ಲೋಕಸಭಾ ಚುನಾವಣೆ ವೇಳೆ ಐಟಿ ಇಲಾಖೆ ವಶಪಡಿಸಿಕೊಂಡ ಹಣವೆಷ್ಟು ಗೊತ್ತಾ?

VK NEWS
By -
0

 


ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಆದಾಯ ತೆರಿಗೆ ಇಲಾಖೆಯು ಮೇ30 ರವರೆಗೆ ₹1,100 ಕೋಟಿ ನಗದು ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಮೂಲಗಳ ಪ್ರಕಾರ, 2019ರ ಚುನಾವಣೆಯಲ್ಲಿ  ₹390 ಕೋಟಿ ಹಣ ಜಪ್ತಿ ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 182ರಷ್ಟು ಹೆಚ್ಚಾಗಿದೆ.

ವಶಪಡಿಸಿಕೊಂಡ ವಸ್ತುಗಳ ಪ್ರಮಾಣದಲ್ಲಿ ದೆಹಲಿ ಮತ್ತು ಕರ್ನಾಟಕ ಅಗ್ರಸ್ಥಾನದಲ್ಲಿದೆ. ಎರಡೂ ಕಡೆ ₹200 ಕೋಟಿಗೂ ಹೆಚ್ಚು ಮೌಲ್ಯದ ನಗದು ಮತ್ತು ಆಭರಣಗಳನ್ನು ದೊರೆತಿವೆ.

ತಮಿಳುನಾಡಿನಲ್ಲಿ ₹150 ಕೋಟಿ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದ್ದು ಎರಡನೇ ಸ್ಥಾನದಲ್ಲಿದೆ. ಉಳಿದಂತೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾದಲ್ಲಿ ₹100 ಕೋಟಿಗೂ ಹೆಚ್ಚು ಮೌಲ್ಯದ ನಗದು ಮತ್ತು ಆಭರಣಗಳು ದೊರೆತಿವೆ. 

ಮಾರ್ಚ್ 16 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅಂದಿನಿಂದ, ಆದಾಯ ತೆರಿಗೆ ಇಲಾಖೆಯು ಮತದಾರರ ಮೇಲೆ ಪ್ರಭಾವ ಬೀರಬಹುದಾದ ಲೆಕ್ಕಕ್ಕೆ ಸಿಗದ ನಗದು ಮತ್ತು ವಸ್ತುಗಳನ್ನು ಪತ್ತೆಹಚ್ಚಿ ಜಪ್ತಿ ಮಾಡುತ್ತಿದೆ.

Post a Comment

0Comments

Post a Comment (0)