಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡುತ್ತಾ ಬಂಜಾರ ಸಂಸ್ಕೃತಿ ಎಲ್ಲಾ ಜಾಲತಾಣಗಳಲ್ಲಿ ಮತ್ತು ಬಂಜಾರರ ಕಲೆ ಸಾಹಿತ್ಯ ಮೂಡಿಬರಬೇಕು ಹೇಳಿದರು.



 ಅದರ ಜೊತೆಗೆ ಯುಟ್ಯೂಬ್ ನಲ್ಲಿ ಬಂಜಾರರ ಭಾಷೆಯ ಕಲಿಕೆ ಪಾಠ ನಿರಂತರವಾಗಿ ಪ್ರಸಾರವಾಗಲು ಕ್ರಮವಹಿಸಲಾಗುವುದು ಮತ್ತು ವಿಶ್ವಕೋಶ ರಚಿಸಲಾಗುವುದು ಎಂದು ಹೇಳಿದರು, ಬಂಜಾರ ಸಮುದಾಯದಲ್ಲಿ ಮದುವೆಯ ಸಂದರ್ಭದಲ್ಲಿ ಹೆಣ್ಣು ಮಗಳು ತನ್ನ ತವರನ್ನು ಕುರಿತು ಹೇಳುವಂತಹ ವಾಕ್ಯಗಳು ಮನ ಕಲಕುವಂಥವು 



“ತನ್ನ ತಾಯಿ 9 ತಿಂಗಳು ಗರ್ಭದಲ್ಲಿ ಇಟ್ಟು ಒತ್ತು ಎತ್ತು ಸಾಕಿ ಸಲಹಿ ಪ್ರೀತಿಯಿಂದ ತನ್ನ ಜೀವನವನ್ನು ರೂಪಿಸುತ್ತಾಳೆ ತಂದೆ ಮಹಾರಾಣಿಯಂತೆ  ತನಗೆ ಯಾವುದೇ ಕೊರತೆಯಾಗದಂತೆ ತನ್ನ ಇಷ್ಟದಂತೆ ಎಲ್ಲಾ ಬೇಕು ಬೇಡಗಳನ್ನ ಪೂರೈಸುತ್ತಾ ನಮ್ಮ ಜೀವನವನ್ನು ರೂಪಿಸುತ್ತಾರೆ ಇಂತಹ ಸಂದರ್ಭದಲ್ಲಿ ಈ ಬಾಂಧವ್ಯವನ್ನು ಬಿಟ್ಟು ಗಂಡನ ಮನೆಗೆ ಹೋಗುವಂತಹ ಸಂದರ್ಭದಲ್ಲಿ ತನ್ನ ಮನದಾಳದ ಅಳಲನ್ನು ತೋಡಿಕೊಳ್ಳುವಂತಹ ಒಂದು ಪದ್ಧತಿ ಢವಲೋ ಇದ್ದು ಇದು ಎಲ್ಲಾ ಬಂಜಾರ ಸಮುದಾಯದ ಹೆಣ್ಣು ಮಕ್ಕಳು ಮದುವೆ ಸಂದರ್ಭದಲ್ಲಿ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಸಂದರ್ಭದಲ್ಲಿ  ನೋವನ್ನು ವ್ಯಕ್ತಪಡಿಸುವಂತಹ ರೀತಿಯ ಒಂದು ಪದ್ಧತಿಯಾಗಿದೆ.      

 ಹಾಗೆ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ಕೈಗೊಂಡುತ್ತಿರುವಂತಹ  ಕಾರ್ಯಕ್ರಮಗಳು ರೂಪರೇಷೆಗಳನನ್ನು ತಿಳಿಸುತ್ತಾ ಪ್ರಸ್ತುತ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಬಂಜಾರ  ಬಂಜಾರ ವಿಶ್ವಕೋಶವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಹಾಗೂ ಬಂಜಾರ ಸಂಸ್ಕೃತಿ ಮತ್ತು ಆಚಾರ ವಿಚಾರಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ಮಾಡುವಂತಹ ಸಂಶೋಧಕರಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ಅಕಾಡೆಮಿ ನೀಡುತ್ತಾ ಬಂದಿದೆ ಇದರ ಜೊತೆಗೆ ರಾಜ್ಯದಲ್ಲಿ ಸುಮಾರು 12 ವಿಶ್ವವಿದ್ಯಾಲಯಗಳಲ್ಲಿ ವಿಚಾರಗೋಷ್ಠಿಗಳು ನಡೆದಿದ್ದು ಸಂಸ್ಕೃತಿ ಮತ್ತು ಆಚಾರ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರವಾದ ಕಾರ್ಯ ಚಟುವಟಿಕೆಯನ್ನು ತೊಡಗಿಸಿಕೊಂಡು ಬರುತ್ತಿದೆ. ಇದರ ಜೊತೆಗೆ ಬಂಜಾರ ಕಸೂತಿ ತರಬೇತಿ,  ಬಂಜಾರ ಆಭರಣಗಳ ತಯಾರಿಕಾ ಕಾರ್ಯಗಾರ, ನಾಟಕ ರಚನಾ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಬಂಜಾರರ ಹಬ್ಬ ಹರಿದಿನ ಆಚಾರ ವಿಚಾರ ಆಚರಣೆ ಮೂಲಕ ಸಾಹಿತ್ಯ ಕಲೆ ಸಾಂಸ್ಕೃತಿಕ ಸಾಂಸ್ಕೃತಿಕತೆಯನ್ನ ಸಾರುವ ನಾಟಕಗಳ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಬಂಜಾರ ಸಂಸ್ಕೃತಿ ಮತ್ತು ಭಾಷೆಗೆ ಸಂಬಂಧಿಸಿದಂತಹ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಯೋಜನೆಯನ್ನು ಸಿದ್ಧಪಡಿಸಲಾಗಿದೆ,  ಬಂಜಾರ ಸಮುದಾಯದ ಇತಿಹಾಸವನ್ನು ಹುಡುಕುತ್ತಾ ಹೋದಂಗೆಲ್ಲ ಬಂಜಾರರು ಬುದ್ಧ ಹಾಗೂ ಯೇಸುವಿನ ಕಾಲದಿಂದಲೂ  ಇರುವಂತಹ ಒಂದು ಸಮುದಾಯವಾಗಿದ್ದು ವಿಶ್ವದ 116 ರಾಷ್ಟ್ರಗಳಲ್ಲಿ ಬಂಜಾರ ಸಮುದಾಯದ ಜನರು ನೆಲೆ ನಿಂತಿದ್ದಾರೆ ಅದೇ ರೀತಿ ಚಾರ್ಲಿ ಚಾಪ್ಟರ್ ಅವರು ಕೂಡ ಬಂಜಾರ ಸಮುದಾಯಕ್ಕೆ ಸೇರಿದವರಾಗಿದ್ದು ಅದು ಬಂಜಾರ ಸಮುದಾಯದ ಹೆಮ್ಮೆಯ ವಿಷಯ, ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಸಮ್ಮೇಳನ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ವತಿಯಿಂದ ಆಯೋಜಿಸಲು ಸಿದ್ಧತೆ ಕೈಗೊಂಡಿದ್ದು ಈ ನಿಟ್ಟಿನಲ್ಲಿ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ನೆಲೆ ನಿಂತಿರುವ ಬಂಜಾರ ವಿದ್ವಾಂಸರು ಸಾಹಿತಿಗಳು ಪ್ರಾಧ್ಯಾಪಕರನ್ನು ಸಂಪರ್ಕಿಸುವಂತಹ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.                                      ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದ ಚಂದ್ರಶೇಖರ್ ಅವರು ಬಂಜಾರರ ಐತಿಹಾಸಿಕ ಮಾನ್ಯತೆ ಬಂಜಾರರಿಗೆ ಐತಿಹಾಸಿಕ ಮಾನ್ಯತೆ ಇದ್ದು ಇಡೀ ವಿಶ್ವದಲ್ಲಿ ಬಂಜಾರ ಸಮುದಾಯ ಕಡಿಮೆ ಸಮಾರಂಭಗಳನ್ನು ನಡೆಸುತ್ತಾ ಬರುತ್ತಿದೆ ಎಂದು ತಿಳಿಸಿದರು ಬಂಜಾರ ಸಮಾರಂಭಗಳಲ್ಲಿ ಇರುವಂತಹ ಅಳು ನಗು ಊಟ ನೆಂಟರು ಹೇಗೆ ಭಾಗವಹಿಸುತ್ತಾರೆ ಎಂದು ಬಂಜಾರರ ಸಂಸ್ಕೃತಿಯನ್ನು ಆಳವಾಗಿ ವಿವರಿಸಿದರು ,            ಚಾಮನಗರ ಚಾಮರಾಜನಗರ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದಂತಹ ಶ್ರೀ ಹಿರಲಾಯಲ್ ಅವರು ಮಾತನಾಡಿ ಬಂಜಾರರು ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿರುವಂತಹ ಜನಾಂಗವಾಗಿದ್ದು ಇವರ ಭಾಷೆ ಆಚಾರ-ವಿಚಾರಗಳು ವಿಶ್ವದಾದ್ಯಂತ ಮಾನ್ಯತೆಯನ್ನ ಪಡೆದುಕೊಂಡಿದೆ ಎಂದರು.                          ಕಾರ್ಯಕ್ರಮದ, ಅಂತರಾಷ್ಟ್ರೀಯ ಜಾನಪದ ಕಲಾವಿದರದಂತಹ  ಸಿಎಂ ನರಸಿಂಹಮೂರ್ತಿ ಅವರು ಮಾತನಾಡಿ ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರು. ಮಲೆ ಮಹದೇಶ್ವರ ಮಂಟೇಸ್ವಾಮಿ ನೆಲೆಸಿರುವ ಪುಣ್ಯ ಭೂಮಿ. ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬಂಜಾರ ಸಮುದಾಯದವರ ಬಗ್ಗೆ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿರುವುದು ಅಭಿನಂದನಿಯ..ಬಂಜಾರ ಸಮುದಾಯದವರು ಸುಮಾರು ಹದಿನೆಂಟು ಸಾವಿರ ಜನರಿದ್ದು ಇವರು ಬಂಜಾರ ಸಂಸ್ಕೃತಿ ಮತ್ತು ಭಾಷೆ ಉಳಿಸುವ ಕಾರ್ಯಗಳನ್ನು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.  ಅಧ್ಯಕ್ಷತೆಯನ್ನು ವಹಿಸಿದಂತಹ ನಾಡಿನ ಹಿರಿಯ ಸಾಹಿತಿಗಳು ಮಾಜಿ ಮಂತ್ರಿಗಳು ಮಾಜಿ ಶಾಸಕರಾದಂತಹ ಡಾಕ್ಟರ್ ಬಿ ಟಿ ಲಲಿತಾ ನಾಯಕ್ ಅವರು ಮಾತನಾಡಿ ಕಾಲದಿಂದ ಕಾಲಕ್ಕೆ ಜನರು ತಮ್ಮ ಸಂಸ್ಕೃತಿ ಆಚಾರ ವಿಚಾರಗಳನ್ನು ಸಂಸ್ಕರಿಸುತ್ತ ಬದುಕಬೇಕು ಎಂದರು ಇಂದು ಸಮಾಜದಲ್ಲಿ ಬಹಳಷ್ಟು ಬಡ ಕುಟುಂಬಗಳು ಬದುವಾಸಿಸುತ್ತಿದ್ದು ಅವರು ತಮ್ಮ ಮದುವೆ ಮುಂಜಿ ಕಾರ್ಯಕ್ರಮಗಿಗೋಸ್ಕರ ತಮ್ಮ ಹೊಲ ಮನೆಗಳನ್ನ ಮಾರಿಕೊಳ್ಳುವಂತಹ ಒಡವೆಗಳನ್ನು ಮಾರಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ ಆ ಕಾರಣಕ್ಕೆ ವಿಜ್ರಂಭಣೆಯಿಂದ ನೆರವೇರಿಸಿದಂತಹ ಮದುವೆ ಸಮಾರಂಭಗಳ ಬದಲಾಗಿ ಸರಳ ವಿವಾಹ ಹಾಗೂ ಸರಳ ಕಾರ್ಯಕ್ರಮಗಳನ್ನ ಮೇಗೂಡಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಾ ಹೋದಂಗೆಲ್ಲ ಅವರು ಆ ಕುಟುಂಬಗಳು ಆಗುತ್ತದೆ ಎಂದು ತಿಳಿಸಿದರು ಸಮಾಜ ಎಂದು ಯುದ್ಧ ಗಾಂಧಿ ಗಾಂಧಿ ಬಸವಣ್ಣ ಅಂಬೇಡ್ಕರ್ ಸೇವಾಲಾಲ್ ಇವರುಗಳ ಬದುಕನ್ನ ನೆನೆಯುತ್ತಾ ಕೇವಲ ಮಾಲಾರ್ಪಣೆ ಪುಷ್ಪಾರ್ಪಣೆಗೆ ಮಾತ್ರ ಸೀಮಿತಗೊಳಿಸದೆ ಈ ಮಹನೀಯರ ದಾರ್ಶನಿಕರ ಆಚಾರ ವಿಚಾರಗಳನ್ನು ತಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದರು.                    ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಅಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಂತಹ ಪ್ರತಿಭಾನ್ವಿತ ವಿದ್ಯಾರ್ಥಿನಿಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಕಾರ್ಯಕ್ರಮ ಸಂಯೋಜನೆ ಅಧಿಕಾರಿ         ,  ಡಾ  ಪಳನಿ ಸ್ವಾಮಿ  ಬಂಜಾರ ಸಂಸ್ಕೃತಿ ಮತ್ತು ಭಾಷಾ  ಸದಸ್ಯರಾದಂತಹ ಡಾ ಉತ್ತಮ್ ಕೆ ಹೆಚ್, ಸಂಪನ್ಮೂಲ ವ್ಯಕ್ತಿಗಳಾದಂತಹ ಶ್ರೀ ರವಿ ನಾಯಕ್ ಚೌಹಾಣ್ ಪ್ರೊಫೆಸರ್ ಚಂದ್ರಶೇಖರ್ ಶ್ರೀ ಸುದೀತಾ ಗಟ್ಟಿ ಮಂದೇಲಾ ಶ್ರೀಮತಿ ಚಂದ್ರಕಲಾಭಾಯಿ ಶ್ರೀ ಎಂ ಶಾಂತರಾಜು ಸಿಎಂ ಸುಂದರ್ ಶ್ರೀ ಕೆ ಶಾಂತಕುಮಾರ್ ಶ್ರೀ ಕೃಷ್ಣ ನಾಯಕ್ ನರಸಿಂಹಮೂರ್ತಿ ಶ್ರೀ ಜಗದೀಶ್ ನಾಯಕ್ ಸಿವಾಜಿ ನಾಯಕ್ ಶ್ರೀ ಚಂದ್ರಪ್ರಕಾಶ್ ಮೇಘ ಶ್ರೀ ಬಾಲು ನಾಯಕ್ ಶ್ರೀರಾಮ್ ನಾಯಕ್ ಉಪಸ್ಥಿತರಿದ್ದರು

Post a Comment

0Comments

Post a Comment (0)