ಬೆಂಗಳೂರು : ಭಾರತೀಯ ಗುರು ಪಾರಂಪರಿಕ ವೈದ್ಯ ಪರಿಷತ್, ಬೆಂಗಳೂರು (ರಿ) ವತಿಯಿಂದ ನಗರದ ಗಾಣಿಗರಹಳ್ಳಿಯಲ್ಲಿ, ಉತ್ತರಖಂಡದ ಹರಿದ್ವಾರದಿಂದ ಆಗಮಿಸಿರುವ ಶ್ರೀ ಬಾಬಾ ಬನಖಂಡಿ ಮಹಾರಾಜ್ ಅವರ ಶಿಷ್ಯವೃಂದ ಹಾಗೂ ಅನುಯಾಯಿಗಳಿಂದ 'ಗುರು ಪೂರ್ಣಿಮಾ' ಅಂಗವಾಗಿ ಭಾನುವಾರದಂದು ಗುರು ವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಲೋಕ ಕಲ್ಯಾಣಾರ್ಥವಾಗಿ ಗಣ ಹೋಮ ಹಾಗೂ ಮೃತ್ಯುಂಜಯ ಹೋಮಗಳನ್ನು ಏರ್ಪಡಿಸಲಾಗಿತ್ತು. ಪಾರಂಪರಿಕ ವೈದ್ಯಪರಿಷತ್ ನ ಅಧ್ಯಕ್ಷರಾದ ಡಿ.ಜಿ.ರವಿಕುಮಾರ್, ಆರ್. ದಿನಕರ ಚಿತ್ರದುರ್ಗರವರ ನೇತೃತ್ವದಲ್ಲಿ ಬಾಬಾ ಶ್ರೀ ಬನಕಂಡಿ ಮಹಾರಾಜ್ ಹಾಗೂ ಶ್ರೀ ಯೋಗಿ ಚಂದ್ರಶೇಖರ ಗುರೂಜಿರವರುಗಳಿಗೆ ಅಪಾರ ಸಂಖ್ಯೆಯ ಶಿಷ್ಯವೃಂದದವರಿಂದ ಪಾದ ಪೂಜೆ ನೆರವೇರಿಸಲಾಯಿತು. ಭವಾನಿಶಂಕರ್ ರಾಜು, ಸಂಜಯ ರಾಜು, ಮಂಜುನಾಥ್ ಮುಂತಾದವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ದೂರದ ಊರುಗಳಿಂದ ಹಾಗೂ ನಗರದ ನಾನಾ ಭಾಗಗಳಿಂದ ಆಗಮಿಸಿದ್ದ ಅನುಯಾಯಿಗಳು ಹಾಗೂ ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಅನ್ನ ದಾಸೋಹವನ್ನು ಸಹ ಕಲ್ಪಿಸಲಾಗಿತ್ತು.