ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತ ಡಾ.ಹೆಚ್.ಸಿ.ಸತ್ಯನ್ ಅವರಿಗೆ ಅಭಿನಂದನೆ --ಮಲ್ಲಿಕಾರ್ಜುನ ರಾಜು

VK NEWS
By -
0

 ಕೆಲವು ವರ್ಷಗಳ ಹಿಂದೆ ಮಾಹಿತಿ ಆಯೋಗವು ಮಾಹಿತಿ ಆಯೋಗದ ಕಚೇರಿ ಆವರಣದಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರ ಸಭೆಗಳನ್ನು ನಿರಂತರವಾಗಿ ಏರ್ಪಡಿಸಿ ಮಾಹಿತಿ ಹಕ್ಕು ಕುರಿತಂತೆ ಚರ್ಚೆಗಳನ್ನು ನಡೆಸಿ ಮಾಹಿತಿ ಹಕ್ಕು ಕಾಯ್ದೆಗೆ ಬಲತುಂಬುವ ಪ್ರಯತ್ನಗಳನ್ನು ನಿರಂತರವಾಗಿ ಮಾಡಿಕೊಂಡು ಬಂದಿರುತ್ತದೆ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರು ಅನುಭವಿಸುವ ಕಷ್ಟ ನಷ್ಟಗಳ ಬಗ್ಗೆ, ಎದುರಿಸುವ ಜೀವಬೆದರಿಕೆಗಳ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರಿಂದ ತಿಳಿದುಕೊಂಡು ಅವರಿಗೆ ಧೈರ್ಯವನ್ನು ತುಂಬುವ ಎಲ್ಲ ಪ್ರಯತ್ನಗಳನ್ನು ಮಾಡಿಕೊಂಡು ಬಂದಿರುತ್ತದೆ.


ಕಾನೂನಿನ ಚೌಕಟ್ಟಿನಲ್ಲಿ ಎಲ್ಲ ಬೆಂಬಲವನ್ನು ನೀಡಿರುತ್ತದೆ. ಆದರೆ ಸುಮಾರು ನಾಲ್ಕೈದು ವರ್ಷಗಳಿಂದ  ಯಾವುದೇ ಸಭೆಗಳನ್ನು ಏರ್ಪಡಿಸದೆ ಇರುವುದು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಬೇಸರ ತಂದಿರುವ ಸಂಗತಿ. ಈ ಹಿಂದೆ ಮಾಹಿತಿ ಆಯೋಗ, ಸರ್ಕಾರದ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಮಾಹಿತಿ ಹಕ್ಕು ಕಾರ್ಯಕರ್ತರು ಎಲ್ಲರನ್ನು ಒಳಗೊಂಡ ಮಾಹಿತಿ ಹಕ್ಕು ಕುರಿತಂತೆ ವಿಧಾನಸೌಧದ ಹಾಲಿನಲ್ಲಿ ಒಂದು ಮಾಹಿತಿ ಹಕ್ಕು ಕುರಿತಾದ ಕಾರ್ಯಗಾರವನ್ನು ವಿಜಯವಂತವಾಗಿ ಏರ್ಪಡಿಸಿದ್ದು ಇನ್ನು ಎಲ್ಲರ ಕಣ್ಣುಮುಂದಿದೆ  ಎಲ್ಲರಿಗೂ ಆನಂದ ತಂದಿರುತ್ತದೆ.

ಹಾಗಾಗಿ ಈ ಎಲ್ಲ ವಿಷಯಗಳನ್ನು ರಾಜ್ಯ ಮಾಹಿತಿ ಆಯೋಗದ ಗಮನಕ್ಕೆ ತರುವ ಸಲುವಾಗಿ ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ನಿಯೋಗವು ರಾಜ್ಯ  ಮಾಹಿತಿ ಆಯೋಗದ ಕಚೇರಿಗೆ ಭೇಟಿ ನೀಡಿದ್ದು,  ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮುಖ್ಯ ಮಾಹಿತಿ ಆಯುಕ್ತರಾಗಿ (ಪ್ರಭಾರ) ನೇಮಕಗೊಂಡಿರುವ ಡಾ.ಹೆಚ್.ಸಿ.ಸತ್ಯನ್ ಅವರಿಗೆ ರಾಜ್ಯದ ಎಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ  ನಿಯೋಗವು ನಂತರ ಮನವಿಯನ್ನು ಸಲ್ಲಿಸಿ ಮಾಹಿತಿ ಆಯೋಗ, ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ಸಮಾಜ ಸೇವಕರು ಇನ್ನು ಇತರರು ಸೇರಿದಂತೆ ಒಂದು ಸಭೆಯನ್ನು ಏರ್ಪಡಿಸುವ ಮೂಲಕ ಹಳವು ಮಾಹಿತಿ ಹಕ್ಕು ಕಾರ್ಯಕರ್ತರನ್ನು ಹತ್ಯೆ ಮಾಡುವ ಮೂಲಕ, ಹಲ್ಲೆ ಮಾಡುವ ಮೂಲಕ ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲ ಮಾಡಲು ಪ್ರಯತ್ನಿಸಿರುವ /  ಪ್ರಯತ್ನಿಸುತ್ತಿರುವ ಕೆಲವರ ದುರುದ್ದೇಶಗಳನ್ನು ತಡೆಯಬೇಕೆಂದು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ಮಾಹಿತಿ ಆಯೋಗಕ್ಕೆ ಮನವಿಯನ್ನು ಸಲ್ಲಿಸಿರುತ್ತದೆ.

 ಈ ಸಂದರ್ಭದಲ್ಲಿ ಹಿರಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀಯುತ ವೀರೇಶ್, ಶ್ರೀಯುತ ಕೋವಿ ನಾಗೇಶ್ವರರಾವ್ ( ಬಾಬು), ಶ್ರೀಯುತ ನರಸಿಂಹಮೂರ್ತಿ, ವಕೀಲರಾದ ಸುಧಾಕಟ್ವ, ಮಲ್ಲಿಕಾರ್ಜುನ ರಾಜು, ರಾಜೇಶ್ವರಿ ವಾಹಿನಿ ಪತ್ರಿಕೆ ಸಂಪಾದಕರಾದ ಶ್ರೀಯುತ ಡೆಲ್ಲಿ ಬಾಬು, ಸಾಮಾಜಿಕ ಕಾರ್ಯಕರ್ತರಾದ ವೆಂಕಟೇಶ್ ಮೂರ್ತಿ ಹಾಗೂ ಇತರರು ಹಾಜರಿದ್ದರು.

ಕರ್ನಾಟಕ ರಾಜ್ಯ ಮಾಹಿತಿ ಆಯೋಗದ  ಮುಖ್ಯ ಮಾಹಿತಿ ಆಯುಕ್ತರಾಗಿ ( ಪ್ರಭಾರ)  ನೇಮಕಗೊಂಡಿರುವ ಡಾ.ಹೆಚ್.ಸಿ.ಸತ್ಯನ್  ಅವರಿಗೆ ರಾಜ್ಯದ ಎಲ್ಲಾ ಮಾಹಿತಿ ಹಕ್ಕು ಕಾರ್ಯಕರ್ತರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.

-ಮಲ್ಲಿಕಾರ್ಜುನ ರಾಜು

Post a Comment

0Comments

Post a Comment (0)